ಕಮಲ್ ಹಾಸನ್ ಒಂದು ಕ್ಷಣವೂ ಬಿಡುವಿಲ್ಲದೆ ಬ್ಯುಸಿ: ಕಾರಣ ಹೀಗಿದೆ ನೋಡಿ..

kamal
Published on

ಚೆನ್ನೈ: ಬಹುಭಾಷಾ ನಟ ಕಮಲ್ ಹಾಸನ್ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ತಾವು ನಟಿಸುತ್ತಿರುವ ಮೂರು ಸಿನಿಮಾಗಳನ್ನು ಅಪ್ ಡೇಟ್ ಮಾಡಿ ಸಿನಿಪ್ರೇಮಿಗಳಲ್ಲಿ ಉತ್ಸಾಹ ಹೆಚ್ಚಿಸಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು 'ಕಲ್ಕಿ', 'ಥಗ್ ಲೈಫ್' ಮತ್ತು 'ಇಂಡಿಯನ್ 2' ಚಿತ್ರೀಕರಣದ ಬಗ್ಗೆ ಮಾತನಾಡಿದ್ದಾರೆ.

ನಾವು ಇಂಡಿಯನ್ 2 ಮತ್ತು ಇಂಡಿಯನ್ 3 ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇವೆ. ಪ್ರಸ್ತುತ, 'ಇಂಡಿಯನ್ 2' ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಆ ನಂತರ ಅದರ ಮುಂದುವರಿದ ಭಾಗದ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭಿಸಲಿದ್ದೇವೆ. ಚುನಾವಣೆ ನಂತರ ಮಣಿರತ್ನಂ ನಿರ್ದೇಶನದಲ್ಲಿ "ಥಗ್ ಲೈಫ್' ತೆಲುಗಿನಲ್ಲಿ ಚಿತ್ರೀಕರಣ ಆರಂಭಿಸಲಿದ್ದೇವೆ.'ಕಲ್ಕಿ'ಯಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದೇನೆ. ಅದರಲ್ಲಿ ನನ್ನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ" ಎಂದು ಹೇಳಿದರು.

ಅಷ್ಟೇ ಅಲ್ಲ, ಇತ್ತೀಚೆಗಷ್ಟೇ ಶೃತಿ ಹಾಸನ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಅವರು ಚಿತ್ರೀಕರಿಸಿದ ಆಲ್ಬಂನಲ್ಲಿ ಕಮಲ್ ಕೆಲಸ ಮಾಡಿದ್ದಾರೆ. ‘ಇನ್ಮಲೆ’ ಎಂಬ ಈ ಹಾಡಿಗೆ ಕಮಲ್ ಸಾಹಿತ್ಯ ನೀಡಿದ್ದಾರೆ.

ದ್ವಾರಕೇಶ್ ಪ್ರಭಾಕರ್ ನಿರ್ದೇಶನದ ಈ ಹಾಡು ಸೋಮವಾರ ಬಿಡುಗಡೆಯಾಗಲಿದೆ. ಅಲ್ಲದೇ ಧನುಷ್ ನಾಯಕನಾಗಿ ತಯಾರಾಗುತ್ತಿರುವ ಇಳಯರಾಜ ಬಯೋಪಿಕ್ ನಲ್ಲಿ ಕಮಲ್ ಹಾಸನ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರಂತೆ. ಕಾಲಿವುಡ್ ಮೂಲಗಳು ಹೇಳುವಂತೆ ನಟ ಕೇವಲ ನಿಜ ಜೀವನದ ಪಾತ್ರದಲ್ಲಿ ಮಾತ್ರವಲ್ಲದೆ ಚಿತ್ರಕಥೆಯಲ್ಲೂ ನಟಿಸುತ್ತಿದ್ದಾರೆ.

ನಿರ್ದೇಶಕರು ಅರುಣ್ ಜೊತೆ ಸ್ಕ್ರಿಪ್ಟ್ ಮುಗಿಸಿದ್ದಾರಂತೆ. ಇಳಯರಾಜ ಮೇಲಿನ ಪ್ರೀತಿಯಿಂದ ಕಮಲ್ ಈ ಬಯೋಪಿಕ್ ನಲ್ಲಿ ನಟಿಸಲಿದ್ದಾರೆ ಎನ್ನುತ್ತಿವೆ ಕಾಲಿವುಡ್ ಮಾಧ್ಯಮಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net