ರಾಂಗ್​ರೂಟ್ ನಲ್ಲಿ ಬಂದ ಬೈಕ್ ಸವಾರ..ಸಿಪಾಯಿ ಮಾಡಿದ್ದೇನು ಗೊತ್ತಾ?

traffic_signals_s_201552_125145_02_05_2015
Published on

ಬೆಂಗಳೂರು: ಟ್ರಾಫಿಕ್​ ರೂಲ್ಸ್​ ಗೆ ವಿರುದ್ಧವಾಗಿ ಸಂಚರಿಸುವುದು ತಮ್ಮ ಜನ್ಮಸಿದ್ಧ ಹಕ್ಕು ಈ ನೆಲದ ಕಾನೂನಿಗೆ ಗೌರವ ಕಡದವರು ಅಪಾಯಕಾರಿಯಾಗಿ ವಾಹನಗಳನ್ನು ಚಲಾಯಿಸುವುದನ್ನು ನೋಡಿರುತ್ತೀರಿ. ಅದೇ ರೀತಿಯ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ರಾಂಗ್ ರೂಟ್ ನಲ್ಲಿ ಬಂದು ರಸ್ತೆ ದಾಟುತ್ತಿದ್ದ ಬೈಕ್ ಸವಾರನಿಗೆ ಸೇನೆಯ ಸಿಬ್ಬಂದಿಯೊಬ್ಬರು ತನ್ನದೇ ಸ್ಟೈಲ್ ನಲ್ಲಿ ಚುರುಕುಮುಟ್ಟಿಸಿದ್ದಾರೆ.

ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಅಟ್​ ದ ಪ್ಲಕಾರ್ಡ್​ ಗುಯ್​ ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಆ ವಿಡಿಯೋದಲ್ಲಿ ಸಿಗ್ನಲ್ ಬಿದ್ದ ಕೂಡಲೇ ಎಲ್ಲ ವಾಹನಗಳನ್ನು ನಿಲ್ಲಿಸಲಾಗಿದೆ. ಆದರೆ ಬೈಕ್ ಸವಾರನೊಬ್ಬ ರಾಂಗ್ ರೂಟ್ ನಲ್ಲಿ ತೆರಳಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಆ ಕಡೆ ಕಾರೊಂದು ಬರುತ್ತಿತ್ತು. ಆದರೆ, ಬೈಕ್ ಸವಾರ ವಾಪಸ್ ಹೋಗುವ ಬದಲು ಕಾರು ಚಾಲಕನಿಗೆ ವಾಪಸ್ ಹೋಗುವಂತೆ ಸೂಚಿಸಿದ್ದಾನೆ. ಬೈಕ್ ಸವಾರನ ವರ್ತನೆಯು ತನ್ನ ಪಕ್ಕದಲ್ಲಿದ್ದ ಟ್ರಕ್‌ನಲ್ಲಿದ್ದ ಸೇನಾ ಯೋಧನನ್ನು ಕೆರಳಿಸಿತು. ಕೂಡಲೇ ಕೆಳಗಿಳಿದು ಬೈಕ್ ಸವಾರನಿಗೆ ಸಿಪಾಯಿ ಎರಡು ಬಾರಿ ಡಿಚ್ಚಿ ಹೊಡೆದಿದ್ದಾರೆ. ಬಳಿಕ ಟ್ರಕ್‌ನಿಂದ ದೊಣ್ಣೆ ತೆಗೆದು ಥಳಿಸಿದ್ದಾರೆ. ಅದೇ ವೇಳೆಗೆ ಟ್ರಾಫಿಕ್ ಕಾನ್‌ಸ್ಟೆಬಲ್ ಕೂಡ ಅಲ್ಲಿಗೆ ಬಂದು ಬೈಕ್ ಸವಾರನನ್ನು ಪಕ್ಕಕ್ಕೆ ಎಳೆದೊಯ್ದಿದ್ದಾರೆ.

ವೈರಲ್ ಆಗಿರುವ ಈ ವಿಡಿಯೋವನ್ನು ಇದುವರೆಗೆ 4.5 ಲಕ್ಷ ಮಂದಿ ವೀಕ್ಷಿಸಿದ್ದಾರೆ. 10 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಈ ವಿಡಿಯೋಗೆ ನೆಟಿಜನ್‌ಗಳು ತಮ್ಮದೇ ಶೈಲಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ``ಸಂತೃಪ್ತಿಕರ ರೋಡ್ ರೇಜ್ ಆವೃತ್ತಿ ವಿಡಿಯೋ'' ಎಂದು ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಈ ಮೂರ್ಖನರಿಗೆ ಆಗಬೇಕಾದ ಚಿಕಿತ್ಸೆ ಇದೇ'' ಎಂದಿದ್ದಾರೆ. ``ಶಿಕ್ಷಿಸುವವರು ಹೆಚ್ಚಾದರೆ ದುರುಳರು ಆಗ ನಿಯಮಗಳನ್ನು ಪಾಲಿಸುತ್ತಾರೆ ಎಂದು ಇನ್ನೂ ಹಲವರು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net