More

    ಮಕ್ಕಳ ಜತೆ ಆಟ, ಟಿವಿ, ನಿದ್ರೆ ಮಾಡುವ ಕೆಲಸಕ್ಕೆ ಮಹಿಳೆ ಪಡೆಯುತ್ತಾಳೆ ಲಕ್ಷ..ಲಕ್ಷ ಸಂಬಳ!

    ಅಮೆರಿಕಾ: ಕೆಲಸ ಯಾವುದಾದ್ರೆ ಏನು, ಶ್ರದ್ಧೆಯಿಂದ ಮಾಡಿದಾಗ ಮಾತ್ರ ಅದ್ಕೆ ತಕ್ಕ ಪ್ರತಿಫಲ ಇವತ್ತಲ್ಲ ನಾಳೆ ಸಿಕ್ಕೇ ಸಿಗುತ್ತದೆ ಎನ್ನುವ ಮಾತನ್ನು ಹಿರಿಯರು ಹೇಳುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ ಮಕ್ಕಳ ಜೊತೆ ಆಟ, ಟಿವಿ, ನಿದ್ರೆಯನ್ನು ಎಂಜಾಯ್ ಮಾಡುವ ಕೆಲ್ಲಿ, ಕೈತುಂಬ ಸಂಬಳ ಕೂಡ ಪಡೆಯುತ್ತಿದ್ದಾಳೆ.

    ಅಮೆರಿಕಾದ ನಿವಾಸಿಯಾಗಿರುವ ಕೆಲ್ಲಿ ಎನ್ನುವ ಮಹಿಳೆಯೊಬ್ಬಳು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾಳೆ. ವಿಡಿಯೋ ಪ್ರಕಾರ, ನನ್ನ ಕೆಲಸದಲ್ಲಿ ನನಗೆ ಖುಷಿ ಇದೆ. ನೆಮ್ಮದಿ ಇದೆ. ಕೆಲಸವನ್ನು ನಾನು ಎಂಜಾಯ್ ಮಾಡ್ತಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಶ್ರೀಮಂತರ ಮನೆಗಳಲ್ಲಿ ಕೇರ್ ಟೇಕರ್ ಆಗಿರುವ ಈ ಮಹಿಳೆ ಲಕ್ಷ… ಲಕ್ಷ ಹಣವನ್ನು ಸಂಪಾದಿಸುತ್ತಿದ್ದಾಳೆ.

    ಕೆಲ್ಲಿ ಶ್ರೀಮಂತರ ಮನೆಯಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದಾಳೆ. ಅಮೆರಿಕಾದಲ್ಲಿ ಶ್ರೀಮಂತರ ಮನೆ ಮಕ್ಕಳನ್ನು ನೋಡಿಕೊಳ್ಳುವ ನಾನಿಯರಿಗೆ ವರ್ಷಕ್ಕೆ 30 ಲಕ್ಷ ರೂ. ಸಂಬಳ ನೀಡಲಾಗುತ್ತದೆ. ಕೆಲ್ಲಿಗೂ ಅಂದಾಜು ಇಷ್ಟೇ ಸಂಬಳ ಬರುತ್ತದೆ.

    ಬೆಳಿಗ್ಗೆ ಆಕೆ ದಿನಚರಿ ಆರಂಭವಾಗೋದು ಟಿವಿ ನೋಡುವ ಮೂಲಕ. ಮಕ್ಕಳ ಜೊತೆ ಕುಳಿತು ಟಿವಿ ವೀಕ್ಷಣೆ ಮಾಡುವ ಕೆಲ್ಲಿ, ನಂತ್ರ ಮಕ್ಕಳನ್ನು ಸ್ಕೂಲ್ ಗೆ ಬಿಟ್ಟು ಬರ್ತಾಳೆ. ಆ ಮೇಲೆ ಮನೆಯಲ್ಲಿರುವ ಕಿರಿಯ ಹುಡುಗ ಹ್ಯಾಂಪ್ಟನ್‌ ಜೊತೆ ಸ್ಟಾರ್‌ಬಕ್ಸ್‌ನಲ್ಲಿ ಕುಳಿತು ಕಾಫಿ ಕುಡಿಯುವುದು, ಜಿಮ್​​ಗೆ ಹೋಗ್ತಾಳೆ. ಅಲ್ಲಿ ಹ್ಯಾಂಪ್ಟನ್ ಆಟ ಆಡಿದ್ರೆ, ಕೆಲ್ಲಿ ಜಿಮ್ ಮಾಡ್ತಾಳೆ. ಹ್ಯಾಂಪ್ಟನ್ ಮತ್ತು ಕೆಲ್ಲಿ ಮೂರು ಗಂಟೆಗಳ ಕಾಲ ನಿದ್ರೆ ಮಾಡ್ತಾರೆ. ಇದಾದ್ಮೇಲೆ ಹ್ಯಾಂಪ್ಟನ್ ಸಹೋದರರನ್ನು ಶಾಲೆಯಿಂದ ಕರೆದುಕೊಂಡು ಬರಲು ಹೋಗುವ ಕೆಲ್ಲಿ, ಅವರು ಬಂದ್ಮೇಲೆ ಅವರ ಜೊತೆ ಸ್ವಲ್ಪ ಆಹಾರ ಸೇವನೆ ಮಾಡಿ, ಆಟ ಆಡ್ತಾಳೆ. ಅಲ್ಲಿಗೆ ಸಂಜೆ ಆಗುವ ಕಾರಣ ಆಕೆ ಕೆಲಸ ಮುಗಿಯುತ್ತದೆ. ಮಕ್ಕಳ ಜೊತೆ ಆಟ, ಟಿವಿ, ನಿದ್ರೆಯನ್ನು ಎಂಜಾಯ್ ಮಾಡುವ ಕೆಲ್ಲಿ, ಕೈತುಂಬ ಸಂಬಳ ಕೂಡ ಪಡೆಯುತ್ತಿದ್ದಾಳೆ.

    ಅಮೆರಿಕ ಕಂಪನಿಗಳ ರಫ್ತು ವಹಿವಾಟಿನ ಶಕ್ತಿ ಕೇಂದ್ರವಾಗಿ ಭಾರತ ಹೊರಹೊಮ್ಮುತ್ತಿದೆ: ಬಿಸಿಜಿ ವರದಿ

    ರಾಜ್ಯೋತ್ಸವ ರಸಪ್ರಶ್ನೆ - 22

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts