Aishwarya : ಬಾಲಿವುಡ್ನಲ್ಲಿ ಸದಾ ಆಕ್ಟಿವ್ ಆಗಿರುವ ಹಾಗೂ ಸರಳವಾಗಿರುವ ನಟ ಎಂದರೆ ಅಭಿಷೇಕ್ ಬಚ್ಚನ್ ಎಂದೇ ಹೇಳಬಹುದು. ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಅಭಿಷೇಕ್ ಇದೀಗ ತಮ್ಮ ಕುಟುಂಬದ ವಿಚಾರವಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಇದನ್ನೂ ಓದಿ:ವಿಶ್ವದ ಟಾಪ್ 5 ಅತ್ಯಂತ ಸಂತೋಷದಾಯಕ ದೇಶಗಳಿವು!; ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ? | Happiest Countries
ಹೌದು, ಇತ್ತೀಚಿಗೆ ಮುಂಬೈನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಅರ್ಜುನ್ ಕಪೂರ್ ನಡುವಿನ ಹಾಸ್ಯದ ಮಾತುಗಳು ಎಲ್ಲರ ಗಮನಸೆಳೆಯಿತು. ” ಐ ವಾಂಟ್ ಟು ಟಾಕ್ ” ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದ ಅಭಿಷೇಕ್, ಸ್ಟೇಜ್ ಮೇಲೆ ಮಾತನಾಡುತ್ತಿದ್ದಾಗ ಅರ್ಜುನ್ ಕಪೂರ್ ಪ್ರಶ್ನೆಯೊಂದನ್ನು ಕೇಳಿದರು. ಇದಕ್ಕೆ ಸಾಮಧಾನದಿಂದಲೇ ಹಾಸ್ಯವಾಗಿ ಉತ್ತರಿಸಿದರು.
ವೇದಿಕೆ ಮೇಲೆ ನಡೆದ ಹಾಸ್ಯ ಪ್ರಸಂಗ..
‘ಅಭಿಷೇಕ್.. ನಾನು ತಕ್ಷಣ ಮಾತನಾಡಬೇಕು?’ ಎಂದು ಹೇಳಿದಾಗ ನಿಮಗೆ ಆತಂಕ ಹುಟ್ಟಿಸುವ ವ್ಯಕ್ತಿ ಯಾರು? ಎಂದು ಅರ್ಜುನ್ ಕೇಳಿದರು. ಇದಕ್ಕೆ ಉತ್ತರಿಸಿದ ಅಭಿಷೇಕ್, ನೀವು ಇನ್ನು ಮದುವೆಯಾಗಿಲ್ಲ ಅಲ್ವಾ? ನಿಮಗೆ ಮದುವೆಯಾದ ನಂತರ ಉತ್ತರ ತಿಳಿಯುತ್ತದೆ ಎಂದು ಅಭಿಷೇಕ್ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದರು.
ಇದನ್ನೂ ಓದಿ:ಪೋಷಕ ಪಾತ್ರದಿಂದ ಸ್ಟಾರ್ ನಾಯಕಿಯವರೆಗೆ…: ತಮಿಳು, ತೆಲುಗು ಸ್ಟಾರ್ ನಟರ ಚಿತ್ರದಲ್ಲಿ ಮಮಿತಾ ಬೈಜು
ಮುಂದುವರೆದು ” ನಿಮ್ಮ ಹೆಂಡತಿ ಕರೆ ಮಾಡಿ, ತಕ್ಷಣ ಬನ್ನಿ ಎಂದು ಕರೆದಾಗ ನೀವೂ ನಿಜವಾಗಿಯೂ ಎನೋ ಸಮಸ್ಯೆ ಮಾಡಿಕೊಂಡಿದ್ದೀರಿ ಎಂದರ್ಥ ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದಕ್ಕೆ ಮರು ಮಾತನಾಡದ ಅರ್ಜುನ್, ಧನ್ಯವಾದ” ಎಂದು ಹೇಳಿ ಅಭಿಷೇಕ್ ಅವರನ್ನು ವೇದಿಕೆಯಿಂದ ಕೆಳಗಿಳಿಸಿದರು. ಅಭಿಷೇಕ್ ಅವರ ತಮಾಷೆಯ ಪ್ರತಿಕ್ರಿಯೆಯು ಅವರ ಪತ್ನಿ ಐಶ್ವರ್ಯಾ ರೈ ಬಚ್ಚನ್ ಅವರನ್ನು ಸೂಕ್ಷ್ಮವಾಗಿ ಉಲ್ಲೇಖಿಸುವಂತೆ ತೋರುತ್ತಿತ್ತು.
ವಿಚ್ಛೇದನ ವಂದತಿಗೆ ಮತ್ತೊಮ್ಮೆ ಅಂತ್ಯಹಾಡಿದ ಅಭಿಷೇಕ್!
17 ವರ್ಷಗಳಿಗೂ ಹೆಚ್ಚು ಕಾಲ ದಾಂಪತ್ಯ ಜೀವನ ನಡೆಸಿರುವ ಈ ದಂಪತಿಗಳು ತಮ್ಮ ಸಂಬಂಧದ ಬಗ್ಗೆ ಆಗಾಗ್ಗೆ ಊಹಾಪೋಹಗಳನ್ನು ಎದುರಿಸುತ್ತಿದ್ದರು. ಕಳೆದ ವರ್ಷ ಅವರು ಪ್ರತ್ಯೇಕ ವಾಸ ಮಾಡುತ್ತಿದ್ದಾರೆ ಎಂದು ವರದಿಯಾಗಿದ್ದವು. ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ವಿಚ್ಛೇದನ ವಂದತಿಯನ್ನು ತಳ್ಳಿ ಹಾಕಿದ್ದರು. ಇದೀಗ ಮತ್ತೊಮ್ಮೆ ಐಶ್ವರ್ಯಾ ರೈ ಬಗ್ಗೆ ಮಾತನಾಡುತ್ತಾ ವಿಚ್ಛೇದನ ವಂದತಿಗೆ ಮತ್ತೊಮ್ಮೆ ಅಭಿಷೇಕ್ ಅಂತ್ಯಹಾಡಿದ್ದಾರೆ.(ಏಜೆನ್ಸೀಸ್)
ಚಾಹಲ್-ಧನಶ್ರೀಗೆ ವಿಚ್ಛೇದನ ಆದೇಶ ನೀಡಿದ ಮುಂಬೈ ಕೋರ್ಟ್; ಜೀವನಾಂಶ ಕೊಟ್ಟಿದ್ದೆಷ್ಟು? | Divorce