

ಮುಂಬೈ: ಕ್ಲೀನ್ ಸೈನ್ಸ್ ಅಂಡ್ ಟೆಕ್ನಾಲಜಿ ಲಿಮಿಟೆಡ್ ಷೇರುಗಳು ಮಿಡ್-ಕ್ಯಾಪ್ ವರ್ಗದಲ್ಲಿ ಬರುತ್ತದೆ. ಇದು ರಾಸಾಯನಿಕ ತಯಾರಿಕೆ ಸಂಸ್ಥೆಯಾಗಿದ್ದು, 16,193 ಕೋಟಿ ರೂಪಾಯಿಯ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
2003 ರಲ್ಲಿ ಸ್ಥಾಪಿತವಾದ ಈ ಸಂಸ್ಥೆಯು ಉತ್ತಮ ಮತ್ತು ವಿಶೇಷ ರಾಸಾಯನಿಕಗಳನ್ನು ತಯಾರಿಸುತ್ತದೆ. ಬಹು ರಾಸಾಯನಿಕಗಳ ಅತಿದೊಡ್ಡ ತಯಾರಕರಲ್ಲಿ ಒಂದಾಗಿದೆ.
ಪರ್ಫಾರ್ಮೆನ್ಸ್ ಕೆಮಿಕಲ್ಸ್, ಫಾರ್ಮಾಸ್ಯುಟಿಕಲ್ ಕೆಮಿಕಲ್ಸ್ ಮತ್ತು ಎಫ್‌ಎಂಸಿಜಿ ಕೆಮಿಕಲ್ಸ್ ಇವು ಕಂಪನಿಯ ರಸಾಯನಶಾಸ್ತ್ರ ವ್ಯವಹಾರದ ಮೂರು ಮುಖ್ಯ ವಿಭಾಗಗಳಾಗಿವೆ.
2022-23ನೇ ಹಣಕಾಸು ವರ್ಷದಲ್ಲಿ ಈ ಸಂಸ್ಥೆಯು ತನ್ನ ಷೇರುದಾರರಿಗೆ ಶೇಕಡಾ 500ರಷ್ಟು ಲಾಭಾಂಶವನ್ನು ನೀಡುವ ಮೂಲಕ ಅಚ್ಚರಿ ಮೂಡಿಸಿತ್ತು. ಈಗ 2023-24ರಲ್ಲಿ ಶೀಘ್ರದಲ್ಲೇ ಮಧ್ಯಂತರ ಲಾಭಾಂಶವನ್ನು ಘೋಷಿಸಲು ಸಜ್ಜಾಗಿದೆ.
ಈ ಕಂಪನಿಯ ನಿರ್ದೇಶಕರ ಮಂಡಳಿಯ ಸಭೆಯು ಬರುವ ಫೆಬ್ರವರಿ 3ರಂದು ನಡೆಯಲಿದೆ. ಕಳೆದ ಡಿಸೆಂಬರ್ 31 ಕೊನೆಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳುಗಳ ಹಣಕಾಸು ಫಲಿತಾಂಶಗಳನ್ನು ಪರಿಗಣಿಸಿ, ಷೇರುದಾರರಿಗೆ ಮಧ್ಯಂತರ ಲಾಭಾಂಶದ ಘೋಷಣೆ ಮಾಡುವುದಾಗಿ ತಿಳಿಸಿದೆ.
ಈ ಸಂಸ್ಥೆಯು ಮಾರ್ಚ್ 2023 ರಲ್ಲಿ ಕೊನೆಗೊಂಡ ಹಣಕಾಸು ವರ್ಷದಲ್ಲಿ ರೂ 1 ಮುಖಬೆಲೆಯ ಪ್ರತಿ ಷೇರಿಗೆ ಶೇಕಡಾ 500 ರಷ್ಟು ಇಕ್ವಿಟಿ ಡಿವಿಡೆಂಡ್ (ಅಂದರೆ, ಪ್ರತಿ ಷೇರಿಗೆ 5 ರೂಪಾಯಿ) ಘೋಷಿಸಿತ್ತು. ಈ ಸಂಸ್ಥೆಯು ಸೆಪ್ಟೆಂಬರ್ 30, 2023 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ದಾಖಲಿಸಿದ ಒಟ್ಟು ಆದಾಯ ರೂ. 187.121 ಕೋಟಿ, ಅಲ್ಲದೆ, ನಿವ್ವಳ ಲಾಭವು 52.18 ಕೋಟಿ ರೂ. ಆಗಿತ್ತು,