‘ಫತೇಹ್' ಬಾಕ್ಸ್ ಆಫೀಸ್ ಕಲೆಕ್ಷನ್ ನನ್ನದಲ್ಲ.. ಅವರದ್ದು; ನಟ ಸೋನು ಸೂದ್​​​​ ಹೀಗೆಳಿದ್ದೇಕೆ? | Sonu Sood

Untitled design - 2024-12-15T140432.504
Published on

ಮುಂಬೈ: ತಮ್ಮ ಪರೋಪಕಾರಿ ಕೆಲಸಗಳಿಂದ ಸದಾ ಮುನ್ನೆಲೆಗೆ ಬರುವ ನಟ ಸೋನು ಸೂದ್​(Sonu Sood) ಬಾಲಿವುಡ್​ನಲ್ಲಿ ಮಾತ್ರವಲ್ಲ ಸೌತ್​ ಸಿನಿಮಾಗಳಲ್ಲಿಯೂ ನಟಿಸಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚೆಗೆ ನಟ #DrugFreeFuture ಅಭಿಯಾನದ ಮೂರನೇ ಸೀಸನ್ ಅನ್ನು ಬೆಂಬಲಿಸಲು ಅಹಮದಾಬಾದ್‌ನಲ್ಲಿ ಗಿಫ್ಟ್ ಸಿಟಿ ರನ್‌ನಲ್ಲಿ ಭಾಗವಹಿಸಿದ್ದರು. ಈ ಅಭಿಯಾನವು ಮಾದಕ ವ್ಯಸನದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು ಕೇಂದ್ರೀಕರಿಸುತ್ತದೆ.

ಅಭಿಯಾನದಲ್ಲಿ ಜನರನ್ನು ನೋಡಲು ಅದರಲ್ಲೂ ಮುಂಗಾನೆ ಇಂಟಹ ಫಿಟ್​​​ ಜನರನ್ನು ನೋಡಲು ಬಹಳ ಸಂತೋಷವಾಗುತ್ತದೆ. ಅವರಲ್ಲಿನ ಉತ್ಸಾಹವನ್ನು ನೀವು ನೋಡಬಹುದು, ನೋಡಿ ಅವರು ಓಡುವುದನ್ನು ನೋಡಿದರೆ ಹೆಮ್ಮೆ ಎನ್ನಿಸುತ್ತದೆ ಎಂದರು. ಇದೇ ಸಂದರ್ಭದಲ್ಲಿ ನಟ ಸೋನು ಸೂದ್​​ ತಮ್ಮ ಮುಂಬರುವ ಆಕ್ಷನ್ ಚಿತ್ರ 'ಫತೇಹ್' ಕುರಿತು ಮಾತನಾಡಿದ್ದಾರೆ. ಸೈಬರ್ ಅಪರಾಧದ ವಿಷಯವನ್ನು ಆಧರಿಸಿರುವ ಫತೇಹ್​​ ಸಿನಿಮಾವು ಇಂದಿನ ಡಿಜಿಟಲ್ ಯುಗದಲ್ಲಿ ಗಂಭೀರ ಸಮಸ್ಯೆಯಾಗಿರುವ ಸೈಬರ್ ವಂಚನೆಯ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.

ಫತೇಹ್​ ಸಿನಿಮಾ ಸೋನು ಸೂದ್​ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ. ಈ ಸಿನಿಮಾದ ಟೀಸರ್​ ಈಗಾಗಲೆ ಬಿಡುಗಡೆಯಾಗಿದ್ದು, ಜನರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ. ಫತೇಹ್​ ಸಿನಿಮಾ ಸೈಬರ್ ಕ್ರೈಂನಿಂದ ಹೇಗೆ ಸುರಕ್ಷಿತವಾಗಿರಬೇಕು ಎಂಬ ಅರಿವು ಮೂಡಿಸುತ್ತದೆ. ಇದು ದೇಶದ ಜನರಿಗಾಗಿ ನಿರ್ಮಿಸಿರುವ ಸಿನಿಮಾ. ನಾವು ಈ ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್​​ ಅನ್ನು ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳಿಗೆ ಕಳುಹಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಫತೇಹ್​ ಸಿನಿಮಾ ಟೀಸರ್​​​​​​​ ಹಂಚಿಕೊಳ್ಳುವಾಗ #ಫತೇಹ್! ಇದುವರೆಗಿನ ಅತಿದೊಡ್ಡ ಆಕ್ಷನ್-ಪ್ಯಾಕ್ಡ್ ಥ್ರಿಲ್ಲರ್‌ಗಾಗಿ ಸಿದ್ಧರಾಗಿ!" ಎಂದು ಜಾಲತಾಣದಲ್ಲಿ ಚಿತ್ರತಂಡ ಬರೆದಿತ್ತು. ಸಿನಿಮಾದಲ್ಲಿ ಸೋನು ಸೂದ್​ ಜತೆಗೆ ಜಾಕ್ವೆಲಿನ್ ಫರ್ನಾಂಡೀಸ್, ನಾಸಿರುದ್ದೀನ್ ಷಾ, ವಿಜಯ್ ರಾಝ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ 2025 ಜನವರಿ 10ರಂದು ಬಿಡುಗಡೆಯಾಗಲಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net