ವಿಮಾನ ಟೇಕ್‌ಆಫ್‌ಗೂ ಮುನ್ನವೇ ತುರ್ತು ನಿರ್ಗಮನ ಬಾಗಿಲು ತೆರೆದ ಪ್ರಯಾಣಿಕ! ಆತ ಕೊಟ್ಟ ಕಾರಣ ಹೀಗಿದೆ

Untitled design (55)
Published on

ಹೊಸದಿಲ್ಲಿ: ಚಿಯಾಂಗ್ ಮಾಯ್ ವಿಮಾನ ನಿಲ್ದಾಣದಲ್ಲಿ ಟೇಕಾಫ್ ಆಗುವ ಮೊದಲೇ ಥಾಯ್ ಏರ್‌ವೇಸ್ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದ ಕೆನಡಾ ಮೂಲದ ವ್ಯಕ್ತಿಯನ್ನು ಸದ್ಯ ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ರಾತ್ರಿ ನಡೆದ ಈ ಘಟನೆಯಲ್ಲಿ ವಿಮಾನದ ಎಮರ್ಜೆನ್ಸಿ ಕಿಟಕಿಯನ್ನು ತೆಗೆದ ಪ್ರಯಾಣಿಕನಿಂದ ಸಹ ಪ್ರಯಾಣಿಕರು ಗಾಬರಿಗೊಂಡಿದ್ದು, ವಿಮಾನದ ಟೇಕ್ ಆಫ್ ಸಮಯದಲ್ಲಿ ಭಾರೀ ವಿಳಂಬ ಉಂಟಾಯಿತು.

ಕೆನಡಾದ ವ್ಯಕ್ತಿಯನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ವಿಮಾನದ ಬಾಗಿಲು ತೆರೆಯಲು ನನಗೆ ಭ್ರಮೆ ಆವರಿಸಿತ್ತು ಎಂದು ಹೇಳಿಕೊಂಡಿದ್ದಾನೆ. ಇದನ್ನು ಆತನ ಪರ ವಕೀಲರು ಕೂಡ ಹೇಳಿದ್ದಾರೆ. "ತಾನು ಬಾಗಿಲು ತೆರೆದಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ. ಅವರು ಭ್ರಮೆಗೊಂಡಿದ್ದರಿಂದ ಹೀಗಾಗಿದೆ" ಎಂದು ವಕೀಲ ಜಿರಾವತ್ ಯಾರ್‌ಕಿಯಾಟ್‌ಪಕ್ಡೀಬ ಹೇಳಿದ್ದಾರೆ.

ವ್ಯಕ್ತಿ ತುರ್ತು ನಿರ್ಗಮನವನ್ನು ತೆರೆಯುತ್ತಿದ್ದಂತೆಯೇ ವಿಮಾನದೊಳಗೆ ಭಾರೀ ಗೊಂದಲ ಉಂಟಾಗಿದೆ. "ಈ ಘಟನೆ ವಿಮಾನ ಟೇಕ್ ಆಫ್​ ಆಗುವ ಮುನ್ನ ಸಂಭವಿಸಿದ್ದು ನಮ್ಮ ಪುಣ್ಯ. ನಾವು ಸಮುದ್ರ ಮಟ್ಟದಿಂದ 30,000 ಅಡಿ ಎತ್ತರದಲ್ಲಿದ್ದಾಗ ಹೀಗಾಗಿದ್ದರೆ ಏನು ಗತಿ?" ಎಂದು ಸಹ ಪ್ರಯಾಣಿಕರೊಬ್ಬರು ಆತಂಕ ವ್ಯಕ್ತಪಡಿಸಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net