ರಾಂಚಿ: ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಹೇಮಂತ್ ಸೊರೆನ್ ಐದು ತಿಂಗಳ ನಂತರ ಶುಕ್ರವಾರ (ಜೂನ್ 28) ರಾಂಚಿಯ ಬಿರ್ಸಾ ಮುಂಡಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.
ಇದನ್ನೂ ಓದಿ: ‘ಧಕ್-ಧಕ್’ ಬೆಡಗಿಯನ್ನು ‘ದೇಶದ್ರೋಹಿ’ ಎಂದ ನೆಟ್ಟಿಗರು! ಕಾರಣ ಇದೇ ನೋಡಿ..
ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಂಚಿ ಹೈಕೋರ್ಟ್ ಹೇಮಂತ್ ಸೊರೆನ್‌ಗೆ ಜಾಮೀನು ಮಂಜೂರು ಮಾಡಿದೆ. ಈ ಪ್ರಕರಣದಲ್ಲಿ ಹೇಮಂತ್ ಸೊರೆನ್ ಅವರಿಗೆ ಎರಡು ವಾರಗಳ ಹಿಂದೆ ನ್ಯಾಯಾಲಯ ಜಾಮೀನು ನೀಡಿದ್ದು, ಆದೇಶವನ್ನು ಕಾಯ್ದಿರಿಸಿತ್ತು.
ಜಾರ್ಖಂಡ್ ಹೈಕೋರ್ಟ್ ಜಾಮೀನು ಆದೇಶದಲ್ಲಿ ಹೇಮಂತ್ ಸೋರೆನ್ ಅವರನ್ನು ಅಕ್ರಮ ಹಣ ವರ್ಗಾವಣೆ ಅಪರಾಧ ಎಂದು ಪರಿಗಣಿಸಲು ಯಾವುದೇ ಕಾರಣವಿಲ್ಲ ಎಂದು ಹೇಳಿದೆ.
ನ್ಯಾಯಮೂರ್ತಿ ರೊಂಗೋನ್ ಮುಖೋಪಾಧ್ಯಾಯ ಅವರ ಏಕ ಪೀಠವು 50ಸಾವಿರ ರೂ.ಗಳ ಶ್ಯೂರಿಟಿ ಬಾಂಡ್ ಮತ್ತು ಅಂತಹ ಮೊತ್ತದ ಇಬ್ಬರು ವ್ಯಕ್ತಿಗಳ ಭದ್ರತೆ ಮೇಲೆ ಹೇಮಂತ್ ಸೊರೆನ್‌ಗೆ ಜಾಮೀನು ನೀಡಿದೆ.
‘ನಾನು ಯಾಕೆ ಜೈಲಿಗೆ ಹೋಗಿದ್ದೆ ಎಂದು ಇಡೀ ದೇಶಕ್ಕೆ ತಿಳಿದಿದೆ. ಐದು ತಿಂಗಳ ನಂತರ, ನಾನು ಕಾನೂನುಬದ್ಧವಾಗಿ ಜೈಲಿನಿಂದ ಹೊರಬಂದಿದ್ದೇನೆ. ಕಳೆದ ಐದು ತಿಂಗಳು ಜಾರ್ಖಂಡ್ ಚಿಂತಾಜನಕ ಸ್ಥಿತಿಯಲ್ಲಿತ್ತು ಎಂದು ಬಿಡುಗಡೆಯ ನಂತರ ಹೇಮಂತ್ ಸೊರೆನ್ ಹೇಳಿದರು.