More

    6 ತಿಂಗಳಲ್ಲಿ 1420% ಲಾಭ ನೀಡಿದ ಷೇರಿಗೆ ಭಾರಿ ಬೇಡಿಕೆ: ಸ್ಟಾಕ್ ಸ್ಪ್ಲಿಟ್​ಗೆ ಕಂಪನಿ ರೆಡಿಯಾಗಿದ್ದೇಕೆ?

    ಮುಂಬೈ: ಡಾಲ್ಫಿನ್ ಆಫ್‌ಶೋರ್ ಎಂಟರ್‌ಪ್ರೈಸಸ್ (ಇಂಡಿಯಾ) (Oil & Gas stock, Dolphin Offshore Enterprises (India) ತೈಲ ಮತ್ತು ಅನಿಲ ಕಂಪನಿಯಾಗಿದೆ. ಹಲವಾರು ತಿಂಗಳುಗಳಿಂದ ಈ ಕಂಪನಿಯ ಷೇರು ಏರುತ್ತಲೇ ಇದೆ. ಈ ವಾರ ಕೂಡ ಇದಕ್ಕೆ ಹೊರತಾಗಿಲ್ಲ.

    ಗುರುವಾರ ಜನವರಿ 18 ರಂದು ಈ ಸ್ಟಾಕ್ ಹೊಸ 52 ವಾರಗಳ ಗರಿಷ್ಠ ಮಟ್ಟವನ್ನು ಮುಟ್ಟಿತು. ಶನಿವಾರ ಜನವರಿ 20ರ ವಿಶೇಷ ವಹಿವಾಟಿನಲ್ಲಿ ಈ ಷೇರು 34.50 ರೂಪಾಯಿ (2.00%) ಹೆಚ್ಚಳ ಕಂಡು 1759.60 ರೂಪಾಯಿಗೆ ಏರಿ ಮತ್ತೆ ಹೊಸ ಗರಿಷ್ಠ ಮಟ್ಟವನ್ನು ತಲುಪಿತು. ಶುಕ್ರವಾರ ಜನವರಿ 19ರಂದು ಕೂಡ ಈ ಷೇರಿನ ಬೆಲೆ 1,725.10ರ ಮಟ್ಟವನ್ನು ತಲುಪಿತ್ತು.

    ಈಚಿನ ದಿನಗಳಲ್ಲಿ ಹೂಡಿಕೆದಾರರು ಈ ಷೇರು ಮಾರುವುದರ ಬದಲಾಗಿ ಖರೀದಿ ಮಾಡುವುದರತ್ತ ಗಮನ ನೀಡುತ್ತಿದ್ದಾರೆ.

    ಈ ಸ್ಟಾಕ್ 2023 ರ ಆಗಸ್ಟ್ 21 ರಂದು ತನ್ನ 52 ವಾರಗಳ ಕನಿಷ್ಠ ಮಟ್ಟ ತಲುಪಿ 109 ರೂಪಾಯಿಯಲ್ಲಿ ವಹಿವಾಟು ನಡೆಸಿತ್ತು. ಈ ಸ್ಟಾಕ್ ಕಳೆದ ಒಂದು ವರ್ಷದಲ್ಲಿ ಶೇಕಡಾ 1,421.24 ರಷ್ಟು ಭಾರಿ ಲಾಭವನ್ನು ದಾಖಲಿಸಿದೆ.

    ಇದರರ್ಥ ಹೂಡಿಕೆದಾರರು ಆಗಸ್ಟ್ 21, 2023 ರಂದು ಡಾಲ್ಫಿನ್ ಷೇರುಗಳಲ್ಲಿ ರೂ 1 ಲಕ್ಷವನ್ನು ಹೂಡಿಕೆ ಮಾಡಿದ್ದಾರೆ ಎಂದು ಭಾವಿಸೋಣ. ಈಗ ಅದು 14 ಲಕ್ಷ 21 ಸಾವಿರ ರೂಪಾಯಿಗೆ ಏರುತ್ತಿತ್ತು. ಈ 6 ತಿಂಗಳ ಅವಧಿಯಲ್ಲಿ ಈ ಷೇರು 1,420 ಪ್ರತಿಶತದಷ್ಟು ಲಾಭವನ್ನು ನೀಡಿದೆ.

    ಈ ಕಂಪನಿಯು ಮುಂದಿನ ವಾರ ಎಕ್ಸ್-ಸ್ಪ್ಲಿಟ್ (ವಿಭಜನೆ ಪೂರ್ವ) ವ್ಯಾಪಾರ ಮಾಡಲು ಸಿದ್ಧವಾಗಿದೆ. ಸಂಸ್ಥೆಯು 1:10 ಅನುಪಾತದಲ್ಲಿ ತನ್ನ ಸ್ಟಾಕ್ ವಿಭಜಿಸಲು ಜನವರಿ 25 ದಿನಾಂಕವನ್ನು ನಿಗದಿಪಡಿಸಿದೆ.

