ನಿಮಗಿದು ಗೊತ್ತಾ? ಜಗತ್ತಿನಲ್ಲಿ ಈ 5 ದೇಶಗಳ ಮುಖ್ಯಸ್ಥರು ಭಾರತ ಮೂಲದವರು!

global
Published on

ಬೆಂಗಳೂರು: ಹೌದು! ಈಗ ಇಡೀ ಜಗತ್ತಿನಲ್ಲಿ ಒಟ್ಟು ಐದು ದೇಶಗಳ ಮುಖ್ಯಸ್ಥರು ಭಾರತ ಮೂಲದವರಾಗಿದ್ದಾರೆ. ಇದೀಗ 5ನೇ ದೇಶವಾಗಿ ಬ್ರಿಟನ್​ ಈ ಪಟ್ಟಿಗೆ ಸೇರಿದೆ. ಈ ಐದು ದೇಶಗಳ ವಿವರ ನಿಮಗೆ ಗೊತ್ತಾ?...

ಮಾರಿಷಸ್: ಭಾರತದ ನೈರುತ್ಯಕ್ಕೆ ಇರುವ ಈ ಪುಟ್ಟ ರಾಷ್ಟ್ರದ ಅಧ್ಯಕ್ಷ ಪೃಥ್ವಿರಾಜ್​ ಸಿಂಗ್​ ರೂಪುನ್​ ಎಂದು. ಇವರು ಭಾರತ ಮೂಲದ ವ್ಯಕ್ತಿಯಾಗಿದ್ದು ಇದೀಗ ಮಾರಿಷಸ್​ನ ಅಧ್ಯಕ್ಷರಾಗಿದ್ದಾರೆ. ಇನ್ನೂ ಕುತೂಹಲಕಾರಿ ಸಂಗತಿ ಏನೆಂದರೆ ಅಲ್ಲಿನ ಪ್ರಧಾನಿಯೂ ಭಾರತ ಮೂಲದವರೇ!

ಬ್ರಿಟನ್​: ರಿಷಿ ಸುನಕ್​ ಯುಕೆ ಪ್ರಧಾನಿ ಆಗಿ ಆಯ್ಕೆ ಆಗಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಇವರು ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಅಳಿಯ. ಇವರು ಭಾರತ ಹಾಗೂ ಆಫ್ರಿಕಾ ಹಿನ್ನೆಲೆ ಉಳ್ಳವರು.

ಗುಯಾನಾ: ಆಫ್ರಿಕಾ ಖಂಡದ ಉತ್ತರ ಭಾಗದಲ್ಲಿ ಇರುವ ಈ ಪುಟ್ಟ ರಾಷ್ಟ್ರದ ಅಧ್ಯಕ್ಷ ಡಾ| ಇರ್ಫಾನ್ ಅಲಿ. ಇವರು ಲೆನೊರಾದ ಇಂಡೋ-ಗುಯನೀಸ್​ ಕುಟುಂಬಕ್ಕೆ ಸೇರಿದವರು.

ಸೇಶೆಲ್ಸ್​: ಹಿಂದೂ ಮಹಾಸಾಗರದಲ್ಲಿ ಇರುವ ಆಫ್ರಿಕನ್ ದೇಶದ ಅಧ್ಯಕ್ಷ ವೇವಲ್​ ರಾಮಕಲಾವನ್​. ಇವರ ತಾತ ಬಿಹಾರ ಮೂಲದವರು ಎಂದು ತಿಳಿದುಬಂದಿದೆ.

ಸುರಿನಮೆ: ಇದು ಗುಯಾನಾ ದೇಶದ ಪಕ್ಕದಲ್ಲೇ ಇರುವ ಮತ್ತೊಂದು ಸಣ್ಣ ಆಫ್ರಿಕನ್​ ದೇಶ . ಇಲ್ಲಿ ಚಾನ್​ ಸಂತೋಕಿ ಎಂಬುವವರು ಅಧ್ಯಕ್ಷರಾಗಿದ್ದಾರೆ. ಇವರ ಪೂರ್ತಿ ಹೆಸರು ಚಂದ್ರಿಕಪೆರ್ಸಾದ್​ ಸಂತೋಕಿ ಎಂದು

ಸಿಂಗಾಪುರ್​: ಜಗತ್ತಿನ ಅತೀ ಶ್ರೀಮಂತ ರಾಷ್ಟ್ರಗಳಲ್ಲಿ ಒಂದು ಎಂದು ಕರೆಯಿಸಿಕೊಳ್ಳುವ ಈ ಪುಟ್ಟ ರಾಷ್ಟ್ರದ ಅಧ್ಯಕ್ಷೆಯ ತಂದೆ ಭಾರತ ಮೂಲದವರು. ಅಂದ ಹಾಗೆ ಇವರ ಹೆಸರು ಹಲಿಮಾ ಯಕೂಬ್. ಇವರು ಸಿಂಗಾಪುರದ 8ನೇ ಅಧ್ಯಕ್ಷರಾಗಿದ್ದಾರೆ.

ಇತ್ತೀಚೆಗೆ ಜಗತ್ತಿನಾದ್ಯಂತ ಭಾರತೀಯ ಮೂಲ ಹೊಂದಿರುವ ಅಧ್ಯಕ್ಷರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಕಾಕತಾಳೀಯ ಹಾಗೂ ಕುತೂಹಲಾಕರಿ ಸಂಗತಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net