ಈ ಇಬ್ಬರು ಸ್ಟಾರ್​ ನಟರ ಬಹುನಿರೀಕ್ಷಿತ ಚಿತ್ರಗಳ ವೀಕ್ಷಿಸಲು ನಿಜಕ್ಕೂ ತಾಳ್ಮೆ ಬೇಕು! ಅದಕ್ಕೆ ಕಾರಣವೂ ಇದೆ

ವಿಜಯವಾಣಿ (3)
Published on

ಆಂಧ್ರಪ್ರದೇಶ: ಪ್ರಸ್ತುತ ದಿನಗಳಲ್ಲಿ ಭಾರತೀಯ ಚಿತ್ರೋದ್ಯಮದಿಂದ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿರುವ ಯಾವ ಸಿನಿಮಾಗಳು ಅಷ್ಟಾಗಿ ಕಮಾಲ್ ಮಾಡುತ್ತಿಲ್ಲ. ಬಾಲಿವುಡ್​, ಸ್ಯಾಂಡಲ್​ವುಡ್​, ಟಾಲಿವುಡ್, ಮಾಲಿವುಡ್​ ಸೇರಿದಂತೆ ಇತರೆ ಚಿತ್ರರಂಗದ ಸಿನಿಮಾಗಳು ಥಿಯೇಟರ್​ಗೆ ಭರ್ಜರಿ ಎಂಟ್ರಿ ಕೊಟ್ಟರೂ ಸಹ ಪ್ರೇಕ್ಷಕರ ಮೆಚ್ಚುಗೆ ಗಳಿಸಿ, ಹೆಚ್ಚು ದಿನಗಳ ಕಾಲ ಬೆಳ್ಳಿ ಪರದೆಯ ಮೇಲೆ ಉಳಿಯಲು ಪರದಾಡುತ್ತಿದೆ. ಆದ್ರೆ, ಮುಂದಿನ ಎರಡು ವಾರಗಳ ನಂತರ ತೆಲುಗು ಹಾಗೂ ತಮಿಳು ಚಿತ್ರರಂಗದಿಂದ ಇಬ್ಬರು ಸ್ಟಾರ್ ನಟರ ಬಹುನಿರೀಕ್ಷಿತ ಚಿತ್ರಗಳು ರಿಲೀಸ್ ಆಗಲು ಸಜ್ಜಾಗಿದ್ದು, ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಕೆರಳಿಸಿದೆ.

ತೆಲುಗು ನಟ ನ್ಯಾಚುರಲ್ ಸ್ಟಾರ್​ ನಾನಿ ಅಭಿನಯದ ಸರಿಪೋದ ಶನಿವಾರಂ ಚಿತ್ರ ಒಂದೆಡೆಯಾದರೆ, ತಮಿಳು ನಟ ಥಳಪತಿ ವಿಜಯ್ ನಟನೆಯ ದಿ ಗೋಟ್​ ಸಿನಿಮಾ ಮತ್ತೊಂದೆಡೆ. ಈ ಎರಡು ಚಿತ್ರಗಳು ಈಗಾಗಲೇ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹಾಗೂ ಭರವಸೆ ಹುಟ್ಟಿಸಿದ್ದು, ಚಿತ್ರಮಂದಿಗಳಲ್ಲಿ ಹೇಗೆ ಕಮಾಲ್ ಮಾಡಲಿದೆ? ಉತ್ತಮ ರೆಸ್ಪಾನ್ಸ್ ಪಡೆಯಲಿದ್ಯಾ? ಎಂಬುದನ್ನು ತಿಳಿಯಲು ಸದ್ಯ ಕಾದು ನೋಡಬೇಕಿದೆ. ಅತೀ ಮುಖ್ಯವಾಗಿ ಇವರಿಬ್ಬರದ್ದು ಕೂಡ ಆ್ಯಕ್ಷನ್​ ಜಾನರ್​ ಚಿತ್ರಗಳಾಗಿದ್ದು, ನೋಡುಗರಿಗೆ ಖಂಡಿತ ಭರಪೂರ ಮನರಂಜನೆ ದೊರೆಯುವುದು ಖಚಿತ ಎಂದೇ ಹೇಳಲಾಗುತ್ತಿದೆ.

ವಿವೇಕ್ ಆಥ್ರೇಯಾ ನಿರ್ದೇಶನದ ಹಾಗೂ ನಾನಿ ಅಭಿನಯದ ಸರಿಪೋದ ಶನಿವಾರಂ ಚಿತ್ರವು ಇದೇ ಆಗಸ್ಟ್​ 29ರಂದು ರಿಲೀಸ್ ಆಗಲು ಸಜ್ಜಾಗಿದೆ. ಇನ್ನು ವೆಂಕಟ್​ ಪ್ರಭು ಆ್ಯಕ್ಷನ್​ ಕಟ್​​ ಹೇಳಿರುವ ವಿಜಯ್ ನಟನೆಯ ದಿ ಗೋಟ್​ ಮುಂದಿನ ತಿಂಗಳು ಸೆಪ್ಟಂಬರ್​ 05ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಎರಡು ಚಿತ್ರಗಳಿಗೂ ಸೆನ್ಸಾರ್​ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಲಭಿಸಿದ್ದು, ರನ್​ಟೈಮ್​ ಮಾತ್ರ ಬಹಳ ಹೆಚ್ಚು ಸಮಯ ನಿಗದಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಆಶ್ಚರ್ಯಕರ ವಿಷಯ ಎಂದರೆ ವಿಜಯ್​ ಚಿತ್ರಕ್ಕೆ 2 ಗಂಟೆ 59 ನಿಮಿಷ ರನ್​ಟೈಮ್​ ಇದ್ದರೆ, ನಾನಿ ಸಿನಿಮಾಗೆ 2 ಗಂಟೆ 50 ನಿಮಿಷ ಫಿಕ್ಸ್​ ಆಗಿದೆ. ಸದ್ಯ ಈ ಸಂಗತಿ ಇದೀಗ ಸಿನಿಪ್ರಿಯರ ಹುಬ್ಬೇರಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net