ಭಾರತದಲ್ಲಿ ಒಟ್ಟು ಎಷ್ಟು ಭಾಷೆಗಳಿವೆ, ಇತರೆ ದೇಶಗಳು ಯಾವ ಸ್ಥಾನದಲ್ಲಿದೆ? ಇಲ್ಲಿದೆ ನೋಡಿ ಟಾಪ್ 10 ಪಟ್ಟಿ!

Untitled design (25)
Published on

ಬೆಂಗಳೂರು: ಭಾಷೆ ಅಂದ ತಕ್ಷಣ ನಮ್ಮಲ್ಲಿ ಅದೇನೋ ಒಂದು ಹೊಸ ಚೈತನ್ಯ, ಮನಸಿಗೆ ಉಲ್ಲಾಸ-ಉತ್ಸಾಹ ಆಗುತ್ತದೆ. ಅದರಲ್ಲೂ ಅನ್ಯ ರಾಜ್ಯಗಳಿಗೆ ಅಥವಾ ಇತರೆ ರಾಷ್ಟ್ರಗಳಿಗೆ ಹೋದಾಗ ಅಲ್ಲಿ ಯಾರಾದರೂ ನಮ್ಮ ಮಾತೃಭಾಷೆಯನ್ನು ಮಾತನಾಡುವ ಮೂಲಕ ನಮಗೆ ಪ್ರತಿಕ್ರಿಯಿಸಿದರೆ, ಆಗ ಉಂಟಾಗುವ ಸಂತಸ ಹೇಳತೀರದು. ಪ್ರತಿ ರಾಜ್ಯಗಳಲ್ಲಿಯೂ ಒಂದೊಂದು ವ್ಯವಹಾರಿಕ ಭಾಷೆಯನ್ನು ಬಳಸಲಾಗುತ್ತದೆ. ಉದಾಹರಣೆಗೆ ಕರ್ನಾಟಕದಲ್ಲಿ ಕನ್ನಡ, ಕೇರಳದಲ್ಲಿ ಮಲಯಾಳಂ, ತಮಿಳುನಾಡಿನಲ್ಲಿ ತಮಿಳು, ಆಂಧ್ರಪ್ರದೇಶದಲ್ಲಿ ತೆಲುಗು ಹೀಗೆ ಒಂದೊಂದು ರಾಜ್ಯಗಳಲ್ಲಿ ವಿವಿಧ ಭಾಷೆಯನ್ನು ಮಾತನಾಡಲಾಗುತ್ತದೆ.

ಕೇವಲ ನಮ್ಮ ದೇಶದಲ್ಲೇ ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ, ಭೋಜಪುರಿ, ಉರ್ದು, ಪಂಜಾಬಿ, ಒಡಿಶಾ ಹೀಗೆ ಹಲವಾರು ಭಾಷೆಗಳಿದ್ದು, ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾಷೆಗಳ ಸಂಖ್ಯೆಯಲ್ಲಿ ನಮ್ಮ ದೇಶ ಕೂಡ ಮುಂಚೂಣಿಯಲ್ಲಿದೆ. ಹಾಗಾದ್ರೆ, ಇತರೆ ರಾಷ್ಟ್ರಗಳಲ್ಲಿ ಎಷ್ಟು ಭಾಷೆಗಳಿವೆ? ನಮ್ಮದು ಎಷ್ಟಿದೆ? ಟಾಪ್ 10 ಪಟ್ಟಿಯಲ್ಲಿ ಯಾರಿಗೆ ಯಾವ ಸ್ಥಾನ ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.

1. ಪಪುವಾ ನ್ಯೂ ಜಿನೆವಾ: 841

2. ಇಂಡೋನೇಷ್ಯಾ: 720

3. ನೈಜೀರಿಯಾ: 537

4. ಭಾರತ: 458

5. ಅಮೆರಿಕಾ: 355

6. ಆಸ್ಟ್ರೇಲಿಯಾ: 318

7. ಚೀನಾ: 307

8. ಮೆಕ್ಸಿಕೋ: 304

9. ಕ್ಯಾಮರೂನ್: 279

10. ಬ್ರೆಜಿಲ್: 240

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net