ಬ್ರೆಡ್​ ಬಳಕೆಯಲ್ಲಿ ಯಾವ ದೇಶ ಅಧಿಕ?; ಇಲ್ಲಿದೆ ವರದಿ

Untitled design - 2023-09-22T143356.765
Published on

ನವದೆಹಲಿ: ಬ್ರೆಡ್ ಎಂದರೆ ಸಾಕು ಮೊದಲು ನಮಗೆ ನೆನಪಾಗುವುದೇ ಬೇಕರಿ. ಬ್ರೆಡ್​ನಿಂದ ಮಾಡುವ ವಿವಿಧ ತಿಂಡಿ, ತಿನಿಸುಗಳನ್ನು ನಮ್ಮ ಬಾಲ್ಯಗಳಲ್ಲಿ ಅಧಿಕವಾಗಿಯೇ ಸೇವನೆ ಮಾಡಿದ್ದೇವೆ. ಮೈದಾ ಹಿಟ್ಟಿನಲ್ಲಿ ಮಾಡಿರುವ ಬ್ರೆಡ್​ ಬೆಳಗ್ಗಿನ ಟೀ ಜತೆಗೆ ಸೇವಿಸಲು ಅನೇಕರು ಇಂದಿಗೂ ಬಯಸುತ್ತಾರೆ.

ಮೈದಾ ಬ್ರೆಡ್​ ಸೇರಿದಂತೆ ಗೋಧಿ, ಡ್ರೈಫ್ರೂಟ್​, ಸಿರಿಧಾನ್ಯಗಳ ಬ್ರೆಡ್​ಗಳು ಮಾರುಕಟ್ಟೆಯಲ್ಲಿ ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಇತ್ತೀಚಿನ ದಿನಗಳಲ್ಲಂತೂ ಹೋಟೆಲ್​ ಸೇರಿದಂತೆ ಹಲವು ಉದ್ಯಮಗಳು ಬ್ರೆಡ್ ಅನ್ನು ಅಧಿಕವಾಗಿ​ ಬಳಕೆ ಮಾಡುತ್ತಿದ್ದು, ಜಗತ್ತಿನಲ್ಲಿ ಯಾವ ದೇಶಗಳು ಬ್ರೆಡ್​ ಬಳಕೆಯಲ್ಲಿ ಮುಂದಿದೆ ಮತ್ತು ಹಿಂದಿದೆ ಎಂಬುದರ ಮಾಹಿತಿಯನ್ನು 'ವರ್ಲ್ಡ್​ ಆಫ್​ ಸ್ಟಾಟಸ್ಟಿಕ್ಸ್'​ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಆಯಾ ದೇಶಗಳ ವಾರ್ಷಿಕ ತಲಾವಾರು ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಕಂಡತಿದೆ:

ಭಾರತ: 1.75 ಕೆಜಿ

ನೈಜೀರಿಯಾ: 2.26 ಕೆಜಿ

ಬ್ರೆಜಿಲ್: 2.88 ಕೆಜಿ

ಇಂಡೋನೇಷ್ಯಾ: 4.7 ಕೆಜಿ

ಚೀನಾ: 5.83 ಕೆಜಿ

ಯುಎಸ್ಎ: 17 ಕೆಜಿ

ದಕ್ಷಿಣ ಆಫ್ರಿಕಾ: 25.8 ಕೆಜಿ

ಜಪಾನ್: 28.3 ಕೆಜಿ

ಮೆಕ್ಸಿಕೋ: 33.5 ಕೆಜಿ

ಯುಕೆ: 37 ಕೆಜಿ

ಸೌದಿ ಅರೇಬಿಯಾ: 39 ಕೆಜಿ

ಸ್ಲೊವೇನಿಯಾ: 39 ಕೆಜಿ

ಇಟಲಿ: 44 ಕೆಜಿ

ಆಸ್ಟ್ರಿಯಾ: 46 ಕೆಜಿ

ಸ್ಪೇನ್: 46 ಕೆಜಿ

ಬೆಲ್ಜಿಯಂ: 47 ಕೆಜಿ

ಸ್ವಿಟ್ಜರ್ಲೆಂಡ್: 48 ಕೆಜಿ

ಫ್ರಾನ್ಸ್: 50 ಕೆಜಿ

ನಾರ್ವೆ: 52 ಕೆಜಿ

ರಷ್ಯಾ: 54 ಕೆಜಿ

ಸ್ವೀಡನ್: 54 ಕೆಜಿ

ಲಕ್ಸೆಂಬರ್ಗ್: 55 ಕೆಜಿ

ಫಿನ್ಲ್ಯಾಂಡ್: 55 ಕೆಜಿ

ಜರ್ಮನಿ: 57 ಕೆಜಿ

ನೆದರ್ಲ್ಯಾಂಡ್ಸ್: 60 ಕೆಜಿ

ಹಂಗೇರಿ: 60 ಕೆಜಿ

ಐರ್ಲೆಂಡ್: 68 ಕೆಜಿ

ಗ್ರೀಸ್: 70 ಕೆಜಿ

ಡೆನ್ಮಾರ್ಕ್: 70 ಕೆಜಿ

ಪೋಲೆಂಡ್: 70 ಕೆಜಿ

ಪೋರ್ಚುಗಲ್: 70 ಕೆಜಿ

ಅರ್ಜೆಂಟೀನಾ: 72 ಕೆಜಿ

ಸೈಪ್ರಸ್: 74 ಕೆಜಿ

ಉಕ್ರೇನ್: 88 ಕೆಜಿ

ಬಲ್ಗೇರಿಯಾ: 131.1 ಕೆಜಿ

ಸೆರ್ಬಿಯಾ: 135 ಕೆಜಿ

ಟರ್ಕಿ: 199.6 ಕೆಜಿ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net