ತಮ್ಮ ತಂಡದ ಆಟಗಾರನ ಮೇಲೆಯೇ ಹಾರ್ದಿಕ್​ ರೌದ್ರಾವತಾರ! ಹೀಗೆಲ್ಲಾ ಆಡಿದ್ರೆ… ಫ್ಯಾನ್ಸ್​ ಸಿಡಿಮಿಡಿ

WhatsApp Image 2024-04-27 at 7.07.23 PM
Published on

ನವದೆಹಲಿ: ಇಂದು ಅರುಣ್ ಜೆಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ನ 43ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಮುಖಾಮುಖಿಯಾಗಿವೆ. ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಎಂಐ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ, ಡೆಲ್ಲಿ ಪಡೆಗೆ ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಈ ಮಧ್ಯೆ ತಮ್ಮ ತಂಡದ ಆಟಗಾರನ ವಿರುದ್ಧವೇ ಸಿಡಿದೆದ್ದ ಪಾಂಡ್ಯ, ಆಟದ ನಡುವೆಯೇ ಆತನ ಮೇಲೆ ತೋರಿದ ದರ್ಪಕ್ಕೆ ಇದೀಗ ಕ್ರಿಕೆಟ್ ಫ್ಯಾನ್ಸ್ ಕಿಡಿಕಾರಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಡೆಲ್ಲಿ ಪಡೆಗೆ ಉತ್ತಮ ಓಪನಿಂಗ್ ಸಿಕ್ಕಿದ್ದು, 20 ಓವರ್​ಗಳಲ್ಲಿ ಕೇವಲ ನಾಲ್ಕು ವಿಕೆಟ್ ನಷ್ಟಕ್ಕೆ 257 ರನ್​ಗಳ ಬೃಹತ್​ ಗುರಿಯನ್ನು ಮುಂಬೈಗೆ ಚೇಸ್​ ಮಾಡಲು ಸವಾಲು ಹಾಕಿತು. ಈ ವೇಳೆ ಡೆಲ್ಲಿ ಬ್ಯಾಟ್ಸ್​ಮನ್​ಗಳಾದ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಕೇವಲ 27 ಬಾಲ್​ಗೆ 84 ರನ್ ಸಿಡಿಸಿದರೆ, ಶಾಯ್ ಹೋಪ್ 17 ಬಾಲ್​ಗೆ 41 ರನ್​ಗಳನ್ನು ಬಾರಿಸಿದರು.

ಡೆಲ್ಲಿ ಬ್ಯಾಟ್ಸ್​ಮನ್​ಗಳ ಆರ್ಭಟವನ್ನು ಕಟ್ಟಿಹಾಕುವಲ್ಲಿ ವಿಫಲರಾದ ತಮ್ಮ ಬೌಲರ್​​ಗಳ ವಿರುದ್ಧ ಹಾರ್ದಿಕ್ ಪಾಂಡ್ಯ ಕಿರುಚಾಡಿದ ದೃಶ್ಯ ಕ್ಯಾಮರಾಮ್ಯಾನ್​ ಕಣ್ಣಿಗೆ ಬಿದ್ದಿದೆ. ಮೊದಲ ಇನ್ನಿಂಗ್ಸ್​ ಮುಗಿಯುವಷ್ಟರಲ್ಲೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಹಾರ್ದಿಕ್​ರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net