ರೈಲಿನಲ್ಲಿ ಸೀಟಿಗಾಗಿ ನಡೆದೇ ಹೋಯ್ತು ಮಾರಾಮಾರಿ!

Train
Published on

ನವ ದೆಹಲಿ: ಸಾರ್ವಜನಿಕ ಸಂಪರ್ಕ ಸಾರಿಗೆಗಳಾದ ಬಸ್ಸು, ರೈಲಿನಲ್ಲಿ ನಿತ್ಯ ಜನಜಂಗುಳಿ ಇರುತ್ತದೆ. ಈ ಸಂದರ್ಭದಲ್ಲಿ ಪ್ರಯಾಣಿಕರ ನಡುವೆ ಕುಳಿತುಕೊಳ್ಳಲು ಸೀಟಿಗಾಗಿ ಜಗಳ, ಮಾತಿನ ಚಕಮಕಿ ಏರ್ಪಡುತ್ತಿರುತ್ತದೆ. ಜಗಳ ಕೆಲವು ಬಾರಿ ಅತಿರೇಕಕ್ಕೆ ತೆರಳಿ ಹೊಡೆದಾಟದ ತನಕ ತಲುಪುತ್ತದೆ. ಇದೀಗ ಇಂತಹದ್ದೇ ಘಟನೆ ಸಿಂಹಗಢ ಎಕ್ಸ್​ಪ್ರೆಸ್​ ರೈಲಿನಲ್ಲಿ ನಡೆದಿದೆ.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಪ್ರಯಾಣಿಕರ ನಡುವೆ ಸೀಟಿಗಾಗಿ ಜಗಳ ಆರಂಭವಾಗಿರುವುದು ತಿಳಿಯುತ್ತಿದೆ. ಕೆಲವು ವರದಿಗಳ ಪ್ರಕಾರ ಪುಣೆ - ಮುಂಬೈ ರೈಲಿನಲ್ಲಿ ಪ್ರಯಾಣಿಸುವ ಕಾರ್ಮಿಕರು ಹಾಗೂ ಪ್ರಯಾಣಿಕರ ನಡುವೆ ಜಗಳ ನಡೆದಿದೆ ಎನ್ನಲಾಗುತ್ತಿದೆ.

ಸೀಟಿನ ವಿಚಾರಕ್ಕೆ ಆರಂಭವಾದ ಜಗಳ ಅತಿರೇಕಕ್ಕೆ ತಲುಪಿದೆ. ಪರಿಸ್ಥಿತಿ ಬಿಗುಡಾಯಿಸುತ್ತಿದ್ದಂತೆ ಸಹಪ್ರಯಾಣಿಕರು ಜಗಳ ಬಿಡಿಸಲು ಮುಂದೆ ಬಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net