

Expensive Airport : ಸಾಮಾನ್ಯವಾಗಿ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಏನಾದರೂ (ಆಹಾರ) ಕೊಂಡುಕೊಳ್ಳಬೇಕಾದ್ರೆ ಸಲ್ಪ ದುಬಾರಿ ಅನಿಸುತ್ತದೆ. ಅದೂ ಏರ್ಪೋರ್ಟ್ಗಳಲ್ಲಿ ವಸ್ತುಗಳ, ಆಹಾರಗಳ ಬೆಲೆ ಕೇಳಿದ್ರೆ ಶಾಕ್ ಆಗ್ತಾರೆ. ಅಂತದ್ರಲ್ಲಿ 1 ಬಾಳೆಹಣ್ಣಿನ ಬೆಲೆ ಬರೊಬ್ಬರಿ 500 ರೂ. ಎಂದರೆ ಹೌಹಾರೋದು ಗ್ಯಾರಂಟಿ.
ಹೌದು, ಟರ್ಕಿಯ ಇಸ್ತಾನ್‌ಬುಲ್ ವಿಮಾನ ನಿಲ್ದಾಣದಲ್ಲಿ ವಸ್ತುಗಳು ದುಬಾರಿ ಕಾರಣದಿಂದ ಪಂಚದಾದ್ಯಂತದ ಪ್ರಯಾಣಿಕರು ಈ ವಿಮಾನ ನಿಲ್ದಾಣವನ್ನು 'ವಿಶ್ವದ ಅತ್ಯಂತ ದುಬಾರಿ ಏರ್ಪೋಟ್' ಎಂದು ಕರೆದಿದ್ದಾರೆ ಎಂದು ಇತ್ತೀಚಿಗೆ ವರದಿಗಳು ಉಲ್ಲೇಖಿಸಿವೆ.
ಈ ಏರ್ಪೋಟ್ನಲ್ಲಿ ಪ್ರತಿನಿತ್ಯ ಸರಿಸುಮಾರು 2,20,000 ಪ್ರಯಾಣಿಕರು ಬಂದು ಹೋಗ್ತಾರೆ. ಒಂದು ಬಿಯರ್ ಅನ್ನು £15 ಅಂದೆರೆ ಭಾರತೀಯ ರೂಪಾಯಿಗಳಲ್ಲಿ 1,697ಕ್ಕೆ ಮಾರಾಟ ಮಾಡಲಾಗುತ್ತಿದೆ ಮತ್ತು ಒಂದು ಬಾಳೆಹಣ್ಣು £5 565 ರೂ.ಗೆ ಕ್ಕೆ ಮಾರಾಟವಾಗುತ್ತಿದೆ. ವಿಮಾನ ನಿಲ್ದಾಣವು ಅತ್ಯಂತ ಮೂಲಭೂತ ಆಹಾರ ಪದಾರ್ಥಗಳನ್ನು ಪ್ರೀಮಿಯಂ ಬೆಲೆಗೆ ಮಾರಾಟ ಮಾಡುತ್ತದೆ ಎಂದು ಏರ್ಪೋಟ್ ಸಿಬ್ಬಂದಿ ಹೇಳಿದ್ದಂತೆ!.
ಇನ್ನು ಇಟಾಲಿಯನ್ ಪತ್ರಿಕೆ ಕೊರಿಯೆರ್ ಡೆಲ್ಲಾ ಸೆರಾ ಪ್ರಕಾರ, ಇಸ್ತಾನ್‌ಬುಲ್ ವಿಮಾನ ನಿಲ್ದಾಣವು ಆಹಾರ ಮತ್ತು ಪಾನೀಯಗಳಿಗೆ ಯುರೋಪಿನ 'ಅತ್ಯಂತ ದುಬಾರಿ ವಿಮಾನ ನಿಲ್ದಾಣ'ವಾಗಿದೆ. ಒಬ್ಬ ಇಟಾಲಿಯನ್ ಬರಹಗಾರ 90 ಗ್ರಾಂ ಲಸಾಂಜವನ್ನು(ಬ್ರೇಡ್) (£21)2,376 ರೂ.ಗೆ ಮಾರಾಟ ಮಾಡಿದ ಅನುಭವವನ್ನು ಹೇಳಿಕೊಂಡಿದ್ದಾನೆ.
"ಇದು ಇಟ್ಟಿಗೆಯ ತುಂಡಿನಂತೆ ಕಾಣುತ್ತದೆ, ಅದರ ಮೇಲೆ ತುರಿದ ಚೀಸ್ ಮತ್ತು ಹುಸಿ-ತುಳಸಿ ಎಲೆಯನ್ನು ಸಿಂಪಡಿಸಲಾಗುತ್ತದೆ" ಆಹಾರದ ಗುಣಮಟ್ಟವು ಅತಿಯಾದ ಬೆಲೆಗೆ ಹೊಂದಿಕೆಯಾಗುವುದಿಲ್ಲ ಎಂದದಿದ್ದಾರೆ.
ಬೆಲೆಗಳು ಏಕೆ ಇಷ್ಟೊಂದು ಹೆಚ್ಚಿವೆ? ಯಾವುದೇ ನಿರ್ದಿಷ್ಟ ಕಾರಣವಿದೆಯೇ? ಟರ್ಮಿನಲ್ ಅದ್ಭುತ ಮತ್ತು ಭವ್ಯವಾಗಿದೆ, ಆದರೆ ಬೆಲೆಗಳು ದುರದೃಷ್ಟವಶಾತ್ ಅನುಭವವನ್ನು ಸ್ವಲ್ಪ ಕೆಟ್ಟದಾಗಿ ಮಾಡಿದೆ ಎಂದು ಸಾಮಾಜಿಕ ಬಳಕೆದಾರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್)