

ಕೊಪ್ಪಳ: ತಾಲೂಕಿನ ಹೊಸಲಿಂಗಾಪುರ ಗ್ರಾಮದ ಯಾದವ್ ಕುಟುಂಬದಲ್ಲಿ ಮೂರು ಜನರು ನಿಗೂಢ ಸಾವನ್ನಪ್ಪಿದ್ದು, ರಾಮೇಶ್ವರಿ ( 50), ವಸಂತಾ (32) ಹಾಗೂ ಸಾಯಿಧರ್ಮ ತೇಜ(5) ಮೃತ ದುರ್ದೈವಿಗಳು. ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಭಾರೀ ಅಚ್ಚರಿಗೆ ಒಳಗಾದ ಪೊಲೀಸರು, ಅನುಮಾನಸ್ಪದ ಸಾವಿನ ಹಿಂದಿರುವ ಕಾರಣವೇನು ಎಂದು ತಿಳಿಯಲು ಮುಂದಾಗಿದ್ದಾರೆ.
ತಾಯಿ, ಮಗಳು, ಮೊಮ್ಮಗ ಸಾವನ್ನಪ್ಪಿದ್ದು, ರಾಮೇಶ್ವರಿ ಹಾಗೂ ವಸಂತಾ ತಾಯಿ-ಮಗಳು. ವಸಂತಾಳ ಮಗ ಸಾಯಿಧರ್ಮ ಎಂದು ಹೇಳಲಾಗಿದೆ. ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಮೃತಪಟ್ಟ ಮೂವರು ಸಹ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ವರದಿಯಾಗಿದೆ.
ರಾಜೇಶ್ವರಿ, ಆಕೆಯ ಮಗಳು ವಸಂತಾ ಹಾಗೂ ಸಾಯಿಧರ್ಮ ತೇಜ, ಹೊಸ ಲಿಂಗಾಪುರದ ಆಶ್ರಯ ಕಾಲೋನಿಯ ಮೂರನೇ ವಾರ್ಡಿನಲ್ಲಿ ವಾಸವಿದ್ದರು. ಈಗ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿರುವುದು, ಭಾರೀ ಸಂಶಯಕ್ಕೆ ಕಾರಣವಾಗಿದೆ.