More

  ಅಮೆರಿಕ ಕಂಪನಿಗಳ ರಫ್ತು ವಹಿವಾಟಿನ ಶಕ್ತಿ ಕೇಂದ್ರವಾಗಿ ಭಾರತ ಹೊರಹೊಮ್ಮುತ್ತಿದೆ: ಬಿಸಿಜಿ ವರದಿ

  ನವದೆಹಲಿ:  ಅಮೆರಿಕದ ಕಂಪನಿಗಳಿಗೆ ಭಾರತವು ಭವಿಷ್ಯದ ರಫ್ತು ವಹಿವಾಟಿನ ಶಕ್ತಿ ಕೇಂದ್ರಗಳಲ್ಲಿ ಒಂದಾಗಿದೆ ಎಂದು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ (Boston Consulting Group) BCG  ವರದಿ ಮಾಡಿದೆ.

  ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ನ ವರದಿಯ ಪ್ರಕಾರ, ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾದಿಂದ ಆಮದು ವಹಿವಾಟುಗಳನ್ನು ಗಮನಾರ್ಹವಾಗಿ ಕಡಿತಗೊಳಿಸಲು ನೋಡುತ್ತಿರುವ ಕಾರಣ, ಅಮೆರಿಕದ ಕಂಪನಿಗಳಿಗೆ ಭಾರತವು ಭವಿಷ್ಯದ ರಫ್ತು ವಹಿವಾಟಿನ ಶಕ್ತಿ ಕೇಂದ್ರಗಳಲ್ಲಿ ಒಂದಾಗಿದೆ.

  ಭಾರತ, ಮೆಕ್ಸಿಕೊ ಮತ್ತು ಆಗ್ನೇಯ ಏಷ್ಯಾವು ರಫ್ತು ಸರಕುಗಳ ಉತ್ಪಾದನೆಯ ಶಕ್ತಿ ಕೇಂದ್ರಗಳಾಗಿ ಶೀಘ್ರವಾಗಿ ಹೊರಹೊಮ್ಮುತ್ತಿವೆ. 3 ರಾಷ್ಟ್ರಗಳು ಸ್ಪರ್ಧಾತ್ಮಕ ವೆಚ್ಚ ರಚನೆಗಳನ್ನು ಹೊಂದಿರುವ ಜತೆಗೆ, ಅಪಾರ ಸಂಖ್ಯೆಯ ಕೌಶಲ್ಯಯುತ ಕಾರ್ಮಿಕ ಬಲ ಮತ್ತು ವೈವಿಧ್ಯಮಯ ಕೈಗಾರಿಕೆಗಳಲ್ಲಿ ಬೆಳೆಯುತ್ತಿರುವ ಪ್ರಮಾಣ ಮತ್ತು ಸಾಮರ್ಥ್ಯಗಳನ್ನು ಹೊಂದಿವೆ. ಭಾರತವು ಸಂಭಾವ್ಯ ವಿಶಾಲ ದೇಶೀಯ ಮಾರುಕಟ್ಟೆ ಸೃಷ್ಟಿಸಿಕೊಂಡಿರುವ ಹೆಚ್ಚುವರಿ ಪ್ರಯೋಜನ ಹೊಂದಿದೆ ಎಂದು ವರದಿ ಹೇಳಿದೆ.

  ಭಾರತವು ಇಂಜಿನ್‌ಗಳು ಮತ್ತು ಟರ್ಬೈನ್‌ಗಳ ಉತ್ಪಾದಕ ದೇಶವಾಗಿ ತ್ವರಿತವಾಗಿ ಅಥವಾ ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಇದು ಸಂಭಾವ್ಯ ಅಗಾಧವಾದ ದೇಶೀಯ ಮಾರುಕಟ್ಟೆ ಸೃಷ್ಟಿಸಿಕೊಂಡಿರುವ ಹೆಚ್ಚುವರಿ ಪ್ರಯೋಜನ ಹೊಂದಿದೆ ಎಂದು ಬಿಸಿಜಿ ವರದಿ ಬೊಟ್ಟು ಮಾಡಿದೆ. ಸಾಧಾರಣವಾಗಿ, ಸಾಧನ ಸಲಕರಣೆಗಳ ಜೋಡಣೆ(ಅಸೆಂಬ್ಲಿ) ವೆಚ್ಚ ಮತ್ತು ಕಾರ್ಮಿಕರ ಕೊರತೆ ಸಮಸ್ಯೆಗಳು ಮತ್ತು ಅಡೆತಡೆಗಳು ಅಮೆರಿಕದಲ್ಲಿ ನಿರಂತರ ಚಿಂತೆಗೀಡು ಮಾಡುವ ವಿಷಯವಾಗಿ ತಲೆದೋರಿದೆ ಎಂದು ವರದಿ ಬೆಳಕು ಚೆಲ್ಲಿದೆ.

  ತ್ವರಿತ ಸಮಯದಲ್ಲಿ ಸುಧಾರಿತ ವ್ಯವಸ್ಥೆಯ ಅಳವಡಿಕೆಯೊಂದೇ ಸಂಯೋಜನೆಯ ಒಂದು ಆಯ್ಕೆಯಾಗಿದೆ. ಅದೆಂದರೆ, ಸಾಧನ ಸಲಕರಣೆಗಳು ಮತ್ತು ಉಪಕರಣಗಳ ಅಂತಿಮ ಜೋಡಣೆ(ಅಸೆಂಬ್ಲಿ)ಗಳನ್ನು ಮೆಕ್ಸಿಕೊಗೆ ಮತ್ತು ಬಿಡಿಭಾಗ(ಘಟಕ)ಗಳನ್ನು ಜರ್ಮನಿಗೆ ವರ್ಗಾಯಿಸುವುದೇ ಆಗಿದೆ. ಎರಡನೆಯ ಆಯ್ಕೆಯು ಉತ್ಪಾದನಾ ವೆಚ್ಚ ಕಡಿಮೆ ಮಾಡುವ ಮೇಲೆ ಗಮನ ಕೇಂದ್ರೀಕರಿಸುತ್ತಿದೆ. ಸಾಧನ ಸಲಕರಣೆಗಳ ಜೋಡಣೆ ಮತ್ತು ಖರೀದಿ ವ್ಯವಸ್ಥೆಯನ್ನು ಭಾರತಕ್ಕೆ ವರ್ಗಾಯಿಸುವುದಾಗಿದೆ. ಮೆಕ್ಸಿಕೊ-ಜರ್ಮನಿ ಆಯ್ಕೆಗಿಂತ ಅಮೆರಿಕ ಮಾರುಕಟ್ಟೆಯ ಸಮಯ ನಿಧಾನ ಗತಿಯದ್ದಾಗಿದೆ ಅಥವಾ ಯಥಾಸ್ಥಿತಿಯದ್ದಾಗಿರಬಹುದು. ಆದರೆ ಸಂಭಾವ್ಯ ವೆಚ್ಚ ಉಳಿತಾಯವು 25%ನಿಂದ 40% ವರೆಗೆ ಇರುತ್ತದೆ ಎಂಬುದನ್ನು ವರದಿ ಗಮನಿಸಿದೆ.

  “ಭಾರತವು ತುಂಬಾ ಸ್ಪರ್ಧಾತ್ಮಕವಾದ ವೆಚ್ಚ ವ್ಯವಸ್ಥೆ ಹೊಂದಿದೆ. ಅದು ಇತ್ತೀಚೆಗೆ ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ಭಾರತವು ಪ್ರಮುಖ ರಫ್ತುದಾರ ರಾಷ್ಟ್ರವಾಗಿ ಹೊರಹೊಮ್ಮಲು ಪ್ರಾರಂಭಿಸುತ್ತಿದೆಯಾದರೂ, ಇದು ಎಲೆಕ್ಟ್ರಿಕ್ ವಾಹನಗಳಿಂದ ಹಿಡಿದು ಬೃಹತ್ ಯಂತ್ರೋಪಕರಣಗಳು, ರಾಸಾಯನಿಕಗಳು, ಸಲಕರಣೆಗಳು ಸೇರಿದಂತೆ ಎಲ್ಲವನ್ನೂ ತನ್ನ ದೇಶೀಯ ಮಾರುಕಟ್ಟೆಗೆ ಪೂರೈಸುವ ವಿಶಾಲ ಉತ್ಪಾದನಾ ನೆಲೆಯನ್ನು ಹೊಂದಿದೆ” ಎಂದು ವರದಿ ಹೇಳಿದೆ.

  ಅಧ್ಯಯನದ ಪ್ರಕಾರ, ಭಾರತವು ಉದಯೋನ್ಮುಖ ರಫ್ತು ವೇದಿಕೆಯಾಗಿ ನೇರ ಉತ್ಪಾದನಾ ವೆಚ್ಚದ ವಿಷಯದಲ್ಲಿ ಬಲವಾದ ಪ್ರಯೋಜನಗಳನ್ನು ಹೊಂದಿದೆ. ಬಿಸಿಜಿ ಲೆಕ್ಕಾಚಾರಗಳ ಪ್ರಕಾರ, ಉತ್ಪಾದಕತೆ, ಸರಕು ಸಾಗಣೆ ವಚ್ಚ, ಸುಂಕಗಳು ಮತ್ತು ಇಂಧನಕ್ಕೆ ಸರಿಹೊಂದಿಸಲಾದ ಕಾರ್ಖಾನೆಯ ವೆಚ್ಚ(ಕೂಲಿ) ಸೇರಿದಂತೆ ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಭಾರತೀಯ ನಿರ್ಮಿತ ಸರಕುಗಳ ಸರಾಸರಿ ಖರೀದಿ ವೆಚ್ಚವು(ಲ್ಯಾಂಡೆಡ್ ಕಾಸ್ಟ್) ಅಮೆರಿಕದಲ್ಲಿ ತಯಾರಿಸಿದ ಸರಕುಗಳಿಗಿಂತ 15% ಕಡಿಮೆಯಾಗುತ್ತದೆ. ಅದೇ ಚೀನಾದಿಂದ ಸರಕುಗಳನ್ನು ಆಮದು ಮಾಡಿಕೊಂಡರೆ ಅದರ ವೆಚ್ಚ ಪ್ರಯೋಜನವು ಕೇವಲ 4% ಆಗುತ್ತದೆ.

  ಗಮನಾರ್ಹ ಸಂಗತಿ ಎಂದರೆ, ಭಾರತವು ಕಳೆದ 5 ವರ್ಷಗಳಲ್ಲಿ ಜಾಗತಿಕ ಉತ್ಪಾದನೆ ಅಥವಾ ತಯಾರಿಕೆ ರಂಗದಲ್ಲಿ ವಿಜೇತನಾಗಿ ಹೊರಹೊಮ್ಮಿದೆ, ಅಮೆರಿಕಕ್ಕೆ ಭಾರತದ ರಫ್ತು ವಹಿವಾಟು 23 ಶತಕೋಟಿ ಡಾಲರ್ ನಷ್ಟು ಏರಿಕೆಯಾಗಿದೆ, 2018ರಿಂದ 2022ರ ವರೆಗೆ ರಫ್ತು ವಹಿವಾಟಿನಲ್ಲಿ 44% ಹೆಚ್ಚಳವಾಗಿದೆ. ಅದೇ ಅವಧಿಯಲ್ಲಿ, ಚೀನಾದಿಂದ ಅಮೆರಿಕದ ಸರಕುಗಳ ಆಮದು ಪ್ರಮಾಣ ಶೇ.10ರಷ್ಟು ಕುಸಿದಿದೆ. 2018ರಿಂದ 2022ರ ವರೆಗೆ ಚೀನಾದಿಂದ ಯಂತ್ರೋಪಕರಣಗಳ ಅಮೆರಿಕ ಆಮದು 28%ರಷ್ಟು ಕುಗ್ಗಿದೆ. ಆದರೆ ಮೆಕ್ಸಿಕೊದಿಂದ 21%, ಆಸಿಯಾನ್ ನಿಂದ 61% ಮತ್ತು ಭಾರತದಿಂದ 70% ಹೆಚ್ಚಳವಾಗಿದೆ ಎಂಬ ಅಂಕಿಅಂಶಗಳನ್ನು ವರದಿ ಮುಂದಿಟ್ಟಿದೆ.

  Success Story: ಸರ್ಕಾರಿ ಹುದ್ದೆ ತೊರೆದು ಹಳ್ಳಿಗೆ ಬಂದು ರೈತನಾದ ಯುವಕ; ಅಲೋವೆರಾ ಬೆಳೆದು ಯಶಸ್ಸು ಕಂಡ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts