ಔಷಧೀಯ ಗುಣಗಳನ್ನು ಹೊಂದಿರುವ ತುಳಸಿಯನ್ನ ತಿಂದರೆ ಸಾಕು ಕೊಲೆಸ್ಟ್ರಾಲ್-ಮಧುಮೇಹ ದೂರವಾಗುತ್ತೆ

tfinal
Published on

Benifits of Tulasi: ಆಯುರ್ವೇದದ ಪ್ರಕಾರ ತುಳಸಿ ಬಹಳಷ್ಟು ಔಷಧಿಯ ಗುಣಗಳನ್ನು ಹೊಂದಿರುವ ಸಸ್ಯ. ಆರೋಗ್ಯದ ದೃಷ್ಟಿಯಿಂದಲೂ ತುಳಸಿ ಬಹಳಷ್ಟು ಒಳ್ಳೆಯದು. ತುಳಸಿಯ 5-7 ಎಲೆಗಳನ್ನು ನಿಯಮಿತವಾಗಿ ತಿಂದರೆ ಆರೋಗ್ಯಕ್ಕೆ ಅದ್ಭುತವಾದ ಪ್ರಯೋಜನಗಳಿವೆ.


ತುಳಸಿ ಎಲೆಗಳು ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ, ಇದು ದೇಹವನ್ನು ರೋಗಗಳಿಂದ ಮುಕ್ತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತುಳಸಿ ಎಲೆಗಳು ಕೊಲೆಸ್ಟ್ರಾಲ್ ಮತ್ತು ಮಧುಮೇಹ ರೋಗಿಗಳಿಗೆ ರಾಮಬಾಣವಾಗಿದೆ. ತುಳಸಿ ಎಲೆಗಳ 5 ಅದ್ಭುತ ಪ್ರಯೋಜನಗಳು ಹೀಗಿವೆ.


ತುಳಸಿ ಎಲೆಗಳನ್ನು ಸೇವಿಸುವುದರಿಂದ ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು. ತುಳಸಿಯಲ್ಲಿ ಮಧುಮೇಹ ನಿವಾರಕ ಗುಣವಿದೆ. ತುಳಸಿ ಎಲೆಗಳ ಸಾರವು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಬಹಳಷ್ಟು ಸಹಾಯ ಮಾಡುತ್ತದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ.


ತುಳಸಿ ಹೃದಯದ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಬಹುದು. ತುಳಸಿಯಲ್ಲಿರುವ ಯುಜೆನಾಲ್ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.


ತುಳಸಿ ಆಯುರ್ವೇದ ಔಷಧದಲ್ಲಿ ಜನಪ್ರಿಯ ಗಿಡಮೂಲಿಕೆಯಾಗಿದೆ. ತುಳಸಿ ಎಲೆಗಳು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಅನೇಕ ಸಂಶೋಧನೆಗಳು ಹೇಳತ್ತವೆ. ತುಳಸಿಯಲ್ಲಿ ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಸಂಯುಕ್ತಗಳಿವೆ.


ತುಳಸಿಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಉಸಿರಾಟ, ಮೂತ್ರ, ಹೊಟ್ಟೆ ಮತ್ತು ಚರ್ಮದ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ತುಳಸಿ ಎಲೆಗಳು ತ್ವಚೆಗೆ ತುಂಬಾ ಪ್ರಯೋಜನಕಾರಿ ಕೂಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net