ರಾಧಿಕಾಗೆ ಮಾತ್ರವಲ್ಲ, ಬೇರೆ 8 ನಟಿಯರಿಗೂ ಲಕ್ಷಾಂತರ ಹಣ ಕೊಟ್ಟಿದ್ದ ಯುವರಾಜ್​!

radhika and yuvaraj case
Published on

ಬೆಂಗಳೂರು: ಕೋಟ್ಯಂತರ ರೂಪಾಯಿ ವಂಚನೆ ಆರೋಪದಡಿ ಬಂಧಿತನಾಗಿರುವ ಯುವರಾಜನ ಪ್ರಕರಣದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಹೆಸರು ಕೇಳಿಬಂದ ಬೆನ್ನಲ್ಲೇ ಸ್ಯಾಂಡಲ್​ವುಡ್​ನ ಮತ್ತಷ್ಟು ನಟಿಮಣಿಯರಿಗೆ ಟೆನ್ಷನ್​ ಶುರುವಾಗಿದೆ ಎಂದು ಮೂಲಗಳು ತಿಳಿಸಿವೆ.

ನನಗೂ ಯುವರಾಜನಿಗೂ ಸಿನಿಮಾ ಹೊರೆತಾಗಿ ಬೇರಾವ ಸಂಬಂಧವೂ ಇಲ್ಲ. ಯುವರಾಜ್​ದು ವೈಷ್ಣವಿ ಹೆಸರಿನ ಪ್ರೊಡಕ್ಷನ್ ಹೌಸ್ ಇದೆ. ಅದೇ ಬ್ಯಾನರ್​ನಲ್ಲಿ ಐತಿಹಾಸಿಕ ಸಿನೆಮಾ ಮಾಡಲು ನಮಗೆ ಹೇಳಿದ್ದರು. ನಾಟ್ಯ ರಾಣಿ ಶಾಕುಂತಲ ಸಿನಿಮಾ ಮಾಡಲು ನಾನು ಒಪ್ಪಿದ್ದೆ. ಅದೇ ಸಿನೆಮಾ ವಿಚಾರಕ್ಕೆ 16 ಲಕ್ಷ ನನಗೆ ಅಡ್ವಾನ್ಸ್ ಮಾಡಿದ್ರು. ಬೇರೆ ಪ್ರೊಡ್ಯುಸರ್ ಮೂಲಕ 60 ಲಕ್ಷ ರೂಪಾಯಿ ಹಾಕಿಸಿದ್ದರು. ಒಟ್ಟು 76 ಲಕ್ಷ ಹಣ ಸೇರಿದೆ ಎಂದು ರಾಧಿಕಾ ಕುಮಾರಸ್ವಾಮಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದರು. ರಾಧಿಕಾ ಕುಮಾರಸ್ವಾಮಿ ಅಲ್ಲದೆ ಬೇರೆ ಬೇರೆ ನಟಿಯರಿಗೂ ವಂಚಕ ಯುವರಾಜ್ ದುಡ್ಡು ಕೊಟ್ಟಿದ್ದಾನೆ ಎನ್ನುತ್ತಿದೆ ಸಿಸಿಬಿ! ಹಾಗಾದ್ರೆ ಆ ನಟಿಯರು ಯಾರು ಗೊತ್ತಾ? ಇದನ್ನೂ ಓದಿರಿ ನಿನ್ ಹೆಂಡ್ತಿಗೆ ಸೀರೆ ತರಲು ಹೋಗಿದ್ಯಾ? ರಾಸ್ಕಲ್​…: ಅಧಿಕಾರಿಗಳ ವಿರುದ್ಧ ನಾಲಿಗೆ ಹರಿಯಬಿಟ್ಟ ಮಾಧುಸ್ವಾಮಿ

ಯುವರಾಜ ಹಾಗೂ ಆತನ ಬೇನಾಮಿಗಳಿಂದ 8 ನಟಿಯರಿಗೆ ಲಕ್ಷಾಂತರ ಹಣ ವರ್ಗಾವಣೆ ಆಗಿದೆಯಂತೆ. ಸ್ಯಾಂಡಲ್​ವುಡ್​ನ ಸದ್ಯದ ಟಾಪ್​ ಹೀರೋಹಿನ್​ಗಳಿಗೆ ಹಣ ಸಂದಾಯ ಆಗಿದೆ. ಫಿಲಂಗೆ ಅಂತಾ ದುಡ್ಡು ಪಡೆದು ಯಾವ ನಟಿಯೂ ಅಗ್ರಿಮೆಂಟ್ ಮಾಡ್ಕೊಂಡಿಲ್ಲ ಅಂತೆ. ಅಗ್ರಿಮೆಂಟ್ ಇಲ್ಲದೆ ಯಾವ ಕಾರಣಕ್ಕೆ ದುಡ್ಡು ಪಡೆದ್ರು ಈ ನಟಿಯರು? ಎಂಬ ಪ್ರಶ್ನೆ ಮೂಡಿದೆ.

ಫಿಲಂ ಮಾಡೋದಕ್ಕೆ ರಾಧಿಕಾ ಕುಮಾರಸ್ವಾಮಿಗೆ ಹಣ ಕೊಟ್ಟಂತೆ ಬೇರೆ ನಟಿಯರಿಗೂ ದುಡ್ಡು ಕೊಟ್ನಾ ಯುವರಾಜ್? ಈ ಎಲ್ಲ ಪ್ರಶ್ನೆಗಳಿಗೂ ತನಿಖೆ ಬಳಿಕ ಉತ್ತರ ಸಿಗಲಿದೆ. ಸದ್ಯ ಯುವರಾಜ್​ನಿಂದ ಹಣ ಪಡೆದ ನಟಿಯರ ಎದೆಯಲ್ಲಿ ಢವ-ಢವ ಶುರುವಾಗಿದೆ. ವಿಚಾರಣೆಗೆ ಹಾಜರ್​ ಆಗುವಂತೆ ಸಿಸಿಬಿ ನೋಟಿಸ್​ ಜಾರಿ ಮಾಡುತ್ತಿದ್ದಂತೆ ಆ ನಟಿಮಣಿಯರು ಏನು ಹೇಳ್ತಾರೆ ಕಾದು ನೋಡಬೇಕಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net