ಕಲ್ಯಾಣ ಮಂಟಪದಿಂದ ನೇರವಾಗಿ ಮತಗಟ್ಟೆಗೆ ಬಂದ ನವದಂಪತಿ

bng wedding
Published on

ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆ ಇಂದು ಮತದಾನ ನಡೆಯುತ್ತಿದ್ದು, ವೃದ್ಧರು, ರೋಗಿಗಳು, ವಿಶೇಷಚೇತನರು ಪೋಲಿಂಗ್​ ಸ್ಟೇಷನ್​ಗಳತ್ತ ಬಂದು ಮತ ಚಲಾವಣೆ ಮಾಡುವ ಮೂಲಕವಾಗಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಮದುವೆಯ ನಂತರ ನೇರ ಎಲೆಕ್ಷನ್ ಬೂತ್​ಗೆ ನವದಂಪತಿ ಬಂದಿದ್ದಾರೆ. ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ.

ಶಂಕರ ಮಠ ವಾರ್ಡ್ ನಿವಾಸಿಗರಾದ ಲಿಖಿತ್ ಮತ್ತು ಹರ್ಷಿತಾ ದಂಪತಿ. ತಾಳಿ ಶಾಸ್ತ್ರವಾದ ಬಳಿಕ ಮದುವೆ ಕಲ್ಯಾಣ ಮಂಟಪದಿಂದ ನೇರವಾಗಿ ಮತಗಟ್ಟೆಗೆ ಬಂದು ನವ ಜೋಡಿ ಮತದಾನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net