

ದೆಹಲಿ: ಉಪ್ಪಿನ ಕಣಕ್ಕಿಂತ ಚಿಕ್ಕದಾಗಿರುವ ಮೈಕ್ರೋಸ್ಕೋಪ್ ಮೂಲಕವಷ್ಟೇ ನೋಡಬಹುದಾದ ವಿಶ್ವದ ಅತ್ಯಂತ ಸಣ್ಣ ಬ್ಯಾಗ್ ಹರಾಜಿನಲ್ಲಿ ಬರೋಬ್ಬರಿ 51 ಲಕ್ಷ ರೂ.ಗೆ ಮಾರಾಟವಾಗಿದ್ದು, ಇದು ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ.
3D ಪ್ರಿಂಟ್ ಮೈಕ್ರೋ-ಸ್ಕೇಲ್ ಪ್ಲಾಸ್ಟಿಕ್ ಭಾಗಗಳಿಗೆ ಬಳಸಲಾಗುವ ಫೋಟಾನ್ ಎರಡು ತಂತ್ರಗಳನ್ನು ಸಂಯೋಜಿಸಿ, ನ್ಯೂಯಾರ್ಕ್ ಆರ್ಟ್ ಕಲೆಕ್ಟಿವ್ ಈ ಚಿಕ್ಕ ಚೀಲವನ್ನು ನಿರ್ಮಾಣ ಮಾಡಿದ್ದು ಇದು ಆನ್ಲೈನ್ ಹರಾಜಿನಲ್ಲಿ ರೂ. 51.6 ಲಕ್ಷಕ್ಕೆ ಮಾರಾಟವಾಗಿದೆ.
ಈ ತಿಂಗಳ ಆರಂಭದಲ್ಲಿ ನ್ಯೂಯಾರ್ಕ್ ಆರ್ಟ್ ಕಲೆಕ್ಟಿವ್ ಇನ್ಸ್ಟಾಗ್ರಾಮ್ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿ ಇದರ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿತ್ತು. ಖರೀದಿದಾರರು ಇದನ್ನು ವೀಕ್ಷಿಸಲು ಡಿಜಿಟಲ್ ಡಿಸ್ಪ್ಲೇ ಹೊಂದಿರುವ ಸೂಕ್ಷ್ಮದರ್ಶಕದ ಅಗತ್ಯತೆವಿದ್ದು, ಇದರ ಗಾತ್ರ ಕೇವಲ 657×222×700 ಮೈಕ್ರೋಮೀಟರ್ ಆಗಿದೆ. ಲೂಯಿಸ್ ವಿಟಾನ್ ಬ್ಯಾಗ್ ತುಂಬಾ ಚಿಕ್ಕದಾಗಿದ್ದು, ಇದು ಸೂಜಿಯ ರಂಧ್ರದ ಮೂಲಕ ಹಾದುಹೋಗುತ್ತದೆ.
ಲೂಯಿ ವಿಟಾನ್ ಅಂತರಾಷ್ಟ್ರೀಯ ಐಷಾರಾಮಿ ಬ್ರಾಂಡ್ ಆಗಿದ್ದು, ಇದರ ಬ್ಯಾಗ್ನ ಚೀಲದ ಬೆಲೆ ಲಕ್ಷಗಟ್ಟಲೇ ಇದೆ. ಶ್ರೀಮಂತ ಮತ್ತು ದೊಡ್ಡ ಸೆಲೆಬ್ರಿಟಿಗಳು ಅದರ ಚೀಲಗಳನ್ನು ತೆಗೆದುಕೊಳ್ಳಲು ಇಷ್ಟಪಡುತ್ತಾರೆ.(ಏಜೆನ್ಸೀಸ್)