More

    ಅಯೋಧ್ಯೆ ಸಂಬಂಧಿತ ಮತ್ತೊಂದು ಷೇರು: ಎರಡೇ ದಿನಗಳಲ್ಲಿ ಶೇಕಡಾ 37.6 ಹೆಚ್ಚಳ

    ಮುಂಬೈ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಕೋಟ್ಯಂತರ ಹಿಂದೂಗಳು ಕಾತರದಿಂದ ಕಾಯುತ್ತಿದ್ದಾರೆ. ಅಯೋಧ್ಯೆಯ ಶ್ರೀರಾಮನ ಕೃಪೆ ಎಂಬಂತೆ ಷೇರು ಮಾರುಕಟ್ಟೆಯಲ್ಲಿ ಕೆಲವೊಂದು ಷೇರು ಅಪಾರ ಬೇಡಿಕೆ ಪಡೆದುಕೊಳ್ಳುತ್ತಿವೆ. ಈ ಪಟ್ಟಿಯಲ್ಲಿ ಈಗ ಮುಂಬೈ ಮೂಲದ ಅಲೈಡ್ ಡಿಜಿಟಲ್ ಸರ್ವಿಸಸ್ (ADSL) ಸೇರಿದೆ.

    ಈ ಕಂಪನಿಯ ಷೇರುಗಳು ಕೇವಲ 2 ದಿನಗಳಲ್ಲಿ ಶೇಕಡಾ 37.6 ವರೆಗೆ ಹೆಚ್ಚಳ ಕಂಡಿವೆ. ಇದಕ್ಕೆ ಕಾರಣ ಆಯೋಧ್ಯೆಯ ಶ್ರೀರಾಮ ಮಂದಿರ.

    ಅಯೋಧ್ಯೆ ಸ್ಮಾರ್ಟ್ ಸಿಟಿ ಯೋಜನೆಗೆ ಒಪ್ಪಂದವನ್ನು ಮಾಡಿಕೊಳ್ಳುವಲ್ಲಿ ಈ ಕಂಪನಿ ಯಶಸ್ವಿಯಾಗಿದೆ. ಗುರುವಾರದ ಅವಧಿಯಲ್ಲಿ ಈ ಸ್ಟಾಕ್​ ಶೇಕಡಾ 20 ಹಾಗೂ ಶುಕ್ರವಾರ ಶೇಕಡಾ 14.7% ರಷ್ಟು ಹೆಚ್ಚಳ ಕಂಡಿವೆ. ಈ ಮೂಲಕ 52 ವಾರಗಳ ಗರಿಷ್ಠ ಮೊತ್ತವಾದ 196 ರೂಪಾಯಿಗೆ ಈ ಕಂಪನಿಯ ಷೇರುಗಳು ತಲುಪಿವೆ.
    ಈ ಕಂಪನಿಯು ಮೈಕ್ರೊಕ್ಯಾಪ್‌ ಕಂಪನಿಯಾಗಿದ್ದು ಇದರ ಮಾರುಕಟ್ಟೆ ಬಂಡವಾಳೀಕರಣ ಅಂದಾಜು 1,000 ಕೋಟಿ ರೂಪಾಯಿ ಇದೆ.

    ಅಯೋಧ್ಯೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಸ್ತಿತ್ವದಲ್ಲಿರುವ ಐಟಿಎಂಎಸ್ ಕಂಟ್ರೋಲ್ ರೂಮ್‌ನೊಂದಿಗೆ ಸಿಸಿಟಿವಿ ಕಣ್ಗಾವಲು ಏಕೀಕರಣಕ್ಕಾಗಿ ಮಾಸ್ಟರ್ ಸಿಸ್ಟಮ್ ಇಂಟಿಗ್ರೇಟರ್ (ಎಂಎಸ್‌ಐ) ಆಗಿ ಆಯ್ಕೆ ತನ್ನನ್ನು ಆಯ್ಕೆ ಮಾಡಲಾಗಿದೆ ಎಂದು ಅಲೈಡ್ ಡಿಜಿಟಲ್ ಸರ್ವಿಸಸ್ ಗುರುವಾರ ಘೋಷಿಸಿತ್ತು. ಈ ಕಂಪನಿಯು ಐಟಿ ಪರಿಹಾರ ಸೇವಾ ಪೂರೈಕೆದಾರನಾಗಿದೆ.

    ಬಹು-ಸ್ಥಳ ಸಿಸಿ ಟಿವಿ ಕಣ್ಗಾವಲು ವ್ಯವಸ್ಥೆಯನ್ನು ಎಡಿಎಸ್​ಎಲ್​ ಸ್ಥಾಪಿಸುತ್ತದೆ, ಹೊಸ ಕ್ಯಾಮೆರಾಗಳನ್ನು ಸ್ಥಾಪಿಸುತ್ತದೆ, ಸಿಸಿ ಟಿವಿ ಕಣ್ಗಾವಲು ಕ್ಯಾಮೆರಾ ಜಾಲವನ್ನು ಏಕೀಕೃತ ವ್ಯವಸ್ಥೆಗೆ ಸಂಯೋಜಿಸುತ್ತದೆ, ಇದು ಅಸ್ತಿತ್ವದಲ್ಲಿರುವ ಐಟಿಎಂಸಿ ನಿಯಂತ್ರಣ ಕೊಠಡಿಗೆ ಸಂಪರ್ಕಗೊಳ್ಳುತ್ತದೆ. ಈ ಯೋಜನೆಯು ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸುತ್ತದೆ, ನಗರ ಆಡಳಿತವನ್ನು ಉತ್ತಮಗೊಳಿಸುತ್ತದೆ.

    ಅಯೋಧ್ಯಾ ನಗರವು ಅಭೂತಪೂರ್ವ ಬದಲಾವಣೆಗೆ ಒಳಗಾಗುತ್ತಿದೆ. “ನಾವು ಮಿಷನ್-ಕ್ರಿಟಿಕಲ್ ಸಿಸ್ಟಮ್‌ಗಳನ್ನು ಕಮಾಂಡ್ ಮತ್ತು ಕಂಟ್ರೋಲ್ ಆಗಿ ತಲುಪಿಸುತ್ತೇವೆ. ಇಲ್ಲಿ ಸ್ಥಾಪಿಸಲಾಗುತ್ತಿರುವ ಕೇಂದ್ರವು ಇಡೀ ನಗರದಾದ್ಯಂತ ಕಣ್ಗಾವಲು ವ್ಯವಸ್ಥೆಯ ಮೇಲ್ವಿಚಾರಣೆಗಾಗಿ ಕಾಕ್‌ಪಿಟ್ ಆಗಿ ಕಾರ್ಯನಿರ್ವಹಿಸುತ್ತದೆ. ಸುರಕ್ಷತೆ, ಭದ್ರತೆ ಮತ್ತು ಒಟ್ಟಾರೆ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಅತ್ಯಾಧುನಿಕ ಪರಿಹಾರಗಳನ್ನು ಒದಗಿಸುತ್ತದೆ” ಎಂದು ಎಡಿಎಸ್ಎಲ್ ಸಿಎಂಡಿ ನಿತಿನ್ ಡಿ ಶಾ ಹೇಳಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಅಯೋಧ್ಯೆ ರಾಮಮಂದಿರವನ್ನು ಹೂಡಿಕೆಯ ವಿಷಯವಾಗಿ ಪರಿಗಣಿಸಲಾಗುತ್ತಿದೆ. ದಲಾಲ್ ಸ್ಟ್ರೀಟ್‌ನಲ್ಲಿ ಅಯೋಧ್ಯೆ ಸಂಬಂಧಿತ ಸ್ಮಾಲ್‌ಕ್ಯಾಪ್ ಷೇರುಗಳು, ನಿರ್ದಿಷ್ಟವಾಗಿ ಬಾಯಲ್ಲಿ ನೀರೂರಿಸುವ ಲಾಭಗಳನ್ನು ಕಂಡಿವೆ. ಅಪೊಲೊ ಸಿಂಧೂರಿ ಹೋಟೆಲ್ಸ್, ಪ್ರವೇಗ್, ಜೆನೆಸಿಸ್ ಇಂಟರ್ನ್ಯಾಷನಲ್, ಇಂಡಿಯನ್ ಹೋಟೆಲ್ಸ್, ಐಆರ್​ಸಿಟಿಸಿ, ಇಂಡಿಗೋ ಇಂತಹ ಷೇರುಗಳಲ್ಲಿ ಸೇರಿವೆ.

    ರಾಮ ಮಂದಿರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಲಿ: ಉದ್ಧವ್ ಠಾಕ್ರೆ ಆಗ್ರಹ

    ರಾಮ ಮಂದಿರ ಉದ್ಘಾಟನೆ: ಹಿಂದೂ ಅಧಿಕಾರಿಗಳಿಗೆ ವಿಶೇಷ ರಜೆ ನೀಡಿದ ಮಾರಿಷಸ್​ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts