More

    ದೆಹಲಿಯನ್ನು ಹಿಂದಿಕ್ಕಿ ಮುಂಚೂಣಿಯಲ್ಲಿ ರಾಜ್ಯದ ರಾಜಧಾನಿ: ಬೆಂಗಳೂರು ಈಗ ಕಾರುಗಳ ನಗರಿ

    ಬೆಂಗಳೂರು: ಐಟಿ ನಗರಿ, ಸ್ಟಾರ್ಟ್​ ಅಪ್​ ರಾಜಧಾನಿ ಎಂಬ ಬಿರುದಿಗೆ ಪಾತ್ರವಾಗಿರುವ ಬೆಂಗಳೂರಿಗೆ ಈಗ ಇನ್ನೊಂದು ಗರಿ ಮೂಡಿದೆ. ಇನ್ನು ಮುಂದೆ ಬೆಂಗಳೂರನ್ನು ಕಾರುಗಳ ನಗರಿ ಎಂದು ಕರೆಯಬಹುದು. ಏಕೆಂದರೆ, ಇಡೀ ದೇಶದಲ್ಲಿಯೇ ಅತಿಹೆಚ್ಚು ಕಾರುಗಳಿರುವ ನಗರಗಳ ಪೈಕಿ ಬೆಂಗಳೂರಿಗೆ ಮುಂಚೂಣಿ ಸ್ಥಾನ ದೊರೆತಿದೆ.

    ದೆಹಲಿ ಸ್ಟ್ಯಾಟಿಸ್ಟಿಕಲ್ ಹ್ಯಾಂಡ್‌ಬುಕ್ 2023 ರ ಪ್ರಕಾರ ಅತಿ ಹೆಚ್ಚು ಖಾಸಗಿ ಕಾರುಗಳನ್ನು ಹೊಂದಿರುವ ಭಾರತದ ನಗರವಾಗಿ ಈಗ ದೆಹಲಿಯನ್ನು ಬೆಂಗಳೂರು ಹಿಂದಿಕ್ಕಿದೆ.

    2023ರ ಮಾರ್ಚ್ 31ರ ಪ್ರಕಾರ ಬೆಂಗಳೂರು ಒಟ್ಟು 23.1 ಲಕ್ಷ ಖಾಸಗಿ ಕಾರುಗಳನ್ನು ಹೊಂದಿದೆ. ಈ ಮೂಲಕ 20.7 ಲಕ್ಷ ಕಾರುಗಳಿರುವ ದೆಹಲಿಯನ್ನು ಮೀರಿಸಿದೆ.

    ಇತ್ತೀಚಿನ ವರ್ಷಗಳಲ್ಲಿ, ದೆಹಲಿಯ ಸಾರಿಗೆ ಇಲಾಖೆಯು ಹಳೆಯದಾದ ಮತ್ತು ಹಾಳಾದ ವಾಹನಗಳ ನೋಂದಣಿಯನ್ನು ರದ್ದುಗೊಳಿಸಲು ಮತ್ತು ಸ್ಕ್ರ್ಯಾಪ್ ಮಾಡಲು ಕ್ರಮಗಳನ್ನು ಕೈಗೊಂಡಿದೆ. 2021-22 ಮತ್ತು 2022-23 ರಲ್ಲಿಯೇ ಅಂದಾಜು 55 ಲಕ್ಷ ಕಾರುಗಳ ನೋಂದಣಿ ರದ್ದುಗೊಳಿಸಲಾಗಿದೆ, 1.4 ಲಕ್ಷ ಕಾರುಗಳನ್ನು ಸ್ಕ್ರ್ಯಾಪ್ ಮಾಡಲಾಗಿದೆ (ಗುಜರಿಗೆ ಹಾಕಲಾಗಿದೆ.) ಅಲ್ಲದೆ, 6.2 ಲಕ್ಷಕ್ಕೂ ಹೆಚ್ಚು ಜನರು ಇತರೆ ರಾಜ್ಯಗಳಲ್ಲಿ ತಮ್ಮ ಕಾರುಗಳನ್ನು ಮರು ನೋಂದಾಯಿಸಲು ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆದಿದ್ದಾರೆ.

    ಸುಪ್ರೀಂ ಕೋರ್ಟ್‌ನ ನಿಷೇಧಕ್ಕೆ ಬದ್ಧವಾಗಿ ದೆಹಲಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ದೆಹಲಿಯಲ್ಲಿ ಕ್ರಮವಾಗಿ 10 ಮತ್ತು 15 ವರ್ಷಕ್ಕಿಂತ ಹಳೆಯದಾದ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಮೇಲೆ ಕ್ರಮ ಕೈಗೊಳ್ಳುವುದನ್ನು 2018 ರಲ್ಲಿಯೇ ಜಾರಿಗೆ ತರಲಾಗಿದೆ.

    ಭಾರತದ ಸಿಲಿಕಾನ್ ವ್ಯಾಲಿ ಎಂದು ಸಾಮಾನ್ಯವಾಗಿ ಪ್ರಶಂಸಿಸಲ್ಪಡುವ ಬೆಂಗಳೂರು, ಸಂಚಾರ ದಟ್ಟಣೆ, ಕಳಪೆ ಮೂಲಸೌಕರ್ಯ ಮತ್ತು ಸಾರ್ವಜನಿಕ ಸಾರಿಗೆ ಕಾರಣದಿಂದಾಗಿ ಕುಖ್ಯಾತಿ ಪಡೆದಿದೆ.

    ಹೀಗಾಗಿ, ಜಾಗತಿಕ ಸಂಚಾರ ದಟ್ಟಣೆಯ ಶ್ರೇಯಾಂಕದಲ್ಲಿ ಬೆಂಗಳೂರು ಎರಡನೇ ಸ್ಥಾನವನ್ನು 2022 ರಲ್ಲಿ ಪಡೆದುಕೊಂಡಿದೆ, ಟ್ರಾಫಿಕ್​ ಸಮಸ್ಯೆಯ ತೀವ್ರತೆಯನ್ನು ಇದು ಎತ್ತಿ ತೋರಿಸುತ್ತದೆ. ಇಂಗ್ಲೆಂಡ್​ ರಾಜಧಾನಿ ಲಂಡನ್‌ ನಂತರದಲ್ಲಿ ಬೆಂಗಳೂರಿಗೆ ಈ ಸ್ಥಾನ ದೊರೆತಿದೆ.

    ಗೋಧಿ, ಅಕ್ಕಿ, ಸಕ್ಕರೆ ಬೆಲೆ ಹೆಚ್ಚಳ ಸದ್ಯಕ್ಕಿಲ್ಲ: ವಾಣಿಜ್ಯ ಸಚಿವ ಗೋಯಲ್​ ಹೇಳಿದ್ದೇನು?

    ಬೋನಸ್​ ಷೇರು ನೀಡಲಿದೆ ಐಟಿ ಸಾಫ್ಟ್‌ವೇರ್ ಮಿಡ್ ಕ್ಯಾಪ್ ಕಂಪನಿ: ಸ್ಟಾಕ್ ಬೆಲೆ ಒಂದೇ ವರ್ಷದಲ್ಲಿ ಶೇಕಡಾ 350 ಹೆಚ್ಚಳ

    ಬ್ರಿಟಿಷ್​ ರಾಯಭಾರಿಯ ಪಿಒಕೆ ಭೇಟಿ: ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts