

ಬಾಗಲಕೋಟೆ: ಬಿಜೆಪಿ ರೈತರ ಶ್ರೇಯೋಭಿವೃದ್ಧಿಯತ್ತ ಚಿಂತಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ತಿಳಿಸಿದರು.
ಬಾಗಲಕೋಟೆಯ ಬಾದಾಮಿಯ ಕೆರಕಲಮಟ್ಟಿಯಲ್ಲಿ ಎಥೆನಾಲ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಬಾಗಲಕೋಟೆ ಕ್ಷೇತ್ರದ ಪುಣ್ಯಭೂಮಿಗೆ ವಂದಿಸುತ್ತೇನೆ. ಇಲ್ಲಿಯ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಈ ಭಾಗದ ರೈತರಿಗೆ ಕೋಟಿ ಕೋಟಿ ವಂದಿಸುತ್ತೇನೆ. ಮಕರ ಸಂಕ್ರಾಂತಿ ರೈತರ ಪಾಲಿನ ದೊಡ್ಡ ಹಬ್ಬವಾಗಿದ್ದು, ಸೂರ್ಯ ಪಥ ಬದಲಿಸುವ ಸಮಯದಲ್ಲಿ ರೈತರಿಗೆ ಶುಭವಾಗಲಿ ಎಂದರು.
ಇಂದು ವಿವಿಧ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮ ನೆರವೇರಿದೆ. ನಿರಾಣಿ ಗ್ರೂಪಪ್ ಆಫ್ ಇಂಡಸ್ಟ್ರೀಸ್ ಸಾಹಸಕ್ಕೆ ಕೈ ಹಾಕಿದೆ. ಮುರುಗೇಶ ನಿರಾಣಿ ಅವರಿಗೆ ಅಭಿನಂದಿಸುತ್ತೇನೆಂದ ಷಾ, ಕರ್ನಾಟಕದ ಜನರಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಕರ್ನಾಟಕ ಜನರು ಪ್ರಧಾನಿ ಮೋದಿಗೆ ಪೂರ್ಣ ಬಹುಮತ ಕೊಟ್ಟಿದ್ದಾರೆ. ನಾವು ಅವರಿಗೆ ಆಭಾರಿಯಾಗಿದ್ದೇವೆ. ಮುಂಬೈ ಕರ್ನಾಟಕ ಕೂಡ ಬಿಜೆಪಿಯನ್ನು ಬೆಂಬಲಿಸುತ್ತ ಬಂದಿದೆ ಎಂದರು.
ಇಂದಿನ ದಿನಮಾನಗಳಲ್ಲಿ ಎಥೆನಾಲ್ ಉತ್ಪಾದನೆ ಹೆಚ್ಚಿಸುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ. ಇದರಿಂದ ಎಲ್ಲರಿಗೂ ಒಳಿತಾಗಲಿದೆ. ಇದು ಮೋದಿಯ ಆತ್ಮನಿರ್ಭರ ಕೆಲಸವಾಗಿದೆ. ಮೋದಿ ಗ್ರೂಪ್ ಕೂಡ ಎಥೇನಾಲ್ ಉತ್ಪಾದಿಸುತ್ತಿದೆ. ಎಥೆನಾಲ್ ಮೇಲೆ 2018ರಲ್ಲಿ ಜಿ.ಎಸ್.ಟಿ ಕೇವಲ 5% ಮಾಡಿದ್ದರಿಂದ ಎಲ್ಲರಿಗೂ ಅನುಕೂಲವಾಗಿದೆ. ತ್ಯಾಜ್ಯದಿಂದಲೂ ಕೂಡ ಎಥೆನಾಲ ಉತ್ಪಾದನೆ ಮಾಡಲು ಪರ್ಮಿಸನ್ ನೀಡಲಾಗಿದೆ. 2025 ರ ಹೊತ್ತಿಗೆ ಎಥೆನಾಲ್ ಶೆ. 25ರಷ್ಟು ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದರು.
ಮೋದಿಯವರದ್ದು ರೈತರ ಆದಾಯ ಹೆಚ್ಚಿಸುವ ಗುರಿಯಾಗಿದೆ. ಉತ್ತಮ ಅಡಳಿತ ನೀಡುತ್ತಿರುವ ಮೋದಿ, ಈಗ ರೈತರಿಗೆ ನೇರವಾಗಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಣ ಜಮೆ ಆಗುತ್ತಿದೆ. ಮೋದಿ ಸರ್ಕಾರ 10ಲಕ್ಷ ಕೋಟಿಗೂ ಖರ್ಚು ಮಾಡಿ ರೈತರ ಅಭಿವೃದ್ದಿಗೆ ಶ್ರಮಿಸಲಾಗುತ್ತಿದೆ ಎಂದರು.
ಕರ್ನಾಕದಲ್ಲಿ ಯಡಿಯೂರಪ್ಪ ಕೂಡ ರೈತ ಜನರ ಅಭಿವೃದ್ದಿಗೆ ಯಾವುದೇ ರೀತಿ ಹಿಂದೆ ಬಿದ್ದಿಲ್ಲ. ಕೇಂದ್ರದ ಎಲ್ಲಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದಾರೆ ಎಂದು ಯಡಿಯೂರಪ್ಪನವರ ಸರ್ಕಾರದ ಆಡಳಿತವನ್ನ ಷಾ ಹೊಗಳಿದರು.