

ಆಂಧ್ರಪ್ರದೇಶ: ಕೆಲವು ಪ್ರದೇಶಗಳಿಂದ ಪಲ್ಸರ್ ಬೈಕ್ ಕಣ್ಮರೆಯಾಗುತ್ತಿವೆ. ಕಳೆದ ಮೂರು ತಿಂಗಳಲ್ಲಿ ಹತ್ತಾರು ಬೈಕ್ ಗಳು ನಾಪತ್ತೆಯಾಗಿವೆ ಎಂದು ಪೊಲೀಸರಿಗೆ ದೂರು ಬಂದಿತ್ತು. ಈ ಕುರಿತಾಗಿ ತನಿಖೆ ಕೈಗೊಂಡ ಪೊಲೀಸರು ಕಳ್ಳರ ಗ್ಯಾಂಗನ್ನು ಪತ್ತೆ ಹಚ್ಚಿದೆ.
ಪಲ್ಸರ್ ಬೈಕ್ ಅನ್ನು ಟಾರ್ಗೆಟ್ ಮಾಡುತ್ತಿದ್ದ ಗ್ಯಾಂಗ್ ಸಿಕ್ಕಿ ಬಿದ್ದಿದೆ. ಪಲ್ಸರ್ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಯುವಕರನ್ನು ಅಲ್ಲೂರಿ ಸೀತಾರಾಮರಾಜು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಸಿಗುಡು ಕಾಮೇಶ್ವರ ರಾವ್, ಸಿಡಿರಿ ಮಹೇಶ್ ಮತ್ತು ಕೊರ್ರ ಶ್ರೀನು ಬಂಧಿತರು.
ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಪಾಡೇರು, ಜಿಮಡುಗುಳ, ಚಿಂತಪಲ್ಲಿ ಮಂಡಲ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ದ್ವಿಚಕ್ರ ವಾಹನಗಳು ಕಳ್ಳತನವಾಗುತ್ತಿವೆ. ಕಳೆದ ಮೂರು ತಿಂಗಳಲ್ಲಿ ಒಂದೇ ಮಾದರಿಯ ಬೈಕ್‌ಗಳು ಕಣ್ಮರೆಯಾಗುತ್ತಿವೆ. ಪಲ್ಸರ್ ಬೈಕ್ ಗಳನ್ನೂ ಕಳ್ಳತನ ವಾಗುತ್ತಿರುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ವಾಹನ ಸವಾರರು ಪಲ್ಸರ್ ಬೈಕ್‌ಗಳ ಬಗ್ಗೆ ವಿಶೇಷ ನಿಗಾವಹಿಸಿದ್ದರು. ಆಗಾಗ ಪ್ರಕರಣಗಳು ದಾಖಲಾಗುತ್ತಿರುವುದರಿಂದ ಪೊಲೀಸರು ವಿಶೇಷ ತಂಡವನ್ನು ಕ್ಷೇತ್ರಕ್ಕೆ ಕಳುಹಿಸಿದ್ದಾರೆ.
ಪಲ್ಸರ್ ಬೈಕ್ ಕಾರ್ಯಾಚರಣೆ ವೇಳೆ ಕಳ್ಳರ ಗ್ಯಾಂಗ್ನ ಮೂವರು ಸಿಕ್ಕಿಬಿದ್ದಿದ್ದಾರೆ. ಮೂವರನ್ನು ಕಾಮೇಶ್ವರ ರಾವ್, ಮಹೇಶ್ ಮತ್ತು ಶ್ರೀನು ಎಂದು ಗುರುತಿಸಲಾಗಿದ್ದು, ಅವರಿಂದ 10 ಪಲ್ಸರ್ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.