More

    ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ರಿಯಾ ತಬ್ಬಿಬ್ಬು

    ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳಿಂದ ಎರಡು ಬಾರಿ ವಿಚಾರಣೆಗೆ ಒಳಗಾಗಿರುವ ನಟಿ ರಿಯಾ ಚಕ್ರವರ್ತಿ, ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ರಿಯಾ ಚಕ್ರವರ್ತಿಯ 2017-18 ಮತ್ತು 2018-19ರ ನಡುವಿನ ಆದಾಯ ಮತ್ತು ಹೂಡಿಕೆಗಳ ಬಗ್ಗೆ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ಅವಧಿಯಲ್ಲಿ ರಿಯಾ ತಮ್ಮ ಒಟ್ಟು ಆದಾಯ ಸುಮಾರು -ಠಿ; 18 ಲಕ್ಷ ಎಂದು ಹೇಳಿಕೊಂಡಿದ್ದಾರೆ. 2018ರಲ್ಲಿ ಅವರ ಒಟ್ಟು ಸ್ಥಿರ ಆಸ್ತಿ ಮೌಲ್ಯ -ಠಿ; 96,000 ಇದ್ದು, ಅದು 2019 ರಲ್ಲಿ -ಠಿ; 9 ಲಕ್ಷಕ್ಕೆ ಏರಿಕೆಯಾಗಿದೆ. 2017-18ರಲ್ಲಿ ರಿಯಾ ವಿವಿಧ ಕಂಪನಿಗಳಲ್ಲಿ -ಠಿ; 34 ಲಕ್ಷ ಹೂಡಿಕೆ ಮಾಡಿದ್ದು, 2018-19ರಲ್ಲಿ ಈ ಮೊತ್ತ -ಠಿ; 42 ಲಕ್ಷಕ್ಕೆ ಏರಿದೆ. ರಿಯಾ 2018 ರಲ್ಲಿ ಮುಂಬೈಯಲ್ಲಿ ಫ್ಲಾ್ಯಟ್ ಖರೀದಿಸಿದ್ದು, ಇದಕ್ಕಾಗಿ ಅವರು ಸುಮಾರು -ಠಿ; 25 ಲಕ್ಷ ಡೌನ್ ಪೇಮೆಂಟ್ ನೀಡಿರುವೆ ಎಂದು ಹೇಳಿಕೊಂಡಿದ್ದಾರಾದರೂ ಇದಕ್ಕೆ ಯಾವುದೇ ಪುರಾವೆಗಳಿಲ್ಲ ಎನ್ನಲಾಗಿದೆ.

    ಪಟನಾದೊಂದಿಗೆ ಎಫ್​ಐಆರ್ ಸಂಬಂಧವಿಲ್ಲ: ಸುಶಾಂತ್ ತಂದೆ ಕೆ.ಕೆ. ಸಿಂಗ್ ತಮ್ಮ ಮಗನ ಸಾವಿನ ಸಂಬಂಧ ತನ್ನ ವಿರುದ್ಧ ದಾಖಲಿಸಿರುವ ಎಫ್​ಐಆರ್​ಗೂ ಇದು ದಾಖಲಾಗಿರುವ ಪಟನಾದ ಠಾಣೆಗೂ ಸಂಬಂಧವೇ ಇಲ್ಲ. ಘಟನೆ ನಡೆದಿರುವುದು ಬೇರೆಡೆ, ಐಎಫ್​ಐ ಆರ್ ದಾಖಲಾಗಿರುವುದು ಇನ್ನೊಂದೆಡೆ ಎಂದು ರಿಯಾ ಚಕ್ರವರ್ತಿ ಸುಪ್ರೀಂಕೋರ್ಟ್​ಗೆ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts