ಟೆಲಿಗ್ರಾಮ್ ಸಿಇಒ ಪಾವೆಲ್ ಬಂಧನಕ್ಕೆ ಮಸ್ಕ್ ವಿರೋಧ: 'ವಾಕ್ ಸ್ವಾತಂತ್ರ್ಯದ ಮೇಲಿನ ದಾಳಿ' ಎಂದು ಖಂಡನೆ

musk
Published on

ಲಂಡನ್​: ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್ ಬೆಂಬಲಕ್ಕೆ ಟೆಸ್ಲಾ ಮತ್ತು ಸ್ಪೇಸ್‌ ಎಕ್ಸ್ ಸಿಇಒ ಎಲೋನ್ ಮಸ್ಕ್ ಬಂದಿದ್ದಾರೆ. ಇದು ವಾಕ್ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಸ್ಕ್ ಅವರು ಫ್ರೀ ಪಾವೆಲ್​ ಹ್ಯಾಶ್‌ಟ್ಯಾಗ್ ಹಾಕಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. "ಪಾವ್​ ನೀವು ಒಂದು ಮೆಮೆಯನ್ನು ಇಷ್ಟಪಟ್ಟಿದ್ದಕ್ಕಾಗಿ ಮರಣದಂಡನೆ ಮಾಡಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಡುರೊವ್ ಎದುರಿಸಿದ ಆರೋಪಗಳಿಗೆ ಮೆಟಾ ಸಿಇಒ ಅವರನ್ನು ಏಕೆ ಬಂಧಿಸಲಾಗಿಲ್ಲ ಎಂದು ಪ್ರಶ್ನಿಸಿದ ಬಳಕೆದಾರರನ್ನು ಉಲ್ಲೇಖಿಸಿ ಮಾರ್ಕ್ ಜುಕರ್‌ಬರ್ಗ್ ಅವರನ್ನು ಮಸ್ಕ್ ಇದೇ ಸಂದರ್ಭದಲ್ಲಿ ಟೀಕಿಸಿದ್ದಾರೆ.

ಡುರೊವ್ ಅವರ ಬಂಧನವನ್ನು ಸ್ಲ್ಯಾಮ್ ಮಾಡಿದ ಜನರ ಗುಂಪಿಗೆ ಸೇರಿ, ಮಸ್ಕ್ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಲವಾರು ಬಾರಿ ಪೋಸ್ಟ್ ಮಾಡಿದ್ದಾರೆ. ಬಂಧನವನ್ನು ಟೀಕಿಸಿ ಅಂತಹ ಹಲವಾರು ಪೋಸ್ಟ್‌ಗಳನ್ನು ಪೋಸ್ಟ್ ಮಾಡಿದ್ದಾರಲ್ಲದೆ ಮರುಹಂಚಿದ್ದಾರೆ. ಅದೇ ರೀತಿ ಪ್ರತ್ಯುತ್ತರಿಸಿದ್ದಾರೆ. ಅವರ ಪೋಸ್ಟ್‌ಗಳು ಮೀಮ್‌ಗಳನ್ನು ಸಹ ಒಳಗೊಂಡಿವೆ. X ನಲ್ಲಿನ ಅಂತಹ ಒಂದು ಪೋಸ್ಟ್‌ನಲ್ಲಿ, ಪೋಸ್ಟ್‌ಗಳನ್ನು ಫಾರ್ವರ್ಡ್ ಮಾಡುವುದು ವಾಕ್ ಸ್ವಾತಂತ್ರ್ಯದ ಬೆಂಬಲಕ್ಕೆ ಅತ್ಯಗತ್ಯ ಎಂದು ಬರೆದಿದ್ದಾರೆ.

ಪೋಸ್ಟ್‌ನಲ್ಲಿ ಮಸ್ಕ್​, ವಾಕ್ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ತಳಹದಿಯಾಗಿದೆ. ಇದಕ್ಕೆ ಸಾಮಾಜಿಕ ಮಾಧ್ಯಮಗಳು ವೇದಿಕೆಯಾಗಬೇಕು ಎಂದಿರುವ ಮಸ್ಕ್​, ಜನರು ತಮ್ಮ ಕಳವಳ ವ್ಯಕ್ತಪಡಿಸಲು ಒಂದೆರಡು ಮೇಮ್‌ಗಳನ್ನು ಹಂಚಿಕೊಂಡಿದ್ದಾರೆ.

39 ವರ್ಷದ ರಷ್ಯಾದ ಬಿಲಿಯನೇರ್ ಪಾವೆಲ್ ಡುರೊವ್ ತನ್ನ ಸಾಮಾಜಿಕ ವೇದಿಕೆ ಟೆಲಿಗ್ರಾಮ್ ನಲ್ಲಿ ಯುಕೆ ನಡೆದ ಇತ್ತೀಚಿನ ಗಲಭೆಗಳನ್ನು ನಿಯಂತ್ರಿಸುವಲ್ಲಿ ಅಲ್ಲಿನ ಸರ್ಕಾರವು ವಿಫಲವಾಗಿದೆ ಎಂದು ಕಟುವಾಗಿ ಟೀಕಿಸಿದ್ದರಿಂದ ಫ್ರೆಂಚ್ ನ್ಯಾಯಾಂಗ ಅಧಿಕಾರಿಗಳು ಪಾವೆಲ್ ಡ್ಯುರೊವ್ ಅವರನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ ಎಲೋನ್ ಮಸ್ಕ್ ಟೆಲಿಗ್ರಾಮ್ ಸಿಇಒಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net