

ನವದೆಹಲಿ: ನಾಗರಹಾವು ಎಂದರೆ ಮನುಷ್ಯರಿಗೆ ಮಾತ್ರವಲ್ಲ, ಕಾಡು ಪ್ರಾಣಿಗಳಿಗೂ ಭಯ. ನಾಗರ ಹಾವೊಂದು ಹರಿಯುವ ನೀರಿನಲ್ಲಿ ತೆರಳುತ್ತಿದ್ದು, ಎದುರಿಗೆ ಬಂದ ಹುಲಿ ಅದನ್ನು ಕಂಡು ಹಿಂದಡಿಯಿರಿಸಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಚಿತ್ರೀಕರಿಸಲಾಗಿದ್ದು, ಇನ್‌ಸ್ಟಾಗ್ರಾಮ್ ಹ್ಯಾಂಡಲ್ ರಣಥಂಬೋರ್ ವೈಲ್ಡ್‌ಲೈಫ್‌ನಲ್ಲಿ ಹಂಚಿಕೊಳ್ಳಲಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ನಾಗರಹಾವು ಕಾಲುವೆಯ ಮೂಲಕ ಹಾದು ಹೋಗುತ್ತಿದೆ. ಅದೇ ಸಮಯಕ್ಕೆ ಹುಲಿಯೊಂದು ಅಲ್ಲಿಗೆ ಬಂರುತ್ತದೆ. ಹಾವಿಗೆ ಹೆದರಿದ ಹುಲಿ ಎರಡು ಹೆಜ್ಜೆ ಹಿಂದಕ್ಕೆ ಸರಿದು ನಿಲ್ಲುತ್ತದೆ. ಸಫಾರಿಗೆ ತೆರಳಿದ್ದವರು ಈ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.
ಈ ವೈರಲ್ ವಿಡಿಯೋ ಒಂದು ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಈ ವಿಡಿಯೋಗೆ ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ``ವಾಮ್, ದೊಡ್ಡ ಹುಲಿ ಕೂಡ ನಾಗರಹಾವಿಗೆ ಹೆದರುತ್ತದೆ'', ``ನಾಗರ ವಿಷ ತುಂಬಾ ಅಪಾಯಕಾರಿ'', `ಒಂದು ನಾಗರಹಾವು ದೊಡ್ಡ ಆನೆಯನ್ನೂ ಸೆಕೆಂಡ್‌ಗಳಲ್ಲಿ ಕೊಲ್ಲಬಲ್ಲದು'', ``ಹೋರಾಟ ನಡೆದರೆ ಎರಡೂ ಸಾಯುತ್ತವೆ'', ``ಹುಲಿ ತುಂಬಾ ಬುದ್ಧಿವಂತ'' ಎಂದು ನೆಟಿಜನ್‌ಗಳು ಕಾಮೆಂಟ್ ಮಾಡಿದ್ದಾರೆ.