More

    ನಾಲ್ಕು ತಿಂಗಳಿನಿಂದ ಹಾಸಿಗೆಯಲ್ಲೇ ಮಲಗಿದ್ದ ರೋಗಿ; ಆಂಬ್ಯುಲೆನ್ಸ್​​ನಲ್ಲಿ ಬಂದು ಮತ ಚಲಾವಣೆ

    ತುಮಕೂರು: ವಿಧಾನಸಭೆ ಚುನಾವಣೆ 2023 ಹಿನ್ನೆಲೆಯಲ್ಲಿ ಎಲ್ಲರೂ ಅತ್ಯಂತ ಉತ್ಸಾಹದಿಂದಲೇ ಮತ ಹಾಕುತ್ತಿದ್ದಾರೆ. ಅಂತೆಯೇ ರೋಗಿಯೊಬ್ಬರು ಆಂಬ್ಯುಲೆನ್ಸ್ ಮೂಲಕವಾಗಿ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸುವ ಮೂಲಕ ಮಾದರಿಯಾಗಿದ್ದಾರೆ.

    ಸಂಪಗಿರಾಮು ಅವರು ಆಂಬ್ಯುಲೆನ್ಸ್ ಮೂಲಕವಾಗಿ ಬಂದು ಮತ ಚಲಾಯಿಸಿದವರು. ಸಂಪಗಿರಾಮು ಅವರು ಅಪಘಾತದಲ್ಲಿ ಗಾಯಗೊಂಡು ಕಳೆದ ನಾಲ್ಕು ತಿಂಗಳಿನಿಂದ ಹಾಸಿಗೆಯಲ್ಲೇ ಮಲಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇದನ್ನೂ ಓದಿ: ಮತ ಚಲಾಯಿಸಿದ ಮಾಜಿ ಸಿಎಂ; ಸ್ವಂತ ಬಲದಿಂದ ಸರ್ಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿದ ಸಿದ್ದರಾಮಯ್ಯ

    ವಿಧಾನಸಭೆ ಚುನಾವಣೆ ಹಿನ್ನೆಲೆ ಎಲ್ಲರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಮತದಾನ ಮಾಡುವುದು ನನ್ನ ಕರ್ತವ್ಯವೆಂದು ಅರಿತ ಸಂಪಗಿರಾಮು ಅವರು ಆಂಬ್ಯುಲೆನ್ಸ್ ಮೂಲಕವಾಗಿ ಪತ್ನಿ ಜತೆಯಲ್ಲಿ ತುಮಕೂರು ನಗರದ ರೈಲ್ವೇ ಸ್ಟೇಷನ್ ರಸ್ತೆಯ ಮತಗಟ್ಟೆ ಸಂಖ್ಯೆ 148ರಲ್ಲಿ ಬಂದು ಮತದಾನ ಮಾಡಿದ್ದಾರೆ. ‌

    ಇದನ್ನೂ ಓದಿ: Karnataka Assembly Election; ಮತದಾರರ ಯಾವ ಬೆರಳಿಗೆ ಶಾಯಿ? ಇಲ್ಲಿದೆ ವಿವರ..

    ಚುನಾವಣಾ ಸಿಬ್ಬಂದಿಯ ಸಹಾಯದಿಂದ ಮತಚಲಾವಣೆ ಮಾಡಿದ್ದಾರೆ. ಎಂತಹ ಸ್ಥಿತಿಯಲ್ಲಿದ್ದರು ಮತ ಚಲಾಯಿಸಬೇಕು. ಆರೋಗ್ಯಕ್ಕಿಂತ ದೇಶ ಮುಖ್ಯ ಎಂದ ಸಂಪಗಿರಾಮು ಪತ್ನಿ ಹೇಳಿದ್ದಾರೆ.

    ನಮಗೆ ಇಡ್ಲಿ, ವಡೆ ಕೊಟ್ಟಿಲ್ಲ ಸಾರ್; ಚುನಾವಣಾ ಅಧಿಕಾರಿ, ಸಿಬ್ಬಂದಿಯ ದೂರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts