ನಾಯಕಿಯ ಗೆಳತಿಯಾಗಿ, ನಾಯಕನ ತಂಗಿಯಾಗಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಾ ಕ್ರಮೇಣ ನಾಯಕಿಯಾದವರು ಮಲಯಾಳಂ ನಟಿ ಮಮಿತಾ ಬೈಜು. ‘ಕೃಷ್ಣಂ’, ‘ಸ್ಕೂಲ್ ಡೈರಿ’, ‘ಖೋ ಖೋ’, ‘ಸೂಪರ್ ಶರಣ್ಯಾ’ ಸೇರಿ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದ ಅವರು ಇದೀಗ ದಕ್ಷಿಣ ಭಾರತದ ಅತ್ಯಂತ ಬೇಡಿಕೆಯ ನಟಿಯರ ಸಾಲಿನಲ್ಲಿ ನಿಂತಿದ್ದಾರೆ. ಅದಕ್ಕೆ ಕಾರಣವಾಗಿದ್ದು ಕಳೆದ ವರ್ಷ ತೆರೆಕಂಡ ‘ಪ್ರೇಮಲು’ ಸಿನಿಮಾ. ‘ಪ್ರೇಮಲು’ ಯಶಸ್ಸಿನ ಬಳಿಕ ಮಮಿತಾ ತಮಿಳಿನ ‘ರೆಬೆಲ್’, ತೆಲುಗಿನ ‘ಡಿಯರ್ ಕೃಷ್ಣ’ ಚಿತ್ರಗಳಲ್ಲಿ ಮಿಂಚಿದ್ದರು. ಈ ವರ್ಷ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಿದ್ದು, ಸದ್ಯ ತೆಲುಗು, ತಮಿಳಿನ ಖ್ಯಾತ ನಟರ ಜತೆ ಅಭಿನಯಿಸುತ್ತಿದ್ದಾರೆ. ವಿಜಯ್ ದಳಪತಿ ನಟನೆಯ ‘ಜನನಾಯಗನ್’ ಚಿತ್ರದಲ್ಲಿ ಮಮಿತಾ ನಟಿಸುತ್ತಿದ್ದಾರೆ. ‘ಡ್ರಾೃಗನ್’ ಬಳಿಕ ಪ್ರದೀಪ್ ರಂಗನಾಥನ್ ಹೊಸ ಚಿತ್ರಕ್ಕೆ ಅವರು ಸಹಿ ಮಾಡಿದ್ದು, ಅದು ಸದ್ಯದಲ್ಲೇ ಅನೌನ್ಸ್ ಆಗಲಿದೆ. ಈ ಮಧ್ಯೆ, ಮಮಿತಾ ಬೈಜು ತಮಿಳಿನ ಇನ್ನೊಬ್ಬ ಸ್ಟಾರ್ ನಟನಿಗೆ ನಾಯಕಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ವ್ನಿೇಶ್ ರಾಜಾ ನಿರ್ದೇಶನದ, ಧನುಷ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಮಮಿತಾ ಬೈಜು ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಮಮಿತಾ ಜತೆ ಚಿತ್ರತಂಡ ಮಾತುಕತೆ ನಡೆಸಿದ್ದು, ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ. ಹಾಗೇ ತಮಿಳಿನ ವಿಷ್ಣು ವಿಶಾಲ್ ನಟನೆಯ ‘ಇರಂದು ವಾನಾಮ್’ ಚಿತ್ರದಲ್ಲೂ ಮಮಿತಾ ನಟಿಸುತ್ತಿದ್ದಾರೆ. -ಏಜೆನ್ಸೀಸ್
ಪೋಷಕ ಪಾತ್ರದಿಂದ ಸ್ಟಾರ್ ನಾಯಕಿಯವರೆಗೆ…: ತಮಿಳು, ತೆಲುಗು ಸ್ಟಾರ್ ನಟರ ಚಿತ್ರದಲ್ಲಿ ಮಮಿತಾ ಬೈಜು

You Might Also Like
ಈ ಗುಣಗಳನ್ನು ಹೊಂದಿರುವ ಜನರು ತಮ್ಮ ಜೀವನದುದ್ದಕ್ಕೂ ಶ್ರೀಮಂತರಾಗಿರುತ್ತಾರೆ..ಯಾಕೆ ಗೊತ್ತಾ?Chanakya Niti
Chanakya Niti: ಆಚಾರ್ಯ ಚಾಣಕ್ಯ ಅವರನ್ನು ಅವರ ಕಾಲದ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದೂ ಕರೆಯಲಾಗುತ್ತದೆ.…
ಬೇಸಿಗೆಯಲ್ಲಿ ತೆಂಗಿನಕಾಯಿ ನೀರು ಅಥವಾ ಕಬ್ಬಿನ ಜ್ಯೂಸ್ ಯಾವುದು ಉತ್ತಮ! | Better In Summer
Better In Summer ; ಈ ಬಿರು ಬೇಸಿಗೆಯಲ್ಲಿ ಸಾಮಾನ್ಯವಾಗಿ ತಂಪಾದ ಅಥವಾ ಅಹ್ಲಾದಕಾರ ಆಹಾರ…
ಈ ಹಣ್ಣುಗಳನ್ನು ತಿಂದ ತಕ್ಷಣ ನೀರು ಕುಡಿಯಬೇಡಿ! ಅಕಸ್ಮಾತ್ ನೀರು ಕುಡಿದ್ರೆ ಏನಾಗುತ್ತದೆ ಗೊತ್ತಾ? Fruits
Fruits: ಕೆಲವು ಸಂದರ್ಭಗಳಲ್ಲಿ, ಕೆಲವು ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯುವುದರಿಂದ ಅತಿಸಾರದ ಅಪಾಯ ಹೆಚ್ಚಾಗುತ್ತದೆ.…