More

    ಚಿತ್ರರಂಗದಲ್ಲಿ ಕೊನೆಗೆ ಉಳಿಯೋದು ಪ್ರತಿಭೆಯಷ್ಟೇ!

    ಸುಶಾಂತ್ ಸಿಂಗ್ ಆತ್ಮಹತ್ಯೆ ಬಳಿಕ ಬಾಲಿವುಡ್​ನಲ್ಲಿ ಸ್ವಜನಪಕ್ಷಪಾತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಚಿತ್ರರಂಗದ ನಂಟಿಲ್ಲದೆ ಬಂದವರ ಬಣ, ಗಾಡ್​ಫಾದರ್ ನೆರಳಿನಲ್ಲೇ ಗುರುತಿಸಿಕೊಂಡ ಬಣ ಎಂಬಂಥ ವಾತಾವರಣ ಬಾಲಿವುಡ್​ನಲ್ಲಿ ನಿರ್ಮಾಣವಾಗಿದೆ.

    ಸ್ಟಾರ್ ಕಲಾವಿದರು, ನಿರ್ವಪಕರು, ನಿರ್ದೇಶಕರನ್ನು ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ, ಸಿನಿಮಾ ಹಿನ್ನೆಲೆ ಇಲ್ಲದೆ ಬಂದು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್, ‘ಪ್ರತಿಭೆಯೇ ಇಲ್ಲಿ ಪ್ರಧಾನ. ಆ ಮೂಲಕವೇ ನಾವು ಗುರುತಿಸಿಕೊಳ್ಳಬೇಕು’ ಎಂದಿದ್ದಾರೆ.

    ‘ನನಗನಿಸಿದ ಮಟ್ಟಿಗೆ ಒಳಗಿನವ- ಹೊರಗಿನವ, ಇಂಡಸ್ಟ್ರಿ- ಇಂಡಸ್ಟ್ರಿ ಅಲ್ಲದ ಇದ್ಯಾವುದು ಇಲ್ಲಿ್ಲ್ಲ ಪ್ರತಿಯೊಬ್ಬರದ್ದೂ ಒಂದೊಂದು ಪಯಣ. ಇದೊಂದು ಮನರಂಜನಾ ಕ್ಷೇತ್ರ. ಇದು ಕಾಪೋರೇಟ್ ವಲಯದಂತೆ. ಪ್ರತಿ ವ್ಯಕ್ತಿಗೂ ಅವನದೇ ಆದ ಗುರಿ ಇರುತ್ತದೆ. ಏಳುಬೀಳುಗಳಿರುತ್ತವೆ. ಗಟ್ಟಿಯಾಗಿ ನಿಂತು ಎದುರಿಸುವವರು ಒಂದೆಡೆಯಾದರೆ, ಹೆದರಿ ಹಿಂದಿರುಗುವವರೂ ಇಲ್ಲಿದ್ದಾರೆ. ಏನೇ ಮಾಡಿದರೂ ಕೊನೆಗೆ ಪ್ರತಿಭೆಯೇ ಇಲ್ಲಿ ಉಳಿಯುವುದು. ಅದೇ ಶಾಶ್ವತ. ಆರಂಭದಲ್ಲಿ ಅವಕಾಶಗಳು ಸಿಗಬಹುದು. ಆದರೆ, ಆ ಒಂದು ಅವಕಾಶ ಭವಿಷ್ಯ ನಿರ್ಧರಿಸುತ್ತದೆ ಎಂಬುದನ್ನು ನಾನು ನಂಬುವುದಿಲ್ಲ. ಸತತ ಪ್ರಯತ್ನ ಮತ್ತು ಶ್ರಮದಿಂದ ಮಾತ್ರ ನಾವು ಮೇಲೇಳಲು ಸಾಧ್ಯ’ ಎಂದಿದ್ದಾರೆ.

    ಸದ್ಯ ರಾಕುಲ್ ಪ್ರೀತ್, ಬಾಲಿವುಡ್​ನ ಎರಡು ಪ್ರಾಜೆಕ್ಟ್ ಮತ್ತು ತಮಿಳಿನ ಎರಡು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಸದ್ಯ ಕುಟುಂಬದೊಂದಿಗೆ ಕಾಲ ಕಳೆಯುತ್ತಿರುವ ರಾಕುಲ್, ಶೀಘ್ರದಲ್ಲಿ ಚಿತ್ರೀಕರಣದಲ್ಲಿಯೂ ಪಾಲ್ಗೊಳ್ಳಲಿದ್ದಾರೆ. -ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts