More

    ಬೋನಸ್​ ಷೇರು ನೀಡಲಿದೆ ಐಟಿ ಸಾಫ್ಟ್‌ವೇರ್ ಮಿಡ್ ಕ್ಯಾಪ್ ಕಂಪನಿ: ಸ್ಟಾಕ್ ಬೆಲೆ ಒಂದೇ ವರ್ಷದಲ್ಲಿ ಶೇಕಡಾ 350 ಹೆಚ್ಚಳ

    ಮುಂಬೈ: ಐಟಿ ಸಾಫ್ಟ್‌ವೇರ್ ವಲಯದ ಮಿಡ್ ಕ್ಯಾಪ್ ಕಂಪನಿಯಾದ ನ್ಯೂಜೆನ್ ಸಾಫ್ಟ್‌ವೇರ್ ಟೆಕ್ನಾಲಜೀಸ್ ಲಿಮಿಟೆಡ್ ಷೇರುಗಳು ಶುಕ್ರವಾರ ಬೋನಸ್ ಹಂಚಿಕೆ ಮೊದಲು ವಹಿವಾಟು ನಡೆಸುತ್ತಿದ್ದಂತೆ ಬಿಎಸ್‌ಇ ವಹಿವಾಟಿನಲ್ಲಿ ಶೇಕಡಾ 5ರಷ್ಟು ಹೆಚ್ಚಳವನ್ನು ಕಂಡಿವೆ.

    ನ್ಯೂಜೆನ್ ಸಾಫ್ಟ್‌ವೇರ್ ಟೆಕ್ನಾಲಜೀಸ್ ಲಿಮಿಟೆಡ್ ಷೇರುಗಳು 1.06 ಪಟ್ಟು ಪ್ರಮಾಣದಲ್ಲಿ ವಹಿವಾಟು ನಡೆಸಿವೆ (ಅಂದರೆ, ಈ ಕಂಪನಿಯ ಷೇರುಗಳ ಒಟ್ಟು ಸಂಖ್ಯೆಯು 10 ಸಾವಿರ ಇದ್ದರೆ, 10600 ಷೇರುಗಳ ವಹಿವಾಟು ನಡೆದಿದೆ.)

    ಬಿಎಸ್‌ಇಯಲ್ಲಿ ನ್ಯೂಜೆನ್ ಸಾಫ್ಟ್‌ವೇರ್ ಟೆಕ್ನಾಲಜೀಸ್ ಷೇರಿನ ಕೊನೆಯ ವಹಿವಾಟಿನ ಬೆಲೆ ಶೇಕಡಾ 5ರಷ್ಟು ಹೆಚ್ಚಳದೊಂದಿಗೆ 815.10 ರೂಪಾಯಿ ತಲುಪಿದೆ.
    ಈ ಸ್ಟಾಕ್‌ನ 52-ವಾರದ ಹೆಚ್ಚಿನ ಬೆಲೆಯು ರೂ 825.50 ಮತ್ತು 52 ವಾರಗಳ ಕಡಿಮೆ ಬೆಲೆಯು ಕ್ರಮವಾಗಿ ರೂ 178.55 ಆಗಿದೆ. ನ್ಯೂಜೆನ್ ಸಾಫ್ಟ್‌ವೇರ್ ಷೇರುಗಳು ಕಳೆದ ಕೆಲವು ವರ್ಷಗಳಲ್ಲಿ ಬಲವಾದ ಲಾಭವನ್ನು ನೀಡಿವೆ.
    ನ್ಯೂಜೆನ್ ಸಾಫ್ಟ್‌ವೇರ್ ಟೆಕ್ನಾಲಜೀಸ್ ಲಿಮಿಟೆಡ್ ಷೇರುಗಳು ಕಳೆದ 1 ವರ್ಷದಲ್ಲಿ ಶೇಕಡಾ 350ರಷ್ಟು ಲಾಭವನ್ನು ನೀಡಿವೆ. ಅಲ್ಲದೆ, ಕಳೆದ 6 ತಿಂಗಳಲ್ಲಿ ಶೇಕಡಾ 161ರಷ್ಟು ಏರಿಕೆ ಕಂಡಿವೆ. ಈ ಕಂಪನಿಯ ಷೇರುಗಳು ಕಳೆದ 3 ತಿಂಗಳಲ್ಲಿ ಶೇಕಡಾ 78ರಷ್ಟು ಹೆಚ್ಚಳ ಕಂಡಿವೆ. ಕಳೆದ 3 ವರ್ಷಗಳಲ್ಲಿ ಶೇಕಡಾ 452ರಷ್ಟು ಲಾಭ ನೀಡಿವೆ,

    ಈ ಕಂಪನಿಯು ಬೋನಸ್​ ಷೇರು ನೀಡಲು ಮುಂದಾಗಿದೆ.

    ಬೋನಸ್ ಷೇರುಗಳನ್ನು ಏಕೆ ನೀಡಲಾಗುತ್ತದೆ?:

    ಇವುಗಳು ಷೇರುದಾರರು ಹೊಂದಿರುವ ಷೇರುಗಳ ಸಂಖ್ಯೆಯ ಆಧಾರದ ಮೇಲೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಅಸ್ತಿತ್ವದಲ್ಲಿರುವ ಷೇರುದಾರರಿಗೆ ನೀಡಲಾದ ಹೆಚ್ಚುವರಿ ಷೇರುಗಳಾಗಿರುತ್ತವೆ. ಬೋನಸ್ ಷೇರುಗಳು ಕಂಪನಿಯ ಸಂಚಿತ ಗಳಿಕೆಗಳಾಗಿವೆ, ಇವುಗಳನ್ನು ಲಾಭಾಂಶಗಳ ರೂಪದಲ್ಲಿ ನೀಡಲಾಗುವುದಿಲ್ಲ, ಆದರೆ, ಉಚಿತ ಷೇರುಗಳನ್ನು ಬೋನಸ್ ಷೇರುಗಳಾಗಿ ಪರಿವರ್ತಿಸಲಾಗುತ್ತದೆ.

    ನ್ಯೂಜೆನ್ ಸಾಫ್ಟ್‌ವೇರ್ ಟೆಕ್ನಾಲಜೀಸ್‌ನ ಷೇರುದಾರರು ಈಗ ಪ್ರತಿಯೊಂದು ಷೇರಿಗೆ 1 ಬೋನಸ್ ಷೇರನ್ನು ಪಡೆಯಲು ಅರ್ಹರಾಗಿರುತ್ತಾರೆ.

    ನ್ಯೂಜೆನ್ ಸಾಫ್ಟ್‌ವೇರ್‌ನ ನಿರ್ದೇಶಕರ ಮಂಡಳಿಯು ಈಗಾಗಲೇ ನವೆಂಬರ್ 27 ರಂದು 1: 1 ಬೋನಸ್ ವಿತರಣೆಯನ್ನು ಅನುಮೋದಿಸಿದ್ದು, ಜನವರಿ 12 ಅನ್ನು ಇದಕ್ಕೆ ದಿನಾಂಕವಾಗಿ ನಿಗದಿಪಡಿಸಿದೆ. ಹೀಗಾಗಿ, ಷೇರುದಾರರು ಜನವರಿ 12 ರಂದು ನಡೆಯುವ ಪ್ರತಿ ಒಂದು ಷೇರಿಗೆ ಒಂದು ಬೋನಸ್ ಷೇರನ್ನು ಪಡೆಯಲು ಅರ್ಹರಾಗುತ್ತಾರೆ.

    ನ್ಯೂಜೆನ್ ಸಾಫ್ಟ್‌ವೇರ್ ಟೆಕ್ನಾಲಜೀಸ್ ಆಗಸ್ಟ್ 1, 2018 ರಿಂದ 6 ಬಾರಿ ಲಾಭಾಂಶವನ್ನು ಘೋಷಿಸಿದೆ. ಕಳೆದ 12 ತಿಂಗಳುಗಳಲ್ಲಿ, ನ್ಯೂಜೆನ್ ಸಾಫ್ಟ್‌ವೇರ್ ಟೆಕ್ನಾಲಜೀಸ್ ಪ್ರತಿ ಷೇರಿಗೆ 5 ರೂಪಾಯಿಯಂತೆ ಈಕ್ವಿಟಿ ಡಿವಿಡೆಂಡ್ ಘೋಷಿಸಿತ್ತು.

    ಬ್ರಿಟಿಷ್​ ರಾಯಭಾರಿಯ ಪಿಒಕೆ ಭೇಟಿ: ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದೇಕೆ?

    ಅಯೋಧ್ಯೆ ಸಂಬಂಧಿತ ಮತ್ತೊಂದು ಷೇರು: ಎರಡೇ ದಿನಗಳಲ್ಲಿ ಶೇಕಡಾ 37.6 ಹೆಚ್ಚಳ

    ರಾಮ ಮಂದಿರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಲಿ: ಉದ್ಧವ್ ಠಾಕ್ರೆ ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts