ನಮಗೆ ಇಡ್ಲಿ, ವಡೆ ಕೊಟ್ಟಿಲ್ಲ ಸಾರ್; ಚುನಾವಣಾ ಅಧಿಕಾರಿ, ಸಿಬ್ಬಂದಿಯ ದೂರು!

idlivada
Published on

ಚಿಕ್ಕಮಗಳೂರು: ಚುನಾವಣೆ ಸಂದರ್ಭಗಳಲ್ಲಿ ಚುನಾವಣೆ ಅಧಿಕಾರಿ, ಸಿಬ್ಬಂದಿ ಕೆಲಸಕ್ಕೆ ಯಾವುದೇ ಸಮಸ್ಯೆ ಆಗದೆ ಇರಲಿ ಎಂದು ಕೆಲವು ಸೌಲಭ್ಯವನ್ನು ನೀಡಲಾಗುತ್ತದೆ. ಆದರೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಮತಗಟ್ಟೆ ಅಧಿಕಾರಿಗಳು ಈ ಊಟ, ತಿಂಡಿಯ ವ್ಯವಸ್ಥೆ ಇಲ್ಲವೆಂದು ದೂರಿದ್ದಾರೆ.

ಬೆಳಗಿನ ಉಪಾಹಾರದಲ್ಲಿ ಇಡ್ಲಿ, ಜತೆ ವಡೆ ಕೊಟ್ಟಿಲ್ಲ ಎಂಬುದು ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿ ದೂರಾಗಿದೆ. ಶೃಂಗೇರಿ ತಾಲೂಕಿನ ಅಡ್ಡಗದ್ದೆ ಗ್ರಾಪಂ ವ್ಯಾಪ್ತಿಯ ಎಲ್ಲ 4 ಮತಗಟ್ಟೆಗಳಿಗೂ ಬೆಳಗಿನ ಉಪಹಾರ ಇಡ್ಲಿ ಜತೆಗೆ ಸಾಂಬಾರ್ ಮತ್ತು ಚಟ್ನಿ ನೀಡಲಾಗಿತ್ತು. ಆದರೆ ಉಳುವೆಬೈಲು ಶಾಲೆ ಕಾವಡಿ ಮತಗಟ್ಟೆ-129ರಲ್ಲಿ ವಡೆ ಕೊಟ್ಟಿಲ್ಲ ಎಂದು ಸಿಬ್ಬಂದಿ ದೂರಿದರು.

ನಮ್ಮಿಂದ ಸಾಧ್ಯವಾಗುವ ವ್ಯವಸ್ಥೆ ಮಾಡಿದ್ದು, ಹೆಚ್ಚುವರಿ ಬೇಕಿದ್ದರೆ ಚುನಾವಣಾ ಸಿಬ್ಬಂದಿ ತಮ್ಮ ಸ್ವಂತ ಹಣದಲ್ಲಿ ತರಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಅಡ್ಡಗದ್ದೆ ಗ್ರಾಪಂ ಪಿಡಿಒ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net