More

  ರಾಜ್ಯ ಕಾಂಗ್ರೆಸ್​ ಅಭ್ಯರ್ಥಿಗಳ ಆಯ್ಕೆ ಅಂತಿಮ; ಸಂಭಾವ್ಯರ ಪಟ್ಟಿ ಹೀಗಿದೆ

  ನವದೆಹಲಿ: ಲೋಕಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಈಗಾಗಲೇ ಕಾಂಗ್ರೆಸ್​ ಪಕ್ಷ ಕರ್ನಾಟಕದಲ್ಲಿ ಏಳು ಹುರಿಯಾಳುಗಳ ಹೆಸರನ್ನು ಘೋಷಿಸಿ 21 ಕ್ಷೇತ್ರಗಳ ಅಭ್ಯರ್ಥಿಗಳನ್ನು ಬಾಕಿ ಉಳಿಸಿಕೊಂಡಿದೆ. ಈ ವಾರದಲ್ಲೇ ಕರ್ನಾಟಕದ ಎರಡನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ದಟ್ಟವಾಗಿದೆ.

  ಅಭ್ಯರ್ಥಿಗಳ ಆಯ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್​ ನಾಯಕರು ಈಗಾಗಲೇ ಒಂದು ಸುತ್ತಿನ ಸಭೆ ನಡೆಸಿದ್ದು, ಬುಧವಾರ ಸಂಜೆ ಮತ್ತೊಮ್ಮೆ ಸಭೆ ನಡೆಸಿ ಅಭ್ಯರ್ಥಿಗಳನ್ನು ಘೋಷಿಸುತ್ತಾರೆ ಎಂದು ತಿಳಿದು ಬರಲಿದೆ. ಈಗಾಗಲೇ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ನಾಲ್ಕು ಕ್ಷೇತ್ರಗಳಿಗೆ ಬಾಕಿ ಉಳಿಸಿಕೊಳ್ಳಲಾಗಿದೆ.

  ಇದನ್ನೂ ಓದಿ: ಕುರುಕಲು ತಿಂಡಿ ಹೆಚ್ಚು ತಿನ್ನಬೇಡ ಎಂದು ಬೈದ ತಂದೆ; ಮನನೊಂದು ಪ್ರಾಣ ಕಳೆದುಕೊಂಡ ಪುತ್ರಿ

  ಅದರಂತೆ ಚಾಮರಾಜನಗರ, ಬಳ್ಳಾರಿ, ಕಲಬುರ್ಗಿ ಹಾಗೂ ಕೋಲಾರ ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿರುವ ಕಾಂಗ್ರೆಸ್​ ಈಗಾಗಲೇ ಅಂತಿಮವಾಗಿರುವ 17 ಕ್ಷೇತ್ರಗಳ ಅಭ್ಯರ್ಥಿಗಳನ್ನು ಮಾರ್ಚ್​ 20ರಂದು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ. ಅಂತಿಮ ಕ್ಷಣದಲ್ಲಿ ಒಂದೆರಡು ಬದಲಾವಣೆಯಾಗುವ ಸಾಧ್ಯತೆ ಇದೆ.

  17 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

  ಚಿತ್ರದುರ್ಗ – ಚಂದ್ರಪ್ಪ, ಬೆಳಗಾವಿ – ಮೃಣಾಲ್ ಹೆಬ್ಬಾಳ್ಕರ್, ಚಿಕ್ಕೋಡಿ – ಪ್ರಿಯಾಂಕಾ ಜಾರಕಿಹೊಳಿ, ಬಾಗಲಕೋಟೆ – ಸಂಯುಕ್ತ ಪಾಟೀಲ್, ಹುಬ್ಬಳ್ಳಿ- ವಿನೋದ್ ಅಸೂಟಿ, ದಾವಣಗೆರೆ – ಡಾ. ಪ್ರಭಾ ಮಲ್ಲಿಕಾರ್ಜುನ, ಕೊಪ್ಪಳ – ರಾಜಶೇಖರ್ ಹಿಟ್ನಾಳ್, ಬೀದರ್ – ರಾಜಶೇಖರ್ ಪಾಟೀಲ್, ದಕ್ಷಿಣ ಕನ್ನಡ- ಪದ್ಮರಾಜ್, ಉಡುಪಿ-ಚಿಕ್ಕಮಗಳೂರು – ಜಯಪ್ರಕಾಶ್ ಹೆಗಡೆ, ಬೆಂಗಳೂರು ದಕ್ಷಿಣ – ಸೌಮ್ಯರೆಡ್ಡಿ, ಬೆಂಗಳೂರು ಸೆಂಟ್ರಲ್- ಮನ್ಸೂರ್ ಅಲಿಖಾನ್, ಬೆಂಗಳೂರು ಉತ್ತರ -ಪ್ರೊ ರಾಜೀವ್ ಗೌಡ, ಮೈಸೂರು – ಎಂ. ಲಕ್ಷ್ಮಣ್, ರಾಯಚೂರು- ಕುಮಾರ್ ನಾಯ್ಕ್, ಉತ್ತರ ಕನ್ನಡ -ಅಂಜಲಿ ನಿಂಬಾಳ್ಕರ್, ಚಿಕ್ಕಬಳ್ಳಾಪುರ- ರಕ್ಷಾರಾಮಯ್ಯ ಹೆಸರು ಪಟ್ಟಿಯಲ್ಲಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts