ಪತ್ನಿಯೊಂದಿಗೆ ಟ್ಯಾಲೆಂಟೆಡ್​​ ಡೈರೆಕ್ಟರ್​​​ ರಾಜಮೌಳಿ ಮಸ್ತ್​​ ಡ್ಯಾನ್ಸ್​​; ಮೆಚ್ಚಿದ ಅಭಿಮಾನಿಗಳು ಹೇಳಿದ್ದು ಹೀಗೆ..​ | SS Rajamouli

Untitled design - 2024-12-15T180222.436
Published on

ಹೈದರಾಬಾದ್​​: ಟಾಲಿವುಡ್​​ ಟ್ಯಾಲೆಂಟೆಡ್​ ನಿರ್ದೇಶಕ ಎಸ್​.ಎಸ್​ ರಾಜಮೌಳಿ(SS Rajamouli) ಅವರು ಕುರಿತು ಹೊಸದಾಗಿ ಪರಿಚಯಿಸುವ ಅಗತ್ಯ ಇಲ್ಲ. ಪ್ಯಾನ್​ ಇಂಡಿಯಾ ಸಿನಿಮಾಗಳ ಮೂಲಕ ಚಿರಪರಿಚಿತರಾಗಿದ್ದಾರೆ. ಸಿನಿಮಾಗಳಲ್ಲಿ ನಟನಟಿಯನ್ನು ಕುಣಿಸುವುದಲ್ಲ ತಾನು ಡ್ಯಾನ್ಸ್​ ಮಾಡಬಲ್ಲೆ ಎಂದು ಹೇಳುವಂತ ವಿಡಿಯೋವೊಂದ ಎಲ್ಲರ ಗಮನ ಸೆಳೆದಿದೆ.

51ರ ಹರೆಯದ ರಾಜಮೌಳಿ ಅವರು ಕಾರ್ಯಕ್ರಮವೊಂದರಲ್ಲಿ ತಮ್ಮ ಪತ್ನಿಯೊಂದಿಗೆ ಡ್ಯಾನ್ಸ್​ ಮಾಡಿದ್ದಾರೆ. ಸದ್ಯ ಈ ವಿಡಿಯೋ ಅಭಿಮಾನಿಗಳಿಗೆ ಹುಚ್ಚಿದ್ದುಕುಣಿಯುವಂತೆ ಮಾಡಿದ್ದು, ನಿರ್ದೇಶನದಲ್ಲಿ ಮಾತ್ರವಲ್ಲ ಡ್ಯಾನ್ಸ್​ನಲ್ಲೂ ರಾಜಮೌಳಿ ಸೂಪರ್​ಸ್ಟಾರ್​ ಎಂದು ಹೊಗಳುತ್ತಿದ್ದಾರೆ.

SS ರಾಜಮೌಳಿ ಪ್ರಸ್ತುತ ತಮ್ಮ ಮುಂದಿನ ಚಿತ್ರ SSMB29 ನಲ್ಲಿ ನಿರತರಾಗಿದ್ದಾರೆ. ಸೌತ್ ಸೂಪರ್​​ಸ್ಟಾರ್ ಮಹೇಶ್ ಬಾಬು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದ ತಾರಾಗಣದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಮುಂಬರುವ ಚಿತ್ರವು ಆಫ್ರಿಕನ್ ಕಾಡಿನಲ್ಲಿ ಚಿತ್ರೀಕರಣಗೊಳ್ಳಲಿದೆ ಎಂದು ಹಲವಾರು ವರದಿಗಳು ಸೂಚಿಸುತ್ತವೆ. ಚಿತ್ರದಲ್ಲಿ ಮಹೇಶ್ ಬಾಬು ಅವರ ಪಾತ್ರವು ಭಗವಂತ ಹನುಮಂತನಿಂದ ಪ್ರೇರಿತವಾಗಿದೆ ಎಂದು ಹೇಳಲಾಗುತ್ತಿದ್ದು ಅಭಿಮಾನಿಗಳು ಕಾತುರದಿಂದ ಕಾಯುವಂತೆ ಮಾಡಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net