ಈ ವಾರ ಸಿನಿಪ್ರೇಕ್ಷಕರ ಮುಂದೆ ಹಾಜರಾದವು 7 ಕನ್ನಡ ಸಿನಿಮಾಗಳು!

Untitled design - 2023-09-22T150054.362
Published on

ಬೆಂಗಳೂರು: ಭಾರತೀಯ ಚಿತ್ರರಂಗದ ಹಲವು ಭಾಷೆಯ ಅನೇಕ ಸ್ಟಾರ್​ ನಟರ ಸಿನಿಮಾಗಳು ಪ್ರತಿ ವಾರವೂ ಚಿತ್ರಮಂದಿರಗಳಲ್ಲಿ ಹಾಜರಾಗುವ ಮುಖೇನ ಸಿನಿಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗುತ್ತದೆ. ಸದ್ಯ ಇದೇ ಸಾಲಿನಲ್ಲಿ ಕನ್ನಡ ಚಿತ್ರಗಳು ಕೂಡ ಥಿಯೇಟರ್​ಗಳಲ್ಲಿ ಬಿಡುಗಡೆಗೊಂಡು ಅನ್ಯ ಭಾಷೆಯ ಸಿನಿಮಾಗಳಿಗೆ ಭಾರೀ ಪೈಪೋಟಿ ನೀಡುತ್ತದೆ.

ಪ್ರತಿ ವಾರ ಸ್ಯಾಂಡಲ್​ವುಡ್​ ಅಂಗಳದಿಂದ ಎರಡು ಅಥವಾ ನಾಲ್ಕು ಸಿನಿಮಾಗಳು ಒಂದು ವಾರದಲ್ಲಿ ಒಟ್ಟಿಗೆ ತೆರೆಗೆ ಅಪ್ಪಳಿಸುವುದು ಸಾಮಾನ್ಯ ಸಂಗತಿ. ಆದ್ರೆ, ಈ ವಾರ ಕನ್ನಡ ಸಿನಿಪ್ರೇಕ್ಷಕರಲ್ಲಿ ತೀವ್ರ ಗೊಂದಲ ಸೃಷ್ಟಿಯಾಗಿದ್ದು, ರಿಲೀಸ್​ ಆಗಿರುವ ಏಳು ಕನ್ನಡ ಸಿನಿಮಾಗಳಲ್ಲಿ ಯಾವ ಚಿತ್ರ ವೀಕ್ಷಣೆ ಮಾಡಬೇಕು ಎಂಬುದು ತಿಳಿಯದಂತಾಗಿದೆ.

‘ದ್ವಂದ್ವ’, ‘ಆರಾರಿ ರಾರೋ’, ‘ಹನಿಮೂನ್‍ ಇನ್ ಬ್ಯಾಂಕಾಕ್‍’, ‘ಪರಿಶುದ್ಧಂ’, ‘ಬನ್‍-ಟೀ’, ‘ಒಲವೇ ಮಂದಾರ 2’ ಮತ್ತು ‘ದಿಗ್ವಿಜಯ’ ಸಿನಿಮಾಗಳು ಈ ವಾರ ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಈ ಎಲ್ಲಾ ಚಿತ್ರಗಳು ಹೊಸಬರ ತಂಡವೇ ಎಂಬುದು ಮತ್ತಷ್ಟು ವಿಶೇಷ ಸಂಗತಿ ಎಂದೇ ಹೇಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net