More

    ಅಧಿಕೃತವಾಗಿ ರಿವೀಲ್​ ಆಯ್ತು ಆರ್​ಸಿಬಿ ನೂತನ ಜೆರ್ಸಿ, ಲೋಗೋ; ಹೊಸ ಅಧ್ಯಾಯ ಎಂದ ಫ್ಯಾನ್ಸ್​

    ಬೆಂಗಳೂರು: ವಿಶ್ವದ ಶ್ರೀಮಂತ ಕ್ರಿಕೆಟ್​ ಟೂರ್ನಿಗಳಲ್ಲಿ ಒಂದಾದ ರಂಗು ರಂಗಿನ ಐಪಿಎಲ್​ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಮಾರ್ಚ್​ 22ರಂದು ಆರಂಭವಾಗಲಿರುವ 17ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್​ ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮುಖಾಮುಖಿಯಾಗಲಿವೆ.

    ಮೆಗಾ ಟೂರ್ನಿ ಆರಂಭಕ್ಕೂ ಮುನ್ನವೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಮಾರ್ಚ್​ 19ರಂದು ತನ್ನ ತವರು ಕ್ರೀಡಾಂಗಣವಾದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅನ್​ಬಾಕ್ಸಿಂಗ್​ ಇವೆಂಟ್​ ಆಯೋಜಿಸಿತ್ತು. ವರ್ಣರಂಜಿತ ಕಾರ್ಯಕ್ರಮದಲ್ಲಿ ಆರ್​ಸಿಬಿ ತಂಡದ ನೂತನ ಜೆರ್ಸಿ ಹಾಗೂ ಲೋಗೋವನ್ನು ಅನಾವರಣ ಮಾಡಲಾಗಿದೆ.

    ಕಳೆದ ಬಾರಿಗಿಂತ ವಿಭಿನ್ನವಾಗಿ ಈ ಬಾರಿಯ ಜೆರ್ಸಿಯನ್ನು ವಿನ್ಯಾಸಗೊಳಿಸಲಾಗಿದೆ. ಈ ಜೆರ್ಸಿಯನ್ನು ಕೊಹ್ಲಿ-ಫಾಫ್​ ರಿವೀಲ್​ ಮಾಡಿದ್ದಾರೆ. ಕಳೆದ ವರ್ಷ ಆರ್​ಸಿಬಿ ತಂಡ ಕೆಂಪು ಬಣ್ಣದ ಜರ್ಸಿಯಲ್ಲಿ ಕಣಕ್ಕಿಳಿದಿತ್ತು. ಇದಕ್ಕಾಗಿಯೇ ಆರ್​ಸಿಬಿ ತಂಡಕ್ಕೆ ರೆಡ್ ಆರ್ಮಿ ಎಂದೂ ಕರೆಯಲಾಗುತ್ತದೆ. ಆದರೆ ಈ ಬಾರಿ ಜೆರ್ಸಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಜೆರ್ಸಿಯ ಮೇಲ್ಬಾಗದಲ್ಲಿ ನೀಲಿ ಬಣ್ಣ ಹಾಗೂ ಕೆಳಭಾಗದಲ್ಲಿ ಹಿಂದಿನ ಕಡು ಕೆಂಪು ಬಣ್ಣದಿಂದ ಜೆರ್ಸಿಯನ್ನು ಡಿಸೈನ್​ ಮಾಡಲಾಗಿದೆ.

    ಇದನ್ನೂ ಓದಿ: ಕುರುಕಲು ತಿಂಡಿ ಹೆಚ್ಚು ತಿನ್ನಬೇಡ ಎಂದು ಬೈದ ತಂದೆ; ಮನನೊಂದು ಪ್ರಾಣ ಕಳೆದುಕೊಂಡ ಪುತ್ರಿ

    ಇದರ ನಡುವೆ ಆರ್​ಸಿಬಿ ಹೊಸ ಲೋಗೋವನ್ನೂ ರಿಲೀಸ್​​ ಮಾಡಲಾಗಿದೆ. ಅದರಂತೆ ಕಳೆದ ಕೆಲ ವರ್ಷಗಳಿಂದ ಅಭಿಮಾನಿಗಳ ಬೇಡಿಕೆಗೆ ಇಂದು ಆರ್​ಸಿಬಿ ಪ್ರಾಂಚೈಸಿ ಮನ್ನಣೆ ನಿಡಿದ್ದು, ಕೊನೆಗೂ Royal Challengers Bangalore ಎಂದು ಇದ್ದ ಹೆಸರನ್ನು Royal Challengers Bengaluru ಎಂದು ಬದಲಿಸಿದೆ. ಜೆರ್ಸಿ ಹಾಗೂ ಲೋಗೋ ಅನಾವರಣಕ್ಕೂ ಮುನ್ನ  ಬ್ರೋದಾ, ಅಲೇನ್​ ವಾಕರ್​, ರಘು ದೀಕ್ಷಿತ್, ನೀತು ಮೋಹನ್​, ಜೋರ್ಡನ್​ ಬ್ರದರ್ಸ್ ಸೇರಿದಂತೆ ಆರ್​ಸಿಬಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.

    ಇತ್ತ ಹೊಸ ಜೆರ್ಸಿ ಅನಾವರಣಗೊಳ್ಳುತ್ತಿದ್ದಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹೊಸದಕ್ಕಿಂತ ಹಳೆಯ ಜರ್ಸಿ ತುಂಬಾ ಚೆನ್ನಾಗಿದೆ, ಅತ್ಯಾಧುನಿಕತೆಯ ಟಚ್ ಇರುವಂತಿದೆ ಎನ್ನುತ್ತಾರೆ ನೆಟಿಜನ್​ಗಳು. ಮುಂಬೈ ಇಂಡಿಯನ್ಸ್‌ನಿಂದ ನೀಲಿ ಬಣ್ಣವನ್ನು ನಕಲಿಸಿ ಈ ಜರ್ಸಿಯಲ್ಲಿ ಹಾಕಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಹಳೆಯ ಜರ್ಸಿಯ ಕೆಂಪು ಮತ್ತು ಕಪ್ಪು ಕಾಂಬಿನೇಷನ್ ಚೆನ್ನಾಗಿರುತ್ತಿತ್ತು. ಈ ಬದಲಾವಣೆ ಬೇಕಿರಲಿಲ್ಲ ಎಂದಿದ್ದಾರೆ. ಸೈರನ್​ ಲೈಟ್​ನಂತಿದೆ ಜರ್ಸಿ, ಕೆಂಪು ಮತ್ತು ನೀಲಿ ಕಾಂಬೋ ಚೆನ್ನಾಗಿಲ್ಲ, ದಯವಿಟ್ಟು ಜೆರ್ಸಿಯನ್ನು ಬದಲಿಸಿ, ಹಳೆಯ ಜರ್ಸಿಯನ್ನೇ ಧರಿಸಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್​ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts