More

    ಚೆಂದ ಕಾಣ್ಬೇಕು ಅಂತಾ..ಪ್ಲಾಸ್ಟಿಕ್ ಸರ್ಜರಿಗಾಗಿ ಮನೆ ಮಾರಿದ ಮಹಿಳೆ; ಮುಂದೇನಾಯ್ತು?…..

    ಅಮೆರಿಕ: ಸೌಂದರ್ಯದ ಕುರಿತಾಗಿ ಮಹಿಳೆಯರು ಹೆಚ್ಚಿನ ಮಹತ್ವ ಕೊಡುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಪ್ರಾಡೆಕ್ಟ್​​ಗಳನ್ನು ತಂದು ಮನೆಯಲ್ಲಿ ಪ್ರಯೋಗಮಾಡುತ್ತಾರೆ. ಬ್ಯೂಟಿಪಾರ್ಲರ್​ ಮೊರೆ ಹೋಗುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ದುಬಾರಿ ಹಣ ನೀಡಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಹೀಗೆ ಮಹಿಳೆಯೊಬ್ಬಳು  ಮನೆಯನ್ನೇ ಮಾರಾಟ ಮಾಡಿ ಸರ್ಜರಿ ಮಾಡಿಸಿಕೊಂಡಿದ್ದಾಳೆ.

    ಕ್ಯಾಲಿಫೋರ್ನಿಯಾದ ಲೇಕ್ ತಾಹೋದ ಮಹಿಳೆ ಹೆಸರು ಕೆಲ್ಲಿ ಬೀಸ್ಲಿ. ಈಕೆ ಮೂಲತಃ ಬ್ಲಾಗರ್. ವಯಸ್ಸಿನ ಕಾರಣಕ್ಕೆ ಕೆಲ್ಲಿ ಬೀಸ್ಲಿ ಮುಖದ ಚರ್ಮ ಜೋತು ಬೀಳಲು ಶುರುವಾಗಿತ್ತು. ಅದರ ಬಗ್ಗೆ ಅವಳು ತುಂಬಾ ಚಿಂತಿತಳಾಗಿದ್ದಳು. 48 ನೇ ವಯಸ್ಸಿನಲ್ಲಿ ಮುಖದ ಚರ್ಮ ಸುಕ್ಕುಗಟ್ಟಲು ಶುರುವಾಗಿತ್ತು. ಮುಖ ಶುಷ್ಕವಾಗುತ್ತಿತ್ತು. ಚರ್ಮವನ್ನು ಆರೋಗ್ಯಕರವಾಗಿಡಲು ಬೀಸ್ಲಿ ಕಳೆದ 15 ವರ್ಷಗಳಿಂದ ಈ ಕುರಿತಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಳು. ಯಾವುದೇ ಪ್ರಯೋಜನವಾಗಲಿಲ್ಲ.

     ಇದನ್ನೂ ಓದಿ:  50ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ; 80 ಎಕರೆಯಲ್ಲಿ 1.2 ಮಿಲಿಯನ್ ಸೂರ್ಯಕಾಂತಿ ಹೂ ಬೆಳೆದು ಪತ್ನಿಗೆ ಸರ್‌ಫ್ರೈಸ್ ಕೊಟ್ಟ ರೈತ

    ತನಗೆ ವಯಸ್ಸಾಗ್ತಿದೆ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ಆಗ್ತಿಲ್ಲ. ತಾನು ಸದಾ ಯಂಗ್ ಆಗಿ ಕಾಣ್ಬೇಕು ಎನ್ನುವ ಕಾರಣಕ್ಕೆ ಪ್ಲಾಸ್ಟಿಕ್ ಸರ್ಜರಿಗೆ ನಿರ್ಧರಿಸಿದ್ದಳು. ಈಕೆ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗಾಗಿ ಮನೆ ಮಾರಾಟ ಮಾಡಿದ್ದಾಳೆ.

    ಇದನ್ನೂ ಓದಿ: Friendship Day: ಫ್ರೆಂಡ್‌ಶಿಪ್ ಬ್ಯಾಂಡ್ ಖರೀದಿಸುತ್ತೀರಾ, ಯಾವ ಬಣ್ಣ ಏನನ್ನು ಸೂಚಿಸುತ್ತದೆ…?

    ಕೆಲ್ಲಿ ಬೀಸ್ಲಿ ತನ್ನ ಸೌಂದರ್ಯ ಚಿಕಿತ್ಸೆಗೆ ಮೂರು ಕೋಣೆಗಳಿರುವ ಮನೆಯನ್ನು ಮಾರಾಟ ಮಾಡಿ ಶಸ್ತ್ರಚಿಕಿತ್ಸೆಗೆ ಹಣ ಹೊಂದಿಸಿದ್ದಾಳೆ. ಮೆಕ್ಸಿಕೋದ ಟಿಜುವಾನಾದಲ್ಲಿ ಕೇವಲ 11.51 ಲಕ್ಷ ರೂಪಾಯಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ. ಆದರೆ ಇರುವ ಒಂದು ಮನೆಯನ್ನು ಮಾರಾಟ ಮಾಡಿರುವದರಿಂದ ಆಕೆಗೆ ವಾಸಿಸಲು ಮನೆ ಇಲ್ಲದಂತಾಗಿದೆ. ಹೀಗಾಗಿ ತನ್ನ ಬಳಿಯೇ ಇರುವ ವ್ಯಾನ್​ನಲ್ಲಿ ಜೀವನ ನಡೆಸುತ್ತಿದ್ದಾಳೆ.

    ನಿಮಗಿದು ಗೊತ್ತಾ? ಚಿನ್ನಾಭರಣದಿಂದ ಸೌಂದರ್ಯವಷ್ಟೇ ಅಲ್ಲ ಆರೋಗ್ಯಕ್ಕೂ ಪ್ರಯೋಜನಗಳಿವೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts