

Terrorists attack : ಪಶ್ಚಿಮ ನೈಜರ್ನ ಹಳ್ಳಿಯ ಮೇಲೆ ಜಿಹಾದಿ ಗುಂಪು ನಡೆಸಿದ ದಾಳಿಯಲ್ಲಿ 44 ಜನರು ನಾಗರಿಕರು ಮೃತಪಟ್ಟಿದ್ದು, 13 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಅಂತರಿಕ ಸಚಿವಾಲಯ ಶನಿವಾರ(ಮಾ.22) ತಿಳಿಸಿದೆ.
ಮಾಲಿ ಮತ್ತು ಬುರ್ಕಿನಾ ಫಾಸೋದ ತ್ರಿ-ರಾಜ್ಯ ಗಡಿಯ ಬಳಿಯ ಕೊಕೊರೌ ಗ್ರಾಮೀಣ ಕಮ್ಯೂನಲ್ಲಿರುವ ಫ್ಯಾಬಿಂಟ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಗ್ರೇಟ್ ಸಹಾರಾದಲ್ಲಿನ ಇಸ್ಲಾಮಿಕ್ ಸ್ಟೇಟ್ ಅಥವಾ ಇಐಜಿಎಸ್ ಮೇಲೆ ದಾಳಿ ನಡೆಸಲಾಗಿದೆ ಎಂದು ಸಚಿವಾಲಯ ಆರೋಪಿಸಿದೆ.
''ಮಧ್ಯಾಹ್ನನ 2 ಗಂಟೆ ಸುಮಾರಿಗೆ ಮಸೀದಿಯಲ್ಲಿ ಪಾರ್ಥನೆ ಸಲ್ಲಿಸುತ್ತಿದ್ದಾಗ, ಮಸೀದಿಯನ್ನು ಸುತ್ತುವರೆದ ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರು ದಾಳಿ ನಡಿಸಿದ್ದಾರೆ'' ಬಂದೂಕುಧಾರಿಗಳು ಹಿಮ್ಮೆಟ್ಟುವ ಮೊದಲು ಮಾರುಕಟ್ಟೆ ಮತ್ತು ಮನೆಗಳಿಗೂ ಬೆಂಕಿ ಹಚ್ಚಿದರು ಎಂದು ಅದು ಹೇಳಿದೆ.(ಏಜೆನ್ಸೀಸ್)