

ನವದೆಹಲಿ: ಜೋಡಿಯೊಂದು ತಮ್ಮ 50ನೇ ವಿವಾಹ ವಾರ್ಷಿಕೋತ್ಸವವನ್ನು ವಿಭಿನ್ನವಾಗಿ ಆಚರಿಸುವ ಮೂಲಕವಾಗಿ ಸುದ್ದಿಯಲ್ಲಿದೆ. ಹೌದು ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ಸರ್‌ಫ್ರೈಸ್ ನೀಡುವುದಕ್ಕಾಗಿ ಪತಿಯೋರ್ವ ಬರೋಬ್ಬರಿ 80 ಎಕರೆಯಲ್ಲಿ ಸೂರ್ಯಕಾಂತಿ ಹೂಗಳನ್ನು ಬೆಳೆದಿದ್ದಾರೆ.
ಪತ್ನಿಗೆ ವಿಭಿನ್ನವಾಗಿ, ವಿಶೇಷವಾಗಿ ಹೂಗಳಿಂದ ಸರ್‌ಫ್ರೈಸ್ ನೀಡಿದ ಲೀ ವಿಲ್ಸನ್, ಅಮೆರಿಕಾದ ಕಾನ್ಸಸ್‌ನಲ್ಲಿ ರೈತರಾಗಿರುವ ಇವರು ತಮ್ಮ ಪತ್ನಿ ರೀನೆಗೆ ಸೂರ್ಯಕಾಂತಿ ಹೂಗಳ ಮೇಲಿದ್ದ ಪ್ರೀತಿಯ ಕಾರಣಕ್ಕೆ ಆಕೆಗೆ ತಮ್ಮ 50ನೇ ವಿವಾಹ ವಾರ್ಷಿಕೋತ್ಸವದಂದು ಹೂಗಳಿಂದಲೇ ವಿಶೇಷ ಸರ್‌ಫ್ರೈಸ್ ನೀಡಿದ್ದಾರೆ. ಈ ಅಪೂರ್ವ ಕ್ಷಣಕ್ಕಾಗಿ ಅವರು ಸುಮಾರು 80 ಎಕರೆಯಲ್ಲಿ 1.2 ಮಿಲಿಯನ್ ಸೂರ್ಯಕಾಂತಿ ಹೂಗಳನ್ನು ಬೆಳೆದು ಅಚ್ಚರಿ ಮೂಡಿಸಿದ್ದಾರೆ.
ಈ ಜೋಡಿ ಆಗಸ್ಟ್ 10 ರಂದು ವಿವಾಹ ವಾರ್ಷಿಕೋತ್ಸವ ಆಚರಿಸುತ್ತಿದೆ. ಅಪ್ಪ ಹಾಗೂ ಮಗ ಇಬ್ಬರೂ ಸೇರಿ ಈ ಸೂರ್ಯಕಾಂತಿ ಹೂ ಗಿಡಗಳ ನಾಟಿಯ ವಿಚಾರವನ್ನು ಹೂಗಳು ಅರಳುವವರೆಗೂ ಹೇಳದೇ ರಹಸ್ಯವಾಗಿಟ್ಟಿದ್ದರು. ವಿವಾಹ ವಾರ್ಷಿಕೋತ್ಸವದ ದಿನ ಹತ್ತಿರ ಬರುತ್ತಿದ್ದಂತೆ ಹೂಗಳು ಅರಳಿದ್ದು, ಲೀ ವಿಲ್ಸನ್ ಅವರು ತಮ್ಮ ಪತ್ನಿ ರೀನೆಯನ್ನು ಅವರ ಅಚ್ಚುಮೆಚ್ಚಿನ ಹೂ ಸೂರ್ಯಕಾಂತಿ ಬೆಳೆದು ನಿಂತಿರುವ ಹೊಲಕ್ಕೆ ಕರೆದುಕೊಂಡು ಹೋಗಿದ್ದು, ಪತಿಯ ಈ ವಿಶೇಷ ಸರ್‌ಫ್ರೈಸ್ ನೀಡಿದ್ದಾರೆ.
ಹೆಂಡತಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು 80 ಎಕರೆ ಸೂರ್ಯಕಾಂತಿಗಳನ್ನು ನೆಟ್ಟಿದ್ದಾನೆ. ನೂರಾರು ಸೂರ್ಯಕಾಂತಿಗಳಿಂದ ಅರಳಿದ ಸುಂದರ ಮೈದಾನದಲ್ಲಿ ದಂಪತಿ ನಡೆದಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ವಯೋವೃದ್ಧ ಪತಿಯ ಈ ವಿಶಿಷ್ಟವಾದ ಸರ್‌ಫ್ರೈಸ್‌ಗೆ ಪತ್ನಿ ಮಾತ್ರವಲ್ಲ, ಇಡೀ ಸಾಮಾಜಿಕ ಜಾಲತಾಣವೇ ಅಚ್ಚರಿಯ ಜತೆ ಸಂತೋಷ ವ್ಯಕ್ತಪಡಿಸಿದೆ.
ನಿಜವಾದ ಮದುವೆ ಹೀಗಿರಬೇಕು, ಸಂಗಾತಿಗಳು ಒಬ್ಬರನ್ನೊಬ್ಬರು ಪ್ರೀತಿ, ಗೌರವಿಸಬೇಕು ಮತ್ತು ಪರಸ್ಪರ ಅಭಿಪ್ರಾಯಗಳನ್ನು ಕೇಳಬೇಕು, ಈ ದಂಪತಿ ದೀರ್ಘ ಆರೋಗ್ಯವಂತರಾಗಿ ಬದುಕಬೇಕೆಂದು ನಾನು ಬಯಸುತ್ತೇನೆ. ಇಂತಹ ಭವ್ಯವಾದ ಉಡುಗೊರೆ ನೀಡಿರುವ ಮತ್ತು ಗಿಫ್ಟ್ ಪಡೆದಿರುವ ದಂಪತಿ ಪ್ರೀತಿ ನೆಟ್ಟಿಗರು ಇಷ್ಟ ಪಟ್ಟು ಕಾಮೆಂಟ್ ಮಾಡಿದ್ದಾರೆ.