

ಬೆಂಗಳೂರು: ಚಿನ್ನಾಭರಣಗಳನ್ನು ಧರಿಸುವುದರಿಂದ ಆರೋಗ್ಯದ ಲಾಭವೂ ಇದೆ ಎಂದು ನಿಮಗೆ ತಿಳಿದಿದೆಯೇ? ಮಹಿಳೆಯರು ಆಭರಣ ಪ್ರಿಯರು. ಚಿನ್ನದ ಆಭರಣಗಳನ್ನು ಧರಿಸುವುದು ಆರೋಗ್ಯಕ್ಕೂ ಒಳ್ಳೆಯದು ಎಂದು ನಮ್ಮಲ್ಲಿ ಅನೇಕರಿಗೆ ತಿಳಿದಿಲ್ಲ. ಚಿನ್ನಾಭರಣ ಎಂದರೆ ತುಂಬಾ ಇಷ್ಟ ಪಡುವ ಹೆಂಗಳೆಯರಿಗೆ ನಾವು ಒಂದು ಆಯುರ್ವೇದದಲ್ಲಿ ಚಿನ್ನಕ್ಕೆ ವಿಶೇಷ ಮಹತ್ವವಿದೆ. ಚಿನ್ನಾಭರಣದಿಂದ ಸೌಂದರ್ಯವಷ್ಟೇ ಅಲ್ಲ ಆರೋಗ್ಯಕ್ಕೂ ಒಳ್ಳೆಯದು ಎಂಬುದನ್ನು ತಿಳಿಸಿಕೊಡುತ್ತೇವೆ ಬನ್ನಿ.
ಚಿನ್ನವು ಹಲವಾರು ಔಷಧೀಯ ಗುಣಗಳಿಂದ ಕೂಡಿದೆ. ದೇಹಕ್ಕೆ ಹಲವಾರು ಔಷಧೀಯ ಪ್ರಯೋಜನಗಳನ್ನು ನೀಡುತ್ತದೆ. ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಇದು ಹಲವು ಅಧ್ಯಯನಗಳಲ್ಲಿ ಬಹಿರಂಗವಾಗಿದೆ.
1) ಚಿನ್ನವು ತಾಪಮಾನವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ದೇಹದ ಉಷ್ಣತೆಯ ಏರಿಳಿತಗಳಿಂದ ವ್ಯಕ್ತಿಯನ್ನು ರಕ್ಷಿಸುತ್ತದೆ.
2) ಚಿನ್ನವು ರಕ್ತ ಪರಿಚಲನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಚಿನ್ನದ ಆಭರಣಗಳನ್ನು ಧರಿಸುವುದರಿಂದ ದೇಹದ ವಿವಿಧ ಭಾಗಗಳಿಗೆ ಆಮ್ಲಜನಕದ ಹರಿವು ಸುಧಾರಿಸುತ್ತದೆ.
3) ಚಿನ್ನವನ್ನು ಧರಿಸುವುದರಿಂದ ತಲೆನೋವು ಕೂಡ ಕಡಿಮೆಯಾಗುತ್ತದೆ. ತೋರುಬೆರಳಿನ ಒತ್ತಡದ ಬಿಂದುವು ತಲೆನೋವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ನೀವು ಉಂಗುರವನ್ನು ಧರಿಸಿದಾಗ ಈ ಒತ್ತಡ ಪ್ರಯೋಜನಕಾರಿಯಾಗಿದೆ ಎಂದು ಹೇಳಲಾಗುತ್ತದೆ.
6) ಚಿನ್ನಾಭರಣಗಳನ್ನು ಧರಿಸುವುದರಿಂದ ಆತ್ಮವಿಶ್ವಾಸವೂ ಹೆಚ್ಚುತ್ತದೆ.
5) ಚಿನ್ನದ ಬಳಕೆಯಿಂದ ಮುಖ ಕಾಂತಿಯುತವಾಗುವುದಲ್ಲದೆ ತ್ವಚೆಯು ಯೌವನವಾಗಿ ಕಾಣುವಂತೆ ಮಾಡುತ್ತದೆ.
6) ಸೋಂಕುಗಳ ವಿರುದ್ಧ ಹೆಚ್ಚುವರಿ ರಕ್ಷಣೆಯೊಂದಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು.