

ಕಾಂಕ್ರೀಟ್ ನಾಡಷ್ಟೇ ಅಲ್ಲ, ಭೀಕರ ಬರಗಾಲಕ್ಕೆ ರಾಜ್ಯದ ವನ್ಯಸಂಪತ್ತು ಸಹ ತತ್ತರಿಸಿದೆ. ಅರಣ್ಯ ಪ್ರದೇಶಗಳ ಕೆರೆ, ಕಟ್ಟೆಗಳು ಸಂಪೂರ್ಣ ಬತ್ತಿ ಹೋಗಿರುವುದರಿಂದ ವನ್ಯಜೀವಿಗಳು ಹನಿ ನೀರಿಗೂ ತತ್ತರಿಸುತ್ತಿವೆ. ಮೂಕ ಪ್ರಾಣಿಗಳ ಕಷ್ಟಕ್ಕೆ ಎಚ್ಚೆತ್ತ ಅರಣ್ಯ ಇಲಾಖೆ ಕೃತಕ ಹೊಂಡಗಳಿಗೆ ಮೊರೆ ಹೋಗಿದೆ. ಮೃಗಾಲಯಗಳಲ್ಲೂ ಪ್ರಾಣಿಗಳ ದಾಹ ತಣಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಇನ್ನೊಂದು ತಿಂಗಳಲ್ಲಿ ಮಳೆ ಬರದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಲಿದೆ. ರಾಜ್ಯದ ಅರಣ್ಯದಂಚಿನ ಪ್ರದೇಶಗಳ ಪರಿಸ್ಥಿತಿಯನ್ನು ವಿಜಯವಾಣಿ ರಿಯಾಲಿಟಿ ಚೆಕ್ ಮೂಲಕ ತೆರೆದಿಡುತ್ತಿದೆ.