ಮೊಬೈಲ್ ಸಂಖ್ಯೆ ಪೋರ್ಟಿಂಗ್​ಗೆ ಹೊಸ ನಿಯಮ..ಜುಲೈ 1 ರಿಂದ ಜಾರಿ

trai
Published on

ನವದೆಹಲಿ: ಮೊಬೈಲ್ ನಂಬರ್ ಪೋರ್ಟೆಬಿಲಿಟಿ (ಎಂಎನ್‌ಪಿ) ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ( ಟ್ರಾಯ್) ಹೇಳಿದೆ.

ಟ್ರಾಯ್ ಕಳೆದ ವಾರ ತನ್ನ ಮೊಬೈಲ್ ನಂಬರ್ ಪೋರ್ಟೆಬಿಲಿಟಿ (ಎಂಎನ್​ಪಿ) ನಿಯಮಗಳಲ್ಲಿ ಬದಲಾವಣೆಗಳನ್ನು ಪ್ರಕಟಿಸಿದೆ. ಇತ್ತೀಚಿನ ತಿದ್ದುಪಡಿಯ ಪ್ರಕಾರ, ಸಿಮ್ ಕಾರ್ಡ್ ಅನ್ನು ಬದಲಾಯಿಸಿದರೆ ಸಂಬಂಧಿತ ಮೊಬೈಲ್ ಸಂಖ್ಯೆಯನ್ನು ಏಳು ದಿನಗಳವರೆಗೆ ಬೇರೆ ಟೆಲಿಕಾಂ ಆಪರೇಟರ್‌ಗೆ ಪೋರ್ಟ್ ಮಾಡಲು ಸಾಧ್ಯವಿಲ್ಲ.

ಈ ಹಿಂದೆ ಸಿಮ್ ಸ್ವಾಪ್ ಬಳಿಕ 10 ದಿನ ಕಾಯಬೇಕಿತ್ತು. ಆದರೆ ಇತ್ತೀಚಿನ ತಿದ್ದುಪಡಿಯಲ್ಲಿ ಅದನ್ನು ಏಳು ದಿನಗಳಿಗೆ ಇಳಿಸಲಾಗಿದೆ. ಇನ್ನು ಮುಂದೆ, ಏಳು ದಿನಗಳಲ್ಲಿ ಸಂಖ್ಯೆಯನ್ನು ಬದಲಾಯಿಸಲು ವಿಶಿಷ್ಟ ಪೋರ್ಟಿಂಗ್ ಕೋಡ್ (ಯುಪಿಸಿ) ಅನ್ನು ನಿಯೋಜಿಸಲಾಗಿದೆ.

10 ದಿನ ಕಾಯುವುದರಿಂದ ಈ ಸಮಯವು ಚಂದಾದಾರರಿಗೆ ತೊಂದರೆ ಉಂಟುಮಾಡುತ್ತಿದೆ. ಹೀಗಾಗಿ 2-4 ದಿನಗಳು ಸಾಕು ಎಂದು ಎಂದು ಕೆಲವು ಟೆಲಿಕಾಂ ಸಂಸ್ಥೆಗಳು ಅಭಿಪ್ರಾಯಪಟ್ಟಿದ್ದವು.

ಎಂಎನ್​ಪಿ ನಿಯಮಾವಳಿಗಳು ಪ್ರಾರಂಭವಾದ ನಂತರ ಇದು ಒಂಬತ್ತನೇ ಹೊಸ ತಿದ್ದುಪಡಿಯಾಗಿದೆ. ಹೊಸ ನಿಯಮಗಳು ದೇಶದಲ್ಲಿ ಸಿಮ್ ಸ್ವಾಪ್ ವಂಚನೆಯನ್ನು ತಡೆಗಟ್ಟುವ ಮತ್ತು ಕಡಿಮೆ ಮಾಡುವ ಗುರಿಯನ್ನು ಹೊಂದಿವೆ ಎಂದು ಟ್ರಾಯ್ ಅಭಿಪ್ರಾಯಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net