    1:10 ರ ಅನುಪಾತ ಎಂದರೆ 10 ರೂ ಮುಖಬೆಲೆಯ 1 ಡಾಲ್ಫಿನ್ ಷೇರನ್ನು ತಲಾ ರೂ 1 ಮುಖಬೆಲೆಯ ಡಾಲ್ಫಿನ್‌ನ ಹತ್ತು ಈಕ್ವಿಟಿ ಷೇರುಗಳಾಗಿ ವಿಂಗಡಿಸಲಾಗುತ್ತದೆ. ಸಣ್ಣ ಹೂಡಿಕೆದಾರರಿಗೆ ಈ ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡಲು ಉತ್ತಮ ಅವಕಾಶವನ್ನು ಇದು ಒದಗಿಸುತ್ತದೆ.

    ಷೇರುಗಳನ್ನು ಸಣ್ಣ ಗಾತ್ರಗಳಲ್ಲಿ ಒಡೆಯುವ ಮೂಲಕ ದ್ರವ್ಯತೆ (ನಗದು) ಸುಧಾರಿಸಲು ಇದನ್ನು ಮಾಡಲಾಗುತ್ತದೆ. ವಿಭಜನೆಯ ಅನುಪಾತಕ್ಕೆ ಅನುಗುಣವಾಗಿ ಷೇರುಗಳ ಮುಖಬೆಲೆ ಕಡಿಮೆಯಾಗುತ್ತದೆ.

    ಆದರೆ, ಇದು ಕಂಪನಿಯ ಷೇರು ಬಂಡವಾಳ ಮತ್ತು ಸಂಗ್ರಹಣೆಯ ಮೇಲೆ ಪರಿಣಾಮ ಬೀರುವುದಿಲ್ಲ. ಸ್ಟಾಕ್ ವಿಭಜನೆಯು ಸ್ಟಾಕ್​ ಮೌಲ್ಯವನ್ನು ಕಡಿಮೆ ಮಾಡುತ್ತದೆಯಾದರೂ, ಅದು ನಿರ್ದಿಷ್ಟ ಸ್ಟಾಕ್​ ಹೂಡಿಕೆದಾರರ ಪೋರ್ಟ್ಫೋಲಿಯೊಗಳಲ್ಲಿನ ಷೇರುಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.

    ಡಾಲ್ಫಿನ್ ಆಫ್‌ಶೋರ್ ಎಂಟರ್‌ಪ್ರೈಸಸ್ ಇಂಡಿಯಾ ಲಿಮಿಟೆಡ್ (DOEIL) ಭಾರತೀಯ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಉದ್ಯಮಗಳಿಗೆ ಸೇವೆಗಳನ್ನು ಒದಗಿಸುವ ಪ್ರಮುಖ ಸಂಸ್ಥೆಯಾಗಿದೆ.

    ಈ ಕಂಪನಿಯನ್ನು ಮೇ 17, 1979 ರಂದು ಸ್ಥಾಪಿಸಲಾಯಿತು. ಇದರ ವ್ಯವಹಾರವು ಇಂಜಿನಿಯರಿಂಗ್ ಮತ್ತು ಜಲಾಂತರ ಡೈವಿಂಗ್ ವಿನ್ಯಾಸ (underwater diving design), ಹಡಗು ನಿರ್ವಹಣೆ ಮತ್ತು ಕಾರ್ಯಾಚರಣೆಗಳು, ಸಾಗರ ಲಾಜಿಸ್ಟಿಕ್ಸ್ ಮತ್ತು ಫ್ಯಾಬ್ರಿಕೇಶನ್ ಒಳಗೊಂಡಿದೆ.

    ಈ ಕಂಪನಿಯ ಸ್ಥಾಪಕರು ಮತ್ತು ನಿರ್ದೇಶಕರು ಭಾರತದ ಮಾಜಿ ಗವರ್ನರ್ ಜನರಲ್ ಸಿ. ರಾಜಗೋಪಾಲಾಚಾರಿ ಅವರ ಮಾಜಿ ಕಾರ್ಯದರ್ಶಿ ಮತ್ತು ಮುಂಬೈನ ಪ್ರಸಿದ್ಧ ಉದ್ಯಮಿಯಾಗಿದ್ದ ಶವಾಕ್ಸ್ ಎ ಲಾಲ್ ಅವರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts