More

    ‘ಅಯೋಧ್ಯೆ ಸ್ಟಾಕ್ ಎಕ್ಸ್‌ಚೇಂಜ್’: ರಾಮ ಮಂದಿರ ಸಂಬಂಧಿ ಷೇರುಗಳಲ್ಲಿ ಅಪಾರ ಲಾಭ, ಹೂಡಿಕೆ ತಜ್ಞರ ಬೆಟ್ಟಿಂಗ್​

    ಮುಂಬೈ: ಜ. 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಸಮಾರಂಭ ನಡೆಯಲಿದೆ. ಅಯೋಧ್ಯೆ ಮತ್ತು ರಾಮ ಮಂದಿರ ಸಂಬಂಧಿಸಿದ ಷೇರುಗಳಿಗೆ ಭಾರಿ ಬೇಡಿಕೆ ಬರುತ್ತಿದೆ. ಅಯೋಧ್ಯೆಯು ಒಂದು ರೀತಿ ಸ್ಟಾಕ್ ಎಕ್ಸ್​ಚೇಂಜ್​ ರೀತಿಯಾಗಿದೆ.

    2024 ರ ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದ ಬಹು ನಿರೀಕ್ಷಿತ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕಾಗಿ ದೇಶವು ಕಾಯುತ್ತಿರುವಾಗ, ಮುಂಬೈನ ದಲಾಲ್ ಸ್ಟ್ರೀಟ್‌ನಲ್ಲಿ ಧಾರ್ಮಿಕ ಪ್ರವಾಸೋದ್ಯಮ ಸಂಬಂಧಿ ಷೇರುಗಳ ಮೇಲೆ ಸವಾರಿ ಮಾಡುವ ಆಲೋಚನೆ ಸಾಗಿದೆ.

    ಈ ಮೆಗಾ ಈವೆಂಟ್‌ನಿಂದ ಪ್ರಯೋಜನ ಪಡೆಯಲಿರುವ 10 ಷೇರುಗಳ ಕುರಿತು ತಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

    ಐಆರ್​ಸಿಟಿಸಿ (IRCTC):
    ಭಾರತೀಯ ರೈಲ್ವೇಯು ಅಯೋಧ್ಯೆಯನ್ನು ದೇಶದ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕಿಸಲು ಆಲೋಚಿಸುತ್ತಿದೆ. ಹೀಗಾಗಿ IRCTC ಷೇರುಗಳು ಅಯೋಧ್ಯೆ ಪ್ರವಾಸೋದ್ಯಮದ ವರ್ಧನೆಯಿಂದ ನೇರವಾಗಿ ಲಾಭವನ್ನು ಪಡೆಯುವ ನಿರೀಕ್ಷೆಯಿದೆ. ರೈಲ್ವೆಯು ಜನವರಿ 22 ರಿಂದ 200 ಆಸ್ತಾ ವಿಶೇಷ ರೈಲುಗಳನ್ನು ಓಡಿಸಲು ಯೋಜಿಸಿದೆ. ಈ ಸ್ಟಾಕ್ ಈಗಾಗಲೇ ಉತ್ತಮ ಲಾಭ ಮಾಡುತ್ತಿದೆ, ಕಂಪನಿಯು ಕೇಟರಿಂಗ್ ಮತ್ತು ಟಿಕೆಟಿಂಗ್ ವಿಭಾಗದಲ್ಲಿ ಏಕಸ್ವಾಮ್ಯವನ್ನು ಹೊಂದಿದೆ.

    ಸದ್ಯ 1024 ರೂಪಾಯಿ ಇರುವ ಈ ಷೇರು ಶೀಘ್ರದಲ್ಲೇ 1,250 ರೂಪಾಯಿಯ ಮಟ್ಟವನ್ನು ಮುಟ್ಟಲಿದೆ ಎಂಬುದು ಹೂಡಿಕೆ ಪರಿಣತರ ಅಂದಾಜು.

    ಪ್ರವೇಗ್ (Praveg):
    ಈವೆಂಟ್ ಮ್ಯಾನೇಜ್ಮೆಂಟ್, ಪ್ರದರ್ಶನ ನಿರ್ವಹಣೆ, ಪ್ರವಾಸೋದ್ಯಮ ಮತ್ತು ಆತಿಥ್ಯ ಕಂಪನಿಯಾಗಿದೆ ಪ್ರವೇಗ್. ಈ ಷೇರುಗಳು 6-9 ತಿಂಗಳಲ್ಲಿ ಸುಮಾರು 1,300 ರೂ.ಗಳನ್ನು ತಲುಪುವ ನಿರೀಕ್ಷೆಯಿದೆ. ಸದ್ಯ ಈ ಷೇರಿನ ಬೆಲೆ 1070 ರೂಪಾಯಿ ಇದೆ.

    ಇಂಟರ್ ಗ್ಲೋಬ್ ಏವಿಯೇಷನ್ (InterGlobe Aviation):

    ವಿಮಾನಯಾನ ಸಂಸ್ಥೆ ಇಂಡಿಗೋದ ಮಾತೃ ಸಂಸ್ಥೆ ಇದಾಗಿದೆ. ಅಯೋಧ್ಯೆಯಲ್ಲಿ ವಿಮಾನಗಳ ಸಂಚಾರದ ನಂತರ ಈ ಕಂಪನಿಯ ಷೇರು ಬೇಡಿಕೆಯಲ್ಲಿದೆ. ಕಡಿಮೆ ದರದ ಈ ವಿಮಾನಯಾನ ಸಂಸ್ಥೆಯು ಈಗಾಗಲೇ ದೆಹಲಿ, ಮುಂಬೈ ಮತ್ತು ಅಹಮದಾಬಾದ್‌ನಿಂದ ಅಯೋಧ್ಯೆಗೆ ನೇರ ವಿಮಾನ ಯಾನವನ್ನು ಪ್ರಾರಂಭಿಸಿದೆ.
    ಸದ್ಯ 3041 ರೂಪಾಯಿ ಬೆಲೆ ಇರುವ ಈ ಷೇರು 3,750 ರೂ. ಮಟ್ಟ ಮುಟ್ಟಬಹುದಾಗಿದೆ.

    ಕಾಮತ್ ಹೋಟೆಲ್ಸ್ (Kamat Hotels (India) Ltd.):
    ಅಯೋಧ್ಯೆಯಲ್ಲಿ ಪ್ರವಾಸೋದ್ಯಮವು ಉತ್ತೇಜಿತವಾಗುತ್ತಿದ್ದಂತೆ, ಕಾಮತ್ ಹೊಟೇಲ್ ತನ್ನ ಹೊಸ ಹೋಟೆಲ್ ಅನ್ನು 50 ಕೊಠಡಿಗಳ ಸಾಮರ್ಥ್ಯದೊಂದಿಗೆ ಕಾರ್ಯಾಚರಣೆ ಮಾಡಲು ಯೋಜಿಸಿದೆ. ಕಂಪನಿಯು ಈ ಅವಕಾಶವನ್ನು ಬಳಸಿಕೊಂಡು ಇನ್ನೂ 2 ಹೋಟೆಲ್‌ಗಳನ್ನು ಪ್ರಾರಂಭಿಸಲು ಯೋಜಿಸಿದೆ. ಸದ್ಯ 357 ರೂಪಾಯಿ ಇರುವ ಈ ಷೇರು 750 ರೂಪಾಯಿವರೆಗೂ ಏರಬಹುದು ಎಂಬುದು ಹೂಡಿಕೆ ವಿಶ್ಲೇಷಕರ ಅಂದಾಜು.

    ಅಪೊಲೊ ಸಿಂಧೂರಿ (Apollo Sindoori Hotels Ltd):
    ಕಂಪನಿಯು ಅಯೋಧ್ಯೆ ಮಾರುಕಟ್ಟೆಯಲ್ಲಿ ಮಲ್ಟಿ-ಲೆವೆಲ್ ಪಾರ್ಕಿಂಗ್ ಪ್ರದೇಶದ ಅಭಿವೃದ್ಧಿಯನ್ನು ಪ್ರಾರಂಭಿಸಿದೆ. ಇದು ಕಂಪನಿಗೆ ಉತ್ತಮ ಭವಿಷ್ಯವನ್ನು ನೀಡುತ್ತದೆ. ಅಯೋಧ್ಯೆಯಲ್ಲಿನ ಈ ಯೋಜನೆಯಿಂದ ಷೇರುಗಳು ಲಾಭ ಪಡೆಯಲಿವೆ. 2288 ರೂಪಾಯಿ ಇರುವ ಈ ಕಂಪನಿಯ ಷೇರು 3000 ರೂಪಾಯಿ ತಲುಪಬಹುದೆಂದು ಅಂದಾಜಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts