

ನವದೆಹಲಿ: ಮೂಢ ನಂಬಿಕೆ ಹಿಂದೂ ಧರ್ಮದಲ್ಲಿ ಮಾತ್ರ ಇವೆ ಎಂದು ಯಾವಾಗಲೂ ಬೊಬ್ಬೆ ಹೊಡೆಯುವ ಸ್ವಯಂಘೋಷಿತ ಬಿದ್ಧಿಜೀವಿಗಳಿಗೆ ಇತರ ಧರ್ಮಗಳಲ್ಲಿನ ಮೂಢನಂಬಿಕೆಗಳನ್ನು ದೂರ ಮಾಡಿ, ಅವರನ್ನೂ ಮುಖ್ಯವಾಹಿನಿಗೆ ತರಬೇಕೆನ್ನುವ ಕಾಳಜಿ ಇರುವುಲ್ಲ ಎಂಬ ಆರೋಪಗಳು ಕೇಳಿಬರುತ್ತಲೇ ಇರುತ್ತವೆ. ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ದೆವ್ವ ಬಿಡಿಸಲು ಮುಂದಾದ ಕ್ರೈಸ್ತ ಪಾದ್ರಿಯೊಬ್ಬ ವ್ಯಕ್ತಿಗೆ ಕೊಟ್ಟ ಏಟುಗಳು ಯಾವ ಪರಿ ಇದ್ದವೆಂದರೆ ಆತನ ದೇಹದಿಂದ ದೆವ್ವ ಬಿಟ್ಟು ಹೋಗುವ ಮಾತಂತಿರಲಿ, ಪ್ರಾಣ ಪಕ್ಷಿಯೇ ಹಾರಿಹೋಗಿದೆ. ದೆವ್ವದಿಂದ ಮುಕ್ತಗೊಳಿಸಲು ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯಲ್ಲಿ 30 ವರ್ಷದ ವ್ಯಕ್ತಿಯನ್ನು ಥಳಿಸಿ ಕೊಂದ ಆರೋಪದ ಮೇಲೆ ಪಾದ್ರಿ ಮತ್ತು ಇತರ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯಲ್ಲಿ 30 ವರ್ಷದ ವ್ಯಕ್ತಿಯೊಬ್ಬನನ್ನು ಪಾದ್ರಿ ಮತ್ತು ಆತನ ಎಂಟು ಮಂದಿ ಸಹಚರರು ಆತನ ದೇಹವನ್ನು ದೆವ್ವದಿಂದ ಮುಕ್ತಗೊಳಿಸುವ ಪ್ರಯತ್ನದಲ್ಲಿ ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾದ್ರಿಯೊಬ್ಬನ ಭೂತೋಚ್ಚಾಟನೆ ಚಿಕಿತ್ಸೆಯು 'ವಿಕೃತ'ವಾಗಿದೆ. ದೆವ್ವ ಬಿಡಿಸುವ ಹೆಸರಿನಲ್ಲಿ ನೀಡಿದ ಏಟಿಗೆ ಸಂಗಪುರದ ಕೂಲಿಕಾರ್ಮಿಕ ಸ್ಯಾಮ್ಯುಯೆಲ್ ಮಸಿಹ್ ನ ಪ್ರಾಣ ಪಕ್ಷಿ ಹಾರಿಹೋಗಿದೆ.
ಸ್ಯಾಮ್ಯುಯೆಲ್ ಅನಾರೋಗ್ಯಕ್ಕೆ ತುತ್ತಾಗಿದ್ದು, ಹಾಸಿಗೆ ಹಿಡಿದದಿದ್ದ. ಆತ ಯಾವಾಗಲೂ ಚೀರಾಡುತ್ತಿದ್ದು, ಕುಟುಂಬಸ್ಥರು ಸ್ಥಳೀಯ ಚರ್ಚ್ನ ಧರ್ಮಗುರು ಜೇಕಬ್ ಮಸಿಹಾ ನನ್ನು ಸಂಪರ್ಕಿಸಿದ್ದಾರೆ. ಅದರಂತೆ ಬುಧವಾರ ಸ್ಯಾಮ್ಯುಯೆಲ್ ಮನೆಗೆ ಬಂದ ಪಾದ್ರಿ ಮೊದಲು ಪ್ರಾರ್ಥನೆ ಸಲ್ಲಿಸಿದ್ದಾನೆ. ಬಳಿಕ ಆತನಿಗೆ ದೆವ್ವ ಹಿಡಿದಿದ್ದು, ಅದನ್ನು ಓಡಿಸಲು ಹೊಡೆಯುವುದಾಗಿ ಹೇಳಿದ್ದಾನೆ. ಹೊಡೆದರೆ ಏನೂ ಆಗುವುದಿಲ್ಲ ಎಂದು ಭರವಸೆ ನೀಡಿದ್ದಾನೆ.
ನಂತರ ಆತ ಸೇರಿ ಎಂಟು ಮಂದಿ ಸ್ಯಾಮ್ಯುಯೆಲ್‌ಗೆ ಮನಸೋ ಇಚ್ಚೆ ಥಳಿಸಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆದರೆ ಮರುದಿನ ಶವವನ್ನು ಹೂಳಲಾಗಿದ್ದು, ಎರಡು ದಿನಗಳ ನಂತರ, ಸ್ಯಾಮ್ಯುಯೆಲ್ ನ ತಾಯಿ ಮತ್ತು ಪತ್ನಿ ಪಾದ್ರಿ ವಿರುದ್ಧ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಶನಿವಾರ ಮೃತದೇಹವನ್ನು ಸಮಾಧಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ಪಾದ್ರಿ ಮತ್ತು ಇತರ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.