ಶಿವಾಜಿ ಮಹಾರಾಜರ ಗುರುಕುಲಕ್ಕೆ ಭೂಮಿ ಪೂಜೆ ನಾಳೆ

8 DND -1 GURUKULA
Published on

ದಾಂಡೇಲಿ: ಹಳಿಯಾಳ ತಾಲೂಕಿನ ಹವಗಿ ಗ್ರಾಮದಲ್ಲಿ ಶ್ರೀ ಹರಿ ಗೋಸಾವಿ ಮಠದ ಆಶ್ರಯದಲ್ಲಿ ನಿರ್ವಣಗೊಳ್ಳುತ್ತಿರುವ ಶ್ರೀ ಹರಿ ಛತ್ರಪತಿ ಶಿವಾಜಿ ಮಹಾರಾಜರ ಗುರುಕುಲದ ಭೂಮಿ ಪೂಜೆ ಕಾರ್ಯಕ್ರಮವನ್ನು ಫೆ. 11ರಂದು ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರಿನ ಗವಿಪುರಂ ಗೋಸಾವಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಮಂಜುನಾಥ ಭಾರತಿ ಸ್ವಾಮೀಜಿ ತಿಳಿಸಿದರು.
ಈ ಕುರಿತು ನಗರದ ಮರಾಠಾ ಸಮಾಜದ ಸಭಾಭವನದಲ್ಲಿ ಮರಾಠಾ ಸಮಾಜದ ಮುಖಂಡರ, ಸಮಾಜದ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
ಹವಗಿಯ ಛತ್ರಪತಿ ಶಿವಾಜಿ ಮಹಾರಾಜರ ಗುರುಕುಲದ ಉದ್ದೇಶ ವಿದ್ಯಾರ್ಥಿಗಳಿಗೆ ಉನ್ನತ ಸಂಸ್ಕಾರ, ಸಂಪ್ರದಾಯ, ಭಗವದ್ಗೀತೆ, ಉಪನಿಷತ್, ಯೋಗ ಶಾಸ್ತ್ರೀಯ ಸಂಗೀತ ಕಲಿಕೆ ಉಟ, ವಸತಿಯೊಂದಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದಾಗಿದೆ ಎಂದರು.
ಸಭೆಯಲ್ಲಿ ದಾಂಡೇಲಿ ಮರಾಠಾ ಸಮಾಜದ ಅಧ್ಯಕ್ಷ ಡಾ. ಮೋಹನ ಪಾಟೀಲ, ಪ್ರಮುಖರಾದ ಎನ್.ವಿ. ಪಾಟೀಲ, ಸಂತೋಷ ಸೋಮನಾಚೆ, ಸುನೀಲ ಸೋಮನಾಚೆ, ಮಹೇಶ ಸಾವಂತ, ಸಂಜೀವ ಜಾಧವ, ಅರ್ಜುನ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net