

ಮುಂಬೈ: ಅಯೋಧ್ಯೆಯ ಕಂಪನಿಯೊಂದು ಷೇರು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಈ ಕಂಪನಿಯ ಹೆಸರು ಪಕ್ಕಾ ಲಿಮಿಟೆಡ್. ಪಕ್ಕಾ ಲಿಮಿಟೆಡ್ನ (PAKKA Ltd.) ಷೇರುಗಳು ಇದೇ ತಿಂಗಳು ಜನವರಿ ಆರಂಭದಿಂದ ಇಲ್ಲಿಯವರೆಗೆ 148% ರಷ್ಟು ಏರಿಕೆ ಕಂಡಿವೆ.
ಜನವರಿ 22 ರಂದು ನಡೆಯುವ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಅಯೋಧ್ಯೆ ಮೂಲದ ಈ ಕಂಪನಿಯು ಮಿಶ್ರಗೊಬ್ಬರ ತಟ್ಟೆಗಳು, ಬಟ್ಟಲುಗಳು ಮತ್ತು ಚಮಚಗಳನ್ನು ಪೂರೈಸುತ್ತದೆ ಎಂದು ತಿಳಿದ ನಂತರ ಕಳೆದ ಒಂದು ವಾರದಲ್ಲಿ ಸ್ಮಾಲ್ ಕ್ಯಾಪ್ ಸ್ಟಾಕ್ ಬೆಲೆ ದ್ವಿಗುಣಗೊಂಡಿದೆ. ಗುರುವಾರ ಈ ಕಂಪನಿಯ ಷೇರುಗಳು 12% ಕ್ಕಿಂತ ಹೆಚ್ಚು ಏರಿಕೆ ಕಂಡವು. ಶನಿವಾರ (ಜ. 20) ಈ ಕಂಪನಿಯ ಷೇರುಗಳು 14.35 ರೂಪಾಯಿ (3.87%) ಹೆಚ್ಚಳವಾಗಿ 385.60 ರೂಪಾಯಿಗೆ ತಲುಪಿವೆ.
ಈ ಕಂಪನಿಯು ತಯಾರಿಸಿದ ಪರಿಸರ ಸ್ನೇಹಿ ಆಹಾರ ಪ್ಲೇಟ್ಗಳಲ್ಲಿ ಪ್ರಸಾದ ನೀಡಲಾಗುತ್ತದೆ.
ರಾಮ ಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಪಕ್ಕಾ ಲಿಮಿಟೆಡ್ನಿಂದ ತಯಾರಿಸಿದ ಪರಿಸರ ಸ್ನೇಹಿ ಪ್ಲೇಟ್ನಲ್ಲಿ ಭಕ್ತರಿಗೆ ಪ್ರಸಾದ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ.
'ಕಾಂಪೊಸ್ಟ್ ಟೇಬಲ್ವೇರ್ಗೆ ಹೆಸರುವಾಸಿಯಾದ ನಮ್ಮ ಪ್ರಮುಖ ಬ್ರ್ಯಾಂಡ್ CHUK ಅನ್ನು ರಾಮ ಮಂದಿರ ಟ್ರಸ್ಟ್, ರಾಮ ಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿದೆ. ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ಈ ಅತ್ಯಂತ ಮಹತ್ವದ ಕಾರ್ಯಕ್ರಮದಲ್ಲಿ ನಮ್ಮ ಪಾತ್ರವನ್ನು ನಿರ್ವಹಿಸಲು ನಾವು ಸಿದ್ಧರಿದ್ದೇವೆ" ಎಂದು ಕಂಪನಿಯ ಅಧಿಕಾರಿ ಹೇಳಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಪಕ್ಕಾ ಲಿಮಿಟೆಡ್ನ ಷೇರುಗಳು ಸುಮಾರು 250% ರಷ್ಟು ಜಿಗಿದಿವೆ. ಕಂಪನಿಯ ಷೇರುಗಳು 2023ರ ಜನವರಿ 19ರಂದು 92.80 ರೂಪಾಯಿ ಇದ್ದುದು, , 2024ರ ಜನವರಿ 18ರಂದು 323.75 ರೂಪಾಯಿಗೆ ತಲುಪಿವೆ. ಕಳೆದ 4 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಈ ಕಂಪನಿಯ ಷೇರುಗಳು 1507% ರಷ್ಟು ಹೆಚ್ಚಾಗಿವೆ. ಕಳೆದ 6 ತಿಂಗಳಲ್ಲಿ 160% ರಷ್ಟು ಹೆಚ್ಚಾಗಿವೆ.