

ಕರೊನಾ ಸಂದರ್ಭದಲ್ಲಿ ಕನ್ನಡದ ಚಿತ್ರ ದಿ ಪೈಂಟರ್ ಬಿಡುಗಡೆಯ ಸಂಭ್ರಮದಲ್ಲಿದೆ. ಆಗಸ್ಟ್ 14 ರಂದು ರಾತ್ರಿ 9 ಘಂಟೆಗೆ shreyaset.com ATT (ಎನಿ ಟೈಮ್ ಥಿಯೇಟರ್) ನಲ್ಲಿ ಚಿತ್ರ ರಿಲೀಸ್ ಆಗಲಿದೆ. ಇದು ಏಕ ಕಾಲಕ್ಕೆ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ರಿಲೀಸ್ ಆಗಲಿದೆ.
ಕೆಲವು ದಿನಗಳ ಹಿಂದೆ ರೋರಿಂಗ್ ಸ್ಟಾರ್ ಶ್ರೀಮುರಳಿ ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದರು. ಟ್ರೇಲರ್ಗೂ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ATT ಎಲ್ಲಿ ಬಿಡುಗಡೆಯಾಗುತ್ತಿರುವ ಏಕೈಕ ಕನ್ನಡ ಚಿತ್ರ ಇದಾಗಿದ್ದು, ನೋಡುಗರು 50 ರೂ ನೀಡಿ ಈ ಸಿನಿಮಾ ವೀಕ್ಷಿಸಬಹುದಾಗಿದೆ ಎಂದು ಹೇಳಿದ್ದಾರೆ ನಿರ್ದೇಶಕ ವೆಂಕಟ್ ಭಾರದ್ವಾಜ್.
ಇದನ್ನೂ ಓದಿ: ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ರಿಯಾ ತಬ್ಬಿಬ್ಬು
ಈ ಚಿತ್ರವನ್ನು ಸಂಪೂರ್ಣವಾಗಿ ಲಾಕ್ಡೌನ್ ವೇಳೆ ಚಿತ್ರೀಕರಣ ಮಾಡಲಾಗಿದ್ದು, ಸಾಮಾಜಿಕ ತಾಣದಲ್ಲಿ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಗಬಹುದು ಎಂಬ ಭರವಸೆ ನಿರ್ದೇಶಕರದ್ದು. ಅಚ್ಚರಿ ಏನೆಂದರೆ, ಈ ಸಿನಿಮಾದಿಂದ ಬರುವ ಆದಾಯದಲ್ಲಿ ಶೇಕಡಾ 20 ಮೊತ್ತವನ್ನು ಸಂಕಷ್ಟದಲ್ಲಿರುವ ಕನ್ನಡ ಚಿತ್ರ ಕಾರ್ಮಿಕರಿಗೆ ಕೊಡುವುದಾಗಿ ತಂಡ ಹೇಳಿಕೊಂಡಿದೆ.
ದಿ ಪೈಂಟರ್ ಚಿತ್ರದಲ್ಲಿ 40ಕ್ಕೂ ಹೆಚ್ಚು ನಟರು ಹಾಗೂ ತಂತ್ರಜ್ಞರು ಶ್ರಮಿಸಿದ್ದಾರೆ. ಚಂದನ್ ಪಿ ರವರ ಸಂಕಲನ, ಲವ್ ಪ್ರಾಣ್ ಮೆಹ್ತಾ ಸಂಗೀತ ನೀಡಿದ್ದಾರೆ. ಡಾ. ರಾಜ್ ಕಮಲ್ ಬಂಡವಾಳ ಹೂಡಿದ್ದಾರೆ.
ಇದನ್ನೂ ಓದಿ: ಚಿತ್ರರಂಗದಲ್ಲಿ ಕೊನೆಗೆ ಉಳಿಯೋದು ಪ್ರತಿಭೆಯಷ್ಟೇ!
ಈ ಚಿತ್ರವನ್ನು shreyaset.com google ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಿ 50 ರೂ ಹಣ ಪಾವತಿ ಮಾಡಿ ನೋಡಬಹುದಾಗಿದೆ. ಈ ಚಿತ್ರದ ಲೈಸೆನ್ಸ್ 48 ಗಳ ಕಾಲ ಚಾಲ್ತಿಯಲ್ಲಿರಲಿದೆ. ಈ ಚಿತ್ರವನ್ನು ಮೊಬೈಲ್, ಟಿವಿ ಮತ್ತು ಕಂಪ್ಯೂಟರ್ನಲ್ಲಿ ನೋಡಬಹುದು. ವೆಂಕಟ್ ಭಾರದ್ವಾಜ್, ರಾಜ್ ಕಮಲ್, ಶಿನವ್, ವೆಂಕಟ್ ಶಾಸ್ತ್ರೀ, ಶಮೀಕ್, ಕಬೀರ್, ಉಮಾ, ಮಧುರ, ಶಮಾ, ಮಣಿಮಾರನ್ ನಟಿಸಿದ್ದಾರೆ.