ನದಿ ದಾಟುವಾಗ ನೀರಿನ ಮಟ್ಟ ಏರಿಕೆ..ಐವರು ಯೋಧರು ಹುತಾತ್ಮ

tank
Published on

ಶ್ರೀನಗರ: ಲಡಾಖ್‌ನ ದೌಲತ್ ಬೇಗ್ ಓಲ್ಡಿ ಪ್ರದೇಶದಲ್ಲಿ ಶುಕ್ರವಾರ ಯುದ್ಧ ಟ್ಯಾಂಕ್ ತರಬೇತಿಯಲ್ಲಿದ್ದಾಗ ನೀರಿನ ಮಟ್ಟ ಹಠಾತ್ ಏರಿಕೆಯಾಗಿ ಜೆಸಿಒ ಸೇರಿದಂತೆ ಐವರು ಸೇನಾ ಯೋಧರು ಹುತಾತ್ಮರಾಗಿದ್ದಾರೆ.

ದೌಲತ್ ಬೇಗ್ ಓಲ್ಡಿಯಲ್ಲಿ ಟ್ಯಾಂಕ್ ತರಬೇತಿ ನಡೆಯುತ್ತಿತ್ತು. ಅನೇಕ ಸೇನಾ ಟ್ಯಾಂಕ್‌ಗಳು ಅಲ್ಲಿದ್ದವು. ಈ ಸಮಯದಲ್ಲಿ, ಟಿ-72 ಟ್ಯಾಂಕ್ ಮೂಲಕ ನದಿಯನ್ನು ಹೇಗೆ ದಾಟಬೇಕು ಎಂಬುದರ ಕುರಿತು ಅಭ್ಯಾಸವು ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್​ಎಸಿ) ಬಳಿ ನಡೆಯುತ್ತಿತ್ತು. ಆದರೆ ನದಿಯಲ್ಲಿ ಹಠಾತ್​ ಪ್ರವಾಹ ಬಂದಿದ್ದರಿಂದ ಯುದ್ಧ ಟ್ಯಾಂಕ್​ ಮತ್ತು ಯೋದರು ಕೊಚ್ಚಿಕೊಂಡು ಹೋಗಿದ್ದಾರೆ.

ಘಟನೆ ನಡೆದ ಕೂಡಲೇ ಸೇನಾ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದರಾದರೂ ಅಭ್ಯಾಸದಲ್ಲಿ ನಿರತರಾಗಿದ್ದ ಯೋದರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